Shakthi Pre-University College, Shakthi Residential School and Shakthi Pre-School hosts an Inter School District Level Shakthi Kalanidhi Drawing Contest
An Inter School District Level Shakthi Kalanidhi Drawing Contest Poster was released at Shakthi Residential School today. The competition will be inaugurated by Sri Harish Shetty, HOD Electronics and Communication Department at the Women’s Polytechnic, Bondel, Mangaluru on Monday 8th March 2021 at 8.30 am. It is believed that the competition would serve as a booster to the art loving kids of this District, post pandemic.
This competition will be held in 5 sub categories under Junior and senior categories. The contest is open to kids from KG to 10th standard. Best Entry in each category will bag a cash prize of Rs. 750, a gift hamper from Itsy Bitsy, a certificate and a memento. So also the top 3 places will win a cash prize of 3000, 2000 and 1000 along with the top mentioned incentives. Saguna C.Naik, Governing Council Member, Shakthi Group of Institutions, P.L.Dharma Registrar (Evaluation) Mangalore University are the Chief Guests. Dr. K.C Naik Administrator will preside over the function. Sri Dayananda, Senior Art Teacher of Daya Arts will be felicitated on this occasion. Campco India Ltd. NMPT and Itsy Bitsy are the sponsors for this event. Selected Paintings of the students of Mahalasa Art School will be exhibited during this contest too. For those who failed to register online can opt for spot entry too said the Chief Advisor Ramesh K.
ಶಕ್ತಿ ವಿದ್ಯಾ ಸಂಸ್ಥೆಯಿಂದ ಆಯೋಜಿಸಲಾಗಿರುವ ಶಕ್ತಿ ಕಲಾನಿಧಿ ಜಿಲ್ಲಾ ಮಟ್ಟದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯ ಭಿತ್ತಿ ಪತ್ರ ಬಿಡುಗಡೆ
ಮಂಗಳೂರು ಮಾ. 06 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನ ವತಿಯಿಂದ ದಿನಾಂಕ 8-3-2021 ರಂದು ಬೆಳಗ್ಗೆ 8.45 ಕ್ಕೆ ಶಕ್ತಿ ಕಲಾನಿಧಿ ಜಿಲ್ಲಾ ಮಟ್ಟದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯ ಉದ್ಘಾಟಣೆಯು ನಡೆಯಲಿದೆ. ಈ ಕುರಿತಂತೆ ಇಂದು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಉದ್ಘಾಟಣೆಯನ್ನು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನ ಇಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮುಖ್ಯಸ್ಥರಾದ ಹರೀಶ್ ಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸ್ಥೆಯ ಆಡಳಿತ ಸಮಿತಿ ಸದಸ್ಯೆ ಸಗುಣ ಸಿ. ನಾೖಕ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್ ವಹಿಸಲಿದ್ದಾರೆ.
ಅಂದು ಮದ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಪಿ.ಎಲ್. ಧರ್ಮ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಚಿತ್ರಕಲಾ ಶಿಕ್ಷಕರು ಹಾಗೂ ದಯಾ ಆರ್ಟ್ನ ಮುಖ್ಯಸ್ಥರಾದ ದಯಾನಂದ ಬಿ. ಇವರಿಗೆ ಸನ್ಮಾನ ನಡೆಯಲಿದೆ.
ಈ ಸಂದರ್ಭದಲ್ಲಿ ಮಹಾಲಸ ಚಿತ್ರಕಲಾ ವಿದ್ಯಾಲಯದ ವಿದ್ಯಾರ್ಥಿಗಳ ಆಯ್ದ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆಯ ತಯಾರಿ :
ಜಿಲ್ಲೆಯ ಎಲ್ಲಾ ಶಾಲೆಯ ಚಿತ್ರಕಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಎಲ್.ಕೆ.ಜಿಯಿಂದ 10 ನೇ ತರಗತಿಯವರೆಗೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಸ್ಪರ್ಧೆಯು 5 ವಿಭಾಗಗಳಲ್ಲಿ ನಡೆಯಲಿದೆ. ಭಾಗವಹಿಸಿ ಪ್ರಥಮಬಹುಮಾನ ಪಡೆದ ವಿದ್ಯಾರ್ಥಿಗೆ ರೂ. 3000 ಹಾಗೂ ಪ್ರಶಸ್ತಿ ಪತ್ರ, 2ನೇ ಬಹುಮಾನ ರೂ. 2000 ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನ ರೂ. 1000 ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಉತ್ತಮ ಕಲೆಗೆ 750 ರಂತೆ ಎಲ್ಲಾ ವಿಭಾಗಗಳಿಗೂ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.
ಸ್ಥಳದಲ್ಲಿಯೇ ನೋಂದಾವಣೆಗೆ ಅವಕಾಶ
ಯಾರಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಲು ಸಾಧ್ಯವಾಗಿಲ್ಲ ಅವರು ಕಾರ್ಯಕ್ರಮದ ದಿವಸವೇ ಸ್ಥಳದಲ್ಲಿಯೇ ನೋಂದಾಯಿಸುವ ಅವಕಾಶ ಕಲ್ಪಸಲಾಗಿದೆ.
ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯ ಬಿತ್ತಿಪತ್ರದ ಬಿಡುಗಡೆ
ಶಕ್ತಿ ಕಲಾನಿಧಿಯ ಮೂಲಕ ಮಕ್ಕಳಿರುವ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮದ ಕುರಿತಂತೆ ಸಮಗ್ರ ಮಾಹಿತಿ ನೀಡುವ ಬಿತ್ತಿ ಪತ್ರವನ್ನು ಇಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಸುಧೀರ್ ಎಂ.ಕೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ವಿದ್ಯಾಜಿ.ಕಾಮತ್ ಮತ್ತು ಸಂಯೋಜಕರಾದ ಪೂರ್ಣೇಶ ಉಪಸ್ಥಿತರಿದ್ದರು.