ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಉನ್ಮಿತ ಯೋಗ ದಿನದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಯೋಗವು ಭಾರತೀಯ ಮೂಲದ್ದಾಗಿದೆ. ಪತಂಜಲಿ ಮಹರ್ಷಿಯಿಂದ ಆರಂಭವಾದ ಈ ಯೋಗ ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಇದು ಜಗತ್ತಿಗೆ ಭಾರತದ ದೊಡ್ಡ ಕೊಡುಗೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ದಿವ್ಯಜ್ಯೋತಿ ಮಾತನಾಡಿ ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿಕೇತನ್ ಹಾಗೂ ಅಕ್ಷಯ್ ಆಚಾರ್ಯ ಯೋಗದ ಹಲವಾರು ವಿಶಿಷ್ಠ ಭಂಗಿಗಳನ್ನು ಪ್ರದರ್ಶಿಸಿದರು ವಿದ್ಯಾರ್ಥಿ ತುಷಾರ್ ಎಸ್. ಯೋಗದ ಭಂಗಿಗಳ ಬಗ್ಗೆ ವಿವರಣೆ ನೀಡಿದರು.
ಪ್ರಾಂಶುಪಾಲ ಶ್ರೀ ಪ್ರಭಾಕರ ಜಿ.ಎಸ್ ಹಾಗೂ ಬೋಧಕ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.