ಮಂಗಳೂರು ಜ. 25 : ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ದಿನಾಂಕ 26-1-2020 ರಂದು ಪದವಿನಂಗಡಿಯಲ್ಲಿ ಬೆಳಗ್ಗೆ 9.30 ಕ್ಕೆ ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನೀವು ನಿಮ್ಮ ಶರೀರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಿ, ಸಂತಸ ಮತ್ತು ಮಾನಸಿಕ ನೆಮ್ಮದಿ ನಿಮ್ಮದಾಗುವುದು ಎಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾದ ಕಲ್ಪನೆ ಫಿಟ್ ಇಂಡಿಯಾ ಎಂಬುವುದು ಒಂದು ರಾಷ್ಟ್ರವ್ಯಾಪಿ ಆಂದೋಲನ, ದಿನದಲ್ಲಿ ಒಂದು ನಿಯಮಿತ ಕಾಲ ನಾವು ಯೋಗ, ಆಟೋಟಗಳು, ನಡಿಗೆ ಹಾಗೂ ದೈಹಿಕ ವ್ಯಾಯಾಮಗಳಿಗೆ ಮೀಸಲಾಗಿಟ್ಟರೆ ನಾವು ಖಂಡಿತವಾಗಿ ಸದೃಢರಾಗಿರುತ್ತೇವೆ.
ಪ್ರಧಾನಿ ನರೇಂದ್ರ ಮೋದಿಯವರು ಆಗೋಸ್ಟ್ 29, 2019 ರಂದು ಈ ಒಂದು ಆಂದೋಲನಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಶಾರೀರಿಕ ಕ್ಷಮತೆಯನ್ನು ಒಂದು ಜೀವನ ವಿಧಾನವಾಗಿ ಸ್ವೀಕರಿಸಲು ಪ್ರಧಾನಿ ಅಂದು ಕರೆ ನೀಡಿದರು.
ಆದ್ದರಿಂದ ಶಕ್ತಿ ಶಿಕ್ಷಣ ಸಂಸ್ಥೆಯು ಪ್ರಧಾನಿಯವರ ಯೋಜನೆಯನ್ನು ಮಂಗಳೂರಿನಲ್ಲಿ ಯುವ ಮನಸ್ಸುಗಳ ಮುಂದೆ ಜಾಗೃತ ಮಾಡುವ ಉದ್ದೇಶದೊಂದಿಗೆ ಪ್ಲಾಗಿಂಗ್ ಲಘು ನಡಿಗೆಯೊಂದಿಗೆ ಕಣ್ಣಿಗೆ ಕಂಡ ಕಸಗಳನ್ನು ಹೆಕ್ಕುತ್ತಾ ಹೋಗುವುದು. ಇದು ನಮ್ಮ ಸ್ವಚ್ಛ ಭಾರತ ಕಾರ್ಯಕ್ರಮದ ಒಂದು ಭಾವ. ನಮ್ಮೆಲ್ಲರ ಕನಸು ಆರೋಗ್ಯಕರ ದೇಹ, ಸ್ವಚ್ಛದೇಶ – ಈ ಎರಡೂ ಒಂದಕ್ಕೊಂದು ಪೂರಕ.
ಕಾರ್ಯಕ್ರಮವು ಬೆಳಗ್ಗೆ 9.30 ಕ್ಕೆ ಪದವಿನಂಗಡಿ ವೃತ್ತದಲ್ಲಿ ಉದ್ಘಾಟನೆಗೊಳ್ಳಲಿದೆ. ನಂತರ ಪದವಿನಂಗಡಿಯಿಂದ ಕಾವೂರು ವೃತ್ತದ ತನಕ ಕೆಐಓಸಿಲ್ ಬಡಾವಣೆ, ಮೆಸ್ಕಾಂ ಬಡಾವಣೆ, ರಸ್ತೆಗಳಲ್ಲಿ ಸೇರಿದಂತೆ ಅನೇಕ ಕಡೆ ಪ್ಲಾಗಿಂಗ್ ಮೂಲಕ ಸ್ವಚ್ಛತೆ ನಡೆಯಲಿದೆ. ಇದರ ಉದ್ಘಾಟಣೆಯನ್ನು ಶ್ರೀ ಡಿ.ವಾಸುದೇವ್ ಕಾಮತ್ ಅಧ್ಯಕ್ಷರು ವೆಂಕಟರಮಣ ದೇವಸ್ಥಾನ ಕೊಂಚಾಡಿ, ಮುಖ್ಯ ಅತಿಥಿಗಳಾಗಿ ಶ್ರೀಪತಿ ಕಲ್ಲೂರಾಯ ಹಣಕಾಸು ಅಧಿಕಾರಿ ಮಂಗಳೂರು ವಿಶ್ವವಿದ್ಯಾಲಯ, ಎಮ್.ವಿ. ಸುಬ್ಬ ರಾವ್ ಆಡಳಿತ ನಿರ್ದೇಶಕರು, ಕೆಐಓಸಿಎಲ್, ವಿದ್ಯಾನಂದ ನಿರ್ದೇಶಕರು, ಕೆಐಓಸಿಎಲ್ ಡಾ. ಭರತ್ಕುಮಾರ್ ಎಮ್. ವೈದ್ಯರು ಪದವಿನಂಗಡಿ, ರಾಮ ಮುಗರೋಡಿ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪದವಿನಂಗಡಿ, ಶ್ರೀಮತಿ ಸಂಗೀತಾ ನಾಯಕ್, ಮಹಾನಗರ ಪಾಲಿಕೆ ಸದಸ್ಯೆ, ಪದವಿನಂಗಡಿ, ಶ್ರೀ ಲೋಹಿತ್ ಅಮಿನ್, ಮಹಾನಗರ ಪಾಲಿಕೆ ಸದಸ್ಯರು ಕಾವೂರು, ಶ್ರೀಮತಿ ಗಾಯತ್ರಿ ಮಹಾನಗರ ಪಾಲಿಕೆ ಸದಸ್ಯೆ ಕಾವೂರು, ಶ್ರೀಮತಿ ಸುಮಂಗಲ ಮಹಾನಗರ ಪಾಲಿಕೆ ಸದಸ್ಯೆ ಕುಂಜತ್ತಬೈಲು, ಶ್ರೀ ಜಯನಂದ ಅಂಚನ್, ಮಹಾನಗರ ಪಾಲಿಕೆ ಸದಸ್ಯರು, ಕದ್ರಿ ಪದವು ಹಾಗೂ ಅಧ್ಯಕ್ಷತೆಯನ್ನು ಕೆ.ಸಿ ನಾಕ್ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ ಇವರು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಟ್ಟು ೨೮ ಸಂಘ ಸಂಸ್ಥೆಗಳು ಕೈ ಜೋಡಿಸಲಿದೆ.