“Salvation has absolutely nothing to do with human merit and absolutely everything to do with divine mercy. Through salvation our past has been forgiven, our present is given meaning, and our future is secured. The word ‘impossible’ is only in the mind. And not in the heart. If we can remain in the heart, there will be no end to our progress.”QuotedN. Seetharama, Prantha Saha seva pramuk, Rashtriya Swayamsevak Sangha, Karnataka South as the key speaker, on the occasion of 159th Birth Anniversary of Swami Vivekananda and the National Youth Day held today. It becomes our humble duty to study Vivekananda, follow his principles and reminisce his contributions regularly he said.
Shakthi Pre-School, Shakthi Residential School and Shakthi PU College, Shakthinagar, Mangaluru observed the National Youth day and 159th Birth Anniversary of Swami Vivekananda on Tuesday 12th January 2021 with great sovereignty.
“Certain people are remembered forever even after many years or decades of their passing and their dedications are being raised as memories of such persons mainly because messages have been left enough for the rest of the humanity to learn from such enlightened souls” said Sanjith Naik- the Secretary of Shakthi Education Trustas the Chief Guest.
Dr. KC Naik the Administrator of Shakthi Education trust presided over the function.‘Today if there is patriotism in the Indian youth it is because of the influence and inspiration deduced from Swami Vivekananda’ he said.
Ramesh K, Chief Advisor, Prakyath Rai, Institute Development Officer, Sudheer M.K. Principal-in-charge of Shakthi PU College, Vidya Kamath, Principal, Shakthi Residential School, Neema Saxena, Co-ordinator, Shakthi Pre-School were present on this occasion.
Rekha Baikady welcomed the gathering, Poornesh P introduced the guest, Shrivara K.V. proposed the Vote of thanks, while Preethi Keekan compered the show. Sreenivas B.M. was the co-ordinator for the programme.
ವಿವೇಕಾನಂದರು ಯುವ ಜನತೆಗೆ ಸ್ಫೂರ್ತಿ – ನಾ. ಸೀತಾರಾಮ
ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಇಂದು ಆಯೋಜಿಸಲಾಗಿತ್ತು.
ಈ ಜಗತ್ತಿನಲ್ಲಿ ಅಸಾಧ್ಯ ಎನ್ನುವ ಕೆಲಸ ವಿಚಾರಗಳು ಯಾವುದೂ, ಪ್ರಯತ್ನ, ಹಠ, ಛಲದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಸ್ವಾಮಿ ವಿವೇಕಾನಂದರು ದೇಶದ ಶಕ್ತಿ, ಯುವಜನತೆಗೆ ಸ್ಪೂರ್ತಿ ಅಂತಹ ಚೇತನವನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ಮರಿಸಬೇಕು. ಇಂದಿನ ಜಾಗತಿಕ ಯುಗದಲ್ಲಿ ಜನರು ಮಾನವೀಯ ಮೌಲ್ಯಗಳನ್ನು ಮರೆತು ಬದುಕುತ್ತಿದ್ದಾರೆ. ಎಲ್ಲವೂ ಯಾಂತ್ರಿಕ ಎಲ್ಲರೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸುವ ಭರದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹಾತೊರೆಯುತ್ತಾರೆಯೇ ಹೊರೆತು ಅವರಲ್ಲಿ ಧೈರ್ಯ, ಆತ್ಮಸ್ಥೈರ್ಯ ಮೊದಲಾದ ಗುಣಗಳನ್ನು ನೀಡಲು ವಿಫಲರಾಗುತ್ತಿದ್ದಾರೆ. ಯುವ ಶಕ್ತಿ ದೇಶದ ಆಸ್ತಿ ಆದುದರಿಂದ ನಾವೆಲ್ಲರೂ ನಮ್ಮೊಳಗಿನ ವಿವೇಕವನ್ನು ಎಚ್ಚರಿಸಿ, ವಿವೇಕಾನಂದರ ಚಿಂತನೆಗಳನ್ನು ಓದಿ ತಿಳಿದು ಅದರಂತೆ ಬದುಕೋಣ ಎಂದು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ೧೫೯ನೇ ರಾಷ್ಟ್ರೀಯ ಯುವದಿನಾಚರಣೆಯ ಉದ್ಘಾಟಕರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ, ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖರಾದ ನಾ ಸೀತಾರಾಮ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜಿತ್ ನಾೖಕ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಯುವ ಜನತೆಗೆ ಸ್ವಾಮಿ ವಿವೇಕಾನಂದರು ಪ್ರೇರಿತ ಶಕ್ತಿ, ರಾಷ್ಟ್ರೀಯತೆ, ಸ್ವಾಭಿಮಾನ, ಬದುಕಿನ ಕುರಿತು ಅವರ ವಿಚಾರಗಳನ್ನು ಕೇವಲ ಯುವ ಜನತೆ ಮಾತ್ರವಲ್ಲ ಎಲ್ಲರೂ ಓದಿ ತಿಳಿಯಬೇಕು. ಈ ರೀತಿಯಾಗಿ ಮನುಷ್ಯನ ಬದುಕಿನ ಪ್ರತಿಯೊಂದು ಆಯಾಮಗಳಿಗೂ ವಿವೇಕವಾಣಿ ಬೆಳಕು ಚೆಲ್ಲಲಿ ಎಂದು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾೖಕ್ರವರು ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಹರಡಿ, ಅವರ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಧೀಮಂತ ವ್ಯಕ್ತಿ . ಇಂದಿನ ಯುವ ಪೀಳಿಗೆಯ ಕೆಚ್ಚೆದೆಯಲ್ಲಿ ತಾಯಿ ಭಾರತ ಮಾತೆಯ ಬಗ್ಗೆ ಭಕ್ತಿ, ಗೌರವ ಭಾವ ಇದೆಯೆಂದಾದರೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ಆದರ್ಶ ನುಡಿಗಳೇ ಪ್ರೇರಣೆ ಎಂದರು.
ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಸಲಹೆಗಾರರಾದ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಗೋಪಾಲಕೃಷ್ಣ ಪೂರ್ವ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಮ್. ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಹಾಗೂ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಪ್ರೀತಿ ಕೀಕನ್ ನಿರೂಪಿಸಿದರು, ರೇಖಾ ಬಿ. ಬೈಕಾಡಿ ಸ್ವಾಗತಿಸಿದರು. ಶಿಕ್ಷಕ ಶ್ರೀವರ ವಂದಿಸಿದರು.