Call Us :
+91 96860 00046
+91 9108043552
info@shakthi.edu.in

Inception of Vidya Bharathi Modules in Shakthi Group of Institutions

A two days training for the Teachers on the occasion of the Inception of Vidya Bharathi Modules was inaugurated in Shakthi campus on Tuesday 18th November 2020. Today’s scenario demands the role of a teacher as a facilitator, earlier it was thought that the future of a citizen is shaped in classrooms but now as per the expectations of New Education Policy lot of scope is provided to deliver values in order to shape an individual through the teacher, said Sri Vasanth Madhava, State Secretary, Vidya Bharathi as the inaugurator.

Vidya Bharati advocates “Indianization, nationalization and spiritualization” of education. In the areas of study that are peripheral to the core curriculum, like physical education, music, cultural education, martial art and yoga the institution works out its own curriculum.

G.R.Jagadish, the Zonal Joint Secretory, Vidya Bharathi South Mid-Zone stated that the motto of Vidya BharathiSa Vidya Ya Vimuktaye- That Is Knowledge which Liberates, holds good in all areas. The New Education Policy will provide a platform to go the extra mile to gain hands on the topic of the students choice. The journey from simple to complex is advisable.

The day begins with a prayer and this institution is the first one to keep the prayer ready much before the inauguration. It is very important to know the meaning of the Saraswathivandana, where every word has an important meaning and applicable to our day to days transaction and transformation.

The District Secretary, Sri Lokkayya was also present on this occasion. The Administrator of Shakthi Group of Institutions Dr. K.C. Naik shared his views on the inception of the Vidhya Bharathi and stressed on the significance of learning Sanskrit. He also expressed his urge and preparedness to implement the New Education Policy with immediate effect.

Ramesh K, the Chief Advisor, Sudheer M.K Principal-in-charge of Shakthi PU College, Vidya Kamath Principal Shakthi Residential School, NeemaSaxena Co-ordinator Shree Gopalkrishna Pre-School were present along with all other Teaching and Non-teaching Staffs.

Sharanappa, welcomed the gathering Rekha D Costa proposed the vote of thanks. Akshatha M.G Compered the programme and Bhavyashri introduced the Key Speaker.

ಧ್ಯಾನ, ವೈದಿಕ ಕಾರ್ಯಗಳಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲ ಮತ್ತು ಇತರ ರಾಷ್ಟ್ರಗಳಿಗೆ ಬೆಳಕು ಚೆಲ್ಲುತ್ತದೆ. ಅಂತಹ ಶ್ರೇಷ್ಠ ಸಂಸ್ಕಾರವನ್ನು ಹೊಂದಿದ ನಮ್ಮ ಪರಂಪರೆಯ, ಸಂಸ್ಕೃತಿಯ ತಳಪಾಯ ನಮ್ಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕದ ಸಹಯೋಗದೊಂದಿಗೆ ನಡೆದ ಶಿಕ್ಷಕರ ಪ್ರಶಿಕ್ಷಣ ವರ್ಗ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ವಸಂತ ಮಾಧವ್, ಪ್ರಾಂತ ಕಾರ್ಯದರ್ಶಿ ವಿದ್ಯಾ ಭಾರತಿ ಕರ್ನಾಟಕ ಇವರು ಹೇಳಿದರು.

ಭಾರತೀಯ ಸಂಸ್ಕೃತಿಯು ಪ್ರಾಚೀನವಾದುದೂ, ವಿಶ್ವಮಾನ್ಯವಾದುದು ಅದರ ಉನ್ನತಿ ನಮ್ಮ ಕೈಯಲ್ಲಿದೆ. ಭಾರತದ ಪರಂಪರೆಯನ್ನು ನಮ್ಮ ಪೂರ್ವಿಕರು ಅವರ ಆಚಾರ, ವಿಚಾರ, ಜೀವನ ಶೈಲಿ, ಜ್ಞಾನ, ಧ್ಯಾನಗಳ ಮೂಲಕ ಬಹಳ ಶ್ರೀಮಂತಗೊಳಿಸಿದ್ದಾರೆ. ಅದು ಉಳಿಯಬೇಕಾದರೆ, ಭಾರತೀಯತೆ ನಮ್ಮ ಮನೆ ಮನೆಗಳಲ್ಲೂ ಬೆಳಗಬೇಕಾದರೆ, ನಮ್ಮ ಮನೆಯ ಮಕ್ಕಳಿಗೆ ಅದರ ಅರಿವು ಮೂಡಬೇಕಿದೆ. ಆ ಅರಿವನ್ನು ಮೂಡಿಸುವುದು ವಿದ್ಯಾಭಾರತಿಯಂತಹ ಶಿಕ್ಷಣ ಸಂಸ್ಥೆಗಳು. ಶಿಕ್ಷಣ ವಿದ್ಯಾರ್ಥಿಗಳಿಗೆ ಶಿಕ್ಷಣ ಜೀವನಾಧಾರವಾಗಿರದೆ ರಾಷ್ಟ್ರ ಭಕ್ತಿ, ರಾಷ್ಟ್ರಕ್ಕಾಗಿ ತ್ಯಾಗ, ಸೇವಾ ಮನೋಭಾವವನ್ನು ಮೈಗೂಡಿಸುವಂತಿರಬೇಕು ಮತ್ತು ಜೀವನುದುದ್ದಕ್ಕೂ ದೇಶದ ಬಗ್ಗೆ ಅಭಿಮಾನ, ಗೌರವ, ತುಂಬಿ, ಇತರರಿಗೆ ಮಾದರಿಯಾಗಿರಬೇಕು ಎಂದು ಮುಖ್ಯಅತಿಥಿ ವಿದ್ಯಾ ಭಾರತೀಯ ಕ್ಷೇತ್ರಿಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್‌. ಜಗದೀಶ್ ಹೇಳಿದರು. ಮುಂದುವರೆದು ಭಾರತೀಯ ಸಂಸ್ಕಾರದಲ್ಲಿ ಪ್ರಕೃತಿ ಆರಾಧನೆ ಇದ್ದು ಪ್ರಾರ್ಥನೆಗಳು ಕೇವಲ ಬೇಡಿಕೆಗಳಾಗಿರದೆ, ಭಗವಂತನಲ್ಲಿ ಶರಣಾಗತಿಯ ಮನೋಭಾವನೆಯನ್ನು ಹೊಂದಿರಬೇಕು. ಹೊಸಶಿಕ್ಷಣ ನೀತಿಯೂ ಈ ಭಾವನೆಗಳಿಗೆ ಪೂರಕವಾಗಿದ್ದು, ಪ್ರಾರ್ಥನೆಯಲ್ಲಿ ತ್ಯಾಗ, ಸ್ನೇಹ, ಸಂಯಮಗಳಂತಹ ಗುಣಗಳನ್ನು ಬೇಡಿಕೊಳ್ಳುವ ಮೂಲಕ ಶಿಕ್ಷಣದಿಂದಲೂ ತ್ಯಾಗ, ಸ್ನೇಹ, ಸಂಯಮಗಳನ್ನು ತಿಳಿಯುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಕೆ. ಸಿ. ನಾೖಕ್‌ರವರು ಭಾರತೀಯ ವಿದ್ಯಾ ಸಂಸ್ಥೆಯ ಮೂಲಕ ನೀಡಲಾಗುವ ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಪರಿಸರ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿದೆ. ಅದರೊಂದಿಗೆ, ಇಂದಿನ ಹೊಸ ಶಿಕ್ಷಣ ನೀತಿಯನ್ನು ನಮ್ಮಲ್ಲಿ ಅಳವಡಿಸುವುದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿನ ಸವಾಲುಗಳನ್ನು ಎದುರಿಸಲು ಫಲಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಕ್ತಿ ಪ. ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್‌ ಎಂ. ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮದಲ್ಲಿ ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಸ್ತಾವನೆಯ ಮಾತುಗಳನ್ನು ನುಡಿದರು. ಅಧ್ಯಾಪಕ ಶರಣಪ್ಪ ಸ್ವಾಗತಿಸಿದರು. ಅಧ್ಯಾಪಕಿ ರೇಖಾ ಡಿ ಕೋಸ್ತಾ ವಂದಿಸಿದರು. ಅಧ್ಯಾಪಕಿ ಅಕ್ಷತ ಎಂ. ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕತೇರ ಸಿಬ್ಬಂದಿಗಳು ಭಾಗವಹಿಸಿ ಸಹಕರಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery