ಶಕ್ತಿನಗರ: ಇಲ್ಲಿನ ಶಕ್ತಿ ವಸತಿಯುಕ್ತ ಶಾಲೆಯ ಪೋಷಕರಿಗೆ ವಸತಿ ಹಾಗೂ ಶಾಲೆಯ ಪೂರ್ಣ ಮಾಹಿತಿ ನೀಡುವ ಕಾರ್ಯಕ್ರಮವು ದಿನಾಂಕ 25 ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು.
ಶಾಲಾ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆ ಮತ್ತು ವಸತಿನಿಲಯ ಅಂತಾರಾಷ್ಟ್ರೀಯ ಮಟ್ಟವನ್ನು ಹೊಂದಿದ್ದು ಈಜುಕೊಳ, ವಿಶಾಲ ಆಟದ ಬಯಲು, ಎಲ್ಲಾ ವಿಧದ ಆಟೋಟಗಳ ಸೌಕರ್ಯ, ನಿತ್ಯಯೋಗಾಭ್ಯಾಸ, ಧ್ಯಾನ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸೌಲಭ್ಯಗಳನ್ನು ಹೊಂದಿದೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪರಿಹಾರ ಬೋಧನಾ ತರಗತಿಗಳು, ಅತ್ಯುತ್ತಮ ವಾಚನಾಲಯ, ಪುಸ್ತಕಾಲಯ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ಈ ಶಾಲೆ ಹೊಂದಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿ ಸಂಶೋಧನಾತ್ಮಕ ಕಲಿಕೆಗೆ ವಿಶೇಷ ಒತ್ತು ನೀಡಲಾಗುವುದು, ಅನುಭವಿ ಹಾಗೂ ನುರಿತ ಶಿಕ್ಷಕರು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸದಾ ಕಲಿಕಾ ಪ್ರೇರಣೆಯನ್ನು ನೀಡಲಿದ್ದಾರೆ ಎಂದರು.
ಶಕ್ತಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಸೀಂ ಬಾನು ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ವಹಿಸಬೇಕಾದ ಕಾಳಜಿಯ ಕುರಿತಾಗಿ ವಿಶ್ಲೇಷಿಸಿದರು.
ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ., ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಶ್ರಿ ಪ್ರಭಾಕರ ಜಿ.ಎಸ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಸ್ವಾತಿ ಭರತ್ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಪ್ರಿಯಾಂಕ ರೈಕಾರ್ಯಕ್ರಮ ನಿರೂಪಿಸಿದರು.