Shakthi Pre-School, Shakthi Residential School and Shakthi PU College, Shakthinagar, Mangaluru in collaboration with KIOCL displayed the 5th show of the Month’s long street play-An awareness on Corona on 26thJanuary at KIOCL Township, Kavoor Mangaluru.
The Faculty of Shakthi Group of Institutions came forward with a unique way of depicting all new experiences and the trauma that people and the frontline workers have undergone during this pandemic through a street play. The Health Club of Shakthi Residential School provided a platform for this project and was inaugurated by Dr. Ashok H, the Nodal Officer for COVID 19, D.K.Dist for the second consecutive time. Speaking on this occasion he appreciated the task of the teachers and the precautions taken to present the same to the general public with utmost care. SMS Protocol (Social Distancing, Mask and Sanitizers) when followed or used accurately will definitely subside the risk he stated.
The Chairman and Managing Director of KIOCL Sri M.V.Subba Rao was the Chief Guest. He mentioned that the team work is very important to influence our living and our fight against the corona virus. He appreciated the care taken by the faculty in presenting themselves following all protocols.
K.V.Bhaskar Reddy,Director Production and Projects inaugurated the show by releasing the tri colour balloons into the sky. A.V.S Bhat, GM I/C Mangaluru, Dasappa Shetty, GM I/C BFU, Ramakrishna Rao, GM (Prod) of KIOCL, Dr. K.C.Naik, Administrator Shakthi Education Trust, Sanjith Naik, Secretary, Shakthi Education Trust were the Guests of Honour.
Ramesh K, Chief Advisor, Prakyath Rai, Institute Development Officer, Shakthi Education Trust were present on this occasion.
The residents of the KIOCL Township appreciated the efforts of the teachers. Sharanappa, Kannada Teacher is the script writer and Director of the play. Muralidhar Kamath has provided assistance in Music and Direction.Vidya Kamath G, Principal Shakthi Residential School welcomed the gathering and Neema Saxena, Co-ordinator of Shakthi Pre-School proposed the Vote of thanks. Swathi Bharath compered the show.
ಕೆಐಓಸಿಎಲ್ (KIOCL) ಸಹಯೋಗದೊಂದಿಗೆ ಶಕ್ತಿ ಶಿಕ್ಷಣ ಸಂಸ್ಥೆಯಿಂದ ಕಿಲ್ಲರ್ ಕೊರೋನಾ ಬೀದಿ ನಾಟಕದ ಸಮಾರೋಪ
ಮಂಗಳೂರು ಜ. 27 : ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜ್ ಶಕ್ತಿನಗರದ ಅಧ್ಯಾಪಕರು ಕಿಲ್ಲರ್ ಕೊರೋನಾ ಬೀದಿ ನಾಟಕವನ್ನು ಕೆಐಓಸಿಎಲ್‌ನ ಸಹಯೋಗದೊಂದಿಗೆಕಾವೂರಿನ ಕೆಐಓಸಿಎಲ್ ಟೌನ್‌ಶಿಪ್‌ನ್ನು ಜನವರಿ 26 ರಂದು ಆಯೋಜಿಸಲಾಯಿತು.
ಶಕ್ತಿ ಶಿಕ್ಷಣ ಸಂಸ್ಥೆಯ ಅಧ್ಯಾಪಕರು ಸಾಂಕ್ರಾಮಿಕ ಸಮಯದಲ್ಲಿ ಜನರು ಮತ್ತು ಕಾರ್ಮಿಕರು ಅನುಭವಿಸಿದ ಅಘಾತವನ್ನು ಚಿತ್ರಿಸುವ ವಿಶಿಷ್ಟ ವಿಧಾನವನ್ನು ಪರಿಚಯಿಸಿದರು. ಶಕ್ತಿ ವಸತಿ ಶಾಲೆಯ ಆರೋಗ್ಯ ಕ್ಲಬ್ ಈ ಯೋಜನೆಗೆ ಒಂದು ವೇದಿಕೆಯನ್ನು ಒದಗಿಸಿತು. ಕೋವಿಡ್ 19 ರ ದ.ಕ. ಜಿಲ್ಲಾ ನೋಡಲ್ ಅಧಿಕಾರಿ ಡಾ. ಅಶೋಕ ಎಚ್. ಈ ಬೀದಿ ನಾಟಕದ ಉದ್ಘಾಟನೆಯನ್ನು ನೆರೆವೇರಿಸಿದರು. ನಂತರ ಮಾತನಾಡಿದ ಅವರು ಶಕ್ತಿ ಶಿಕ್ಷಣ ಸಂಸ್ಥೆಯ ಶಿಕ್ಷಕರ ಕಾರ್ಯವನ್ನು ಶ್ಲಾಘಿಸುತ್ತಾ ಕೊರೋನಾ ಜಾಗೃತಿಯ ಮೂಲಕ ಸಾರ್ವಜನಿಕರನ್ನು ಎಚ್ಚರಿಸುತ್ತಿರುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಎಮ್‌ಎಸ್ (SMS) ಪ್ರೊಟೊಕಾಲ್ (ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳು) ಅನುಸರಿಸಿದಾಗ ಅಥವಾ ಅದನ್ನು ಬಳಸಿದಾಗ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ಕೆಐಓಸಿಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ.ವಿ ಸುಬ್ಬಾರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಮ್ಮಜೀವನ ಮತ್ತು ಕೊರೋನಾ ವೈರಸ್ ವಿರುದ್ಧದ ಹೋರಾಟದ ಮೇಲೆ ಪ್ರಭಾವ ಬೀರಲು ತಂಡದ ಮೂಲಕ ಮಾಡುವ ಕೆಲಸ ಬಹಳ ಮುಖ್ಯ ಎಂದು ಹೇಳಿದರು. ಎಲ್ಲಾ ಪ್ರೋಟೊಕಾಲ್‌ಗಳನ್ನು ಅನುಸರಿಸಿ ತಮ್ಮನ್ನು ಪ್ರಸ್ತುತ ಪಡಿಸುವಲ್ಲಿ ಅಧ್ಯಾಪಕರು ವಹಿಸಿರುವ ಕಾಳಜಿಯನ್ನು ಶ್ಲಾಘಿಸಿದರು. ಉತ್ಪಾದನೆ ಮತ್ತು ಯೋಜನೆಗಳ ನಿರ್ದೇಶಕ ಕೆ.ವಿ ಭಾಸಕರ ರೆಡ್ಡಿ, GM I/C ನ ಎ.ವಿ.ಎಸ್ ಭಟ್, GM I/C ದಾಸಪ್ಪ ಶೆಟ್ಟಿ, ರಾಮಕೃಷ್ಣರಾವ್, ಕೆಐಓಸಿಎಲ್ ಜಿ.ಎಂ (ಉತ್ಪನ್ನ), ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್, ಕಾರ್ಯದರ್ಶಿ ಸಂಜಿತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು. KIOCL ಟೌನ್‌ಶಿಪ್‌ನ ನಿವಾಸಿಗಳ ಹಾಗೂ ಶಿಕ್ಷಕರ ಪ್ರಯತ್ನವನ್ನು ಶ್ಲಾಘಿಸಿದರು. ಶರಣಪ್ಪ, ಕನ್ನಡ ಶಿಕ್ಷಕರು ಇವರು ಈ ನಾಟಕಕ್ಕೆ ನಿರ್ದೇಶನ ಮುರಳೀಧರ್ ಕಾಮತ್ ಸಂಗೀತ ನಿರ್ದೇಶಕರಾಗಿ ನೆರವು ನೀಡಿದ್ದಾರೆ. ಈ ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಧನ್ಯವಾದವನ್ನು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಸಮರ್ಪಿಸಿದರು. ಅಧ್ಯಾಪಕಿ ಸ್ವಾತಿ ಭರತ್ ನಿರೂಪಿಸಿದರು.