‘Nature is the best inspiration in all walks of Life. Nature is a miracle we depend upon. Relishing the beauty of nature and fabricating the same through creativity is an art. By constant interaction with nature, a child can create an art from his imagination and this would lead to his intellectual development and make way for Research said Sri Harish Shetty, HOD Electronics and Communication Department at the Women’s Polytechnic, Bondel, Mangaluru on Monday 8th March 2021 inaugurating the Inter School District Level Shakthi Kalanidhi Drawing Contest at Shakthi Residential School.
He said that this competition would serve as a booster to the art loving kids of this District and help in bringing out the hidden talent of youngsters. Competition in life is essential for the all-round development of a child. The challenges faced during winning and losing gives us a lesson for life he added.
This competition is held in 5 sub categories under Junior and senior categories. The contest is open to kids from KG to 10th standard. Best Entry in each category will bag a cash prize of Rs. 750, a gift hamper from Itsy Bitsy, a certificate and a memento. So also the top 3 places will win a cash prize of 3000, 2000 and 1000 along with the top mentioned incentives.
Saguna C.Naik, Governing Council Member, Shakthi Group of Institutions was the Chief Guest.Dr.K.C.Naik, the Administrator, Ramesh K, Chief Advisor, Institute Development Officer Prakyath Rai, Sudheer M.K Principal-in-charge Shakthi PU College, Vidya Kamath G Principal Shakthi Residential School, Poornesh P, Co-ordinatorof Shakthi Kalanidhi Contest, all staff and students were present on this occasion.
Selected Paintings of the students of Mahalasa Art School was exhibited during this contest.
Mrs. Neema Saxena, Co-ordinator of Shakthi Pre-school proposed the welcome address While Premalatha Hindi Teacher proposed the vote of thanks. Deepthi, Rekha DCosta and Bhavya Amin briefed with the rules and regulations of the contest. Computer Instructor compered the show.
ಕಲ್ಪನೆಯ ಮೂಲಕ ಚಿತ್ರಕಲೆಯು ಅನಾವರಣಗೊಳ್ಳುತ್ತದೆ – ಹರೀಶ್ ಶೆಟ್ಟಿ
ಮಂಗಳೂರು ಮಾ. 8 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನ ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾಮಟ್ಟದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯನ್ನು ದೀಪ ಬೆಳಗಿಸುವುದರ ಮೂಲಕ ಮಂಗಳೂರಿನ ಮಹಿಳಾ ಪಾಲಿಟೆಕ್ನಿಕ್ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ ಮುಖ್ಯಸ್ಥರಾದ ಹರೀಶ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿದಿನ ಸೂರ್ಯೋದಯವಾಗುತ್ತದೆ. ಇದನ್ನು ಕಲ್ಪನೆಯಾಗಿಟ್ಟುಕೊಂಡು ಇದರ ಚಿತ್ರವನ್ನು ಬರೆಯುವುದು ಒಂದು ಕಲೆಯಾಗಿದೆ. ಮನುಷ್ಯನ ಬದುಕಿನ ಪ್ರತಿಯೊಂದು ಚಟುವಟಿಕೆಗೂ ಪ್ರಕೃತಿಯೇ ಸ್ಪೂರ್ತಿ. ಪ್ರಕೃತಿಯ ಸೌಂದರ್ಯವನ್ನು ಕಂಡು ಅದರ ಪ್ರತಿಕೃತಿಯನ್ನು ರಚಿಸುವುದರ ಮೂಲಕ ಕಲ್ಪನೆಯನ್ನು ಹೊರತರುವ ಪ್ರಯತ್ನವನ್ನು ಚಿತ್ರಕಲಾ ವಿದ್ಯಾರ್ಥಿಗಳು ಮಾಡಬೇಕೆಂದು ಅವರು ಕರೆ ನೀಡಿದರು. ಮಾನವನ ಬುದ್ಧಿಶಕ್ತಿಯು ಮುಂದೆ ಹಲವಾರು ಜ್ಞಾನ, ಆವಿಷ್ಕಾರಗಳಿಗೆ ಪ್ರೇರಣೆಯಾಗಬೇಕು.
ಮುಂದುವರೆದು ಮಾತನಾಡಿದ ಅವರು ಸ್ಪರ್ಧೆಯು ಮನುಷ್ಯನಿಗೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತದೆ. ಸ್ಪರ್ಧೆಯಲ್ಲಿನ ಸೋಲು-ಗೆಲುವುಗಳು ನಮಗೆ ಸವಾಲುಗಳನ್ನು ಎದುರಿಸುವ ಪಾಠ ಕಲಿಸುತ್ತದೆ ಎಂದು ಹೇಳಿದರು.
ಈ ಮೂಲಕ ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಲ್ಲಿ ಮಹತ್ತರವಾದ ಹೆಜ್ಜೆಯನ್ನು ಮುಂದಿಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಯಾದ ಶ್ರೀಮತಿ ಸಗುಣ ಸಿ. ನಾೖಕ್ ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್ ವಹಿಸಿದರು. ಪ್ರಾಸ್ತಾವಿಕವಾಗಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಸುದೀರ್ ಎಂ.ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ, ವಂದನಾರ್ಪಣೆಯನ್ನು ಅಧ್ಯಾಪಕಿ ಪ್ರೇಮಲತಾ ಹಾಗೂ ಕು. ದೀಪ್ತಿ ನಿರೂಪಣೆಯನ್ನು ಮಾಡಿದರು.