‘Children are the nation’s most valuable resource and it is the best hope for future. We owe our children a life free from violence and fear. The session on Child’s Right and awareness on POCSO Act is a momentary one and every child has the right to know it’ said Dr. Paul G. Aquinas Chairman, Social Work Department, Mangaluru as the Chief Guest on the occasion of the collaborative programme hosted at Shakthi Residential School by the Department of Post Graduate studies and Research in Social Work, Mangalore University.
Ramesh K, the Chief Advisor of Shakthi Education Trust inaugurated the function by lighting the lamp.
Dr. Yashaswini Battangaya, Assistant Professor, Social Work Department, Mangalore University spoke on the need for protection of the children and other vulnerable groups of the society. She also highlighted the importance of the knowledge of legal rights for them.
Childhood is priceless and the children have the right to make it a memorable one. With an awareness of their rights and a little knowledge of Self-defence any individual can fight back any form of abuse, harassment or exploitation. The School provides a platform for martial arts and self defense techniques with the intention that the child should have a pleasant childhood said Vidya Kamath G, Principal Shakthi Residential School, Shakthinagar, Mangaluru in her Presidential address.
Mr.Deekshith, Centre Co-ordinator, Childline Dakshina Kannada and Asuntha Dsouza, Team Member, Childline D.K.District educated children quoting their experiences and also with the help of a presentation. Child abuse, Child Marriage and also human trafficking were the topics discussed and the aftermath of this was made known to the children by them.
Adithya P proposed the Welcome address and Vote of thanks while Akshatha S was the Master of ceremony. Prof. Durgesh Bailoor, all staff and students were present on this occasion.
ಶಕ್ತಿ ವಸತಿ ಶಾಲೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹಾಗೂ ಪೊಕ್ಸೊ ಕಾಯ್ದೆ ಕುರಿತು ಒಂದು ದಿನದ ಸೆಮಿನಾರ್
ಶಕ್ತಿನಗರದ ಶಕ್ತಿ ವಸತಿ ಶಾಲೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯದ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹಾಗೂ ಪೊಕ್ಸೊ ಕಾಯ್ದೆ ಕುರಿತು ಒಂದು ದಿನದ ಸೆಮಿನಾರನ್ನು ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಡಾ. ಪೌಲ್.ಜಿ. ಆಕ್ವಿನಾಸ್ ಮಾತನಾಡಿ ಮಕ್ಕಳು ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲ ಮತ್ತು ಇವರು ಭವಿಷ್ಯದ ಶಕ್ತಿ. ಮಕ್ಕಳ ಜೀವನವು ಭಯ ಮತ್ತು ಹಿಂಸೆಯಿಂದ ಮುಕ್ತವಾಗಬೇಕೆಂದು ಹೇಳಿದರು. ಮಕ್ಕಳ ಹಕ್ಕು ಮತ್ತು ಪೊಕ್ಸೊ ಕಾಯ್ದೆಯ ಜಾಗೃತಿ ಕುರಿತ ಸೆಮಿನಾರ್ ಅವಶ್ಯವಾದುದು. ಇವರ ಹಕ್ಕುಗಳ ಕುರಿತಂತೆ ಪ್ರತಿ ಮಗುವು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಮಂಗಳೂರು ವಿವಿಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಯಶಸ್ವಿನಿ ಬಟ್ಟಂಗಯ ಅವರು ಸಮಾಜದ ಮಕ್ಕಳು ಮತ್ತು ಇತರ ದುರ್ಬಲ ಗುಂಪುಗಳ ರಕ್ಷಣೆಯ ಅಗತ್ಯತೆಯ ಕುರಿತು ಮಾತನಾಡಿದರು. ಅವರಿಗೆ ಕಾನೂನು ಹಕ್ಕುಗಳ ಜ್ಞಾನದ ಮಹತ್ವವನ್ನು ಮನವರಿಕೆ ಮಾಡುವುದು ಒಳಿತು ಎಂದು ತಿಳಿಸಿದರು.
ಬಾಲ್ಯ ಜೀವನವು ಅಮೂಲ್ಯವಾದುದು ಅದನ್ನು ಸದಾ ಸ್ಮರಿಸುವುದು ಮಕ್ಕಳ ಹಕ್ಕು. ಅವರ ಹಕ್ಕುಗಳ ಕುರಿತಂತೆ ಅರಿವು ಇದ್ದಲ್ಲಿ ಆತ್ಮರಕ್ಷಣೆ, ವ್ಯಕ್ತಿಯು ನೀಡುವ ಯಾವುದೇ ರೀತಿಯ ನಿಂದನೆ, ಕಿರುಕುಳ ಅಥವಾ ಶೋಷಣೆಯ ವಿರುದ್ಧ ಹೋರಾಡಬಹುದು.
ಮಗುವಿಗೆ ಆಹ್ಲಾದಕರ ಬಾಲ್ಯವಿರಬೇಕು ಎಂಬ ಉದ್ದೇಶದಿಂದ ಶಾಲೆಯು ಸಮರ ಕಲೆಗಳು ಮತ್ತು ಸ್ವ-ರಕ್ಷಣೆಗೋಸ್ಕರ ಕರಾಟೆಯಂತಹ ತರಭೇತಿಯನ್ನು ನೀಡುತ್ತಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಹೇಳಿದರು.
ಚೈಲ್ಡ್ ಲೈನ್ ಕೇಂದ್ರದ ಸಂಯೋಜಕರಾದ ಶ್ರೀ ದೀಕ್ಷಿತ್ ಮತ್ತು ಚೈಲ್ಡ್ ಲೈನ್ ದಕ್ಷಿಣ ಕನ್ನಡ ಸದಸ್ಯೆ ಅಸುಂತಾ ಡಿಸೋಜ ಅವರು ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಗಣೆ ಕುರಿತಂತೆ ಮಾಹಿತಿ ನೀಡಿದರು. ಇಂತಹ ಅನುಭವಗಳು ನಮ್ಮ ವಿದ್ಯಾರ್ಥಿಗಳಲ್ಲಿ ಬಂದಲ್ಲಿ 1098 ಸಂಖ್ಯೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಮಂಗಳೂರು ವಿವಿ ಸಮಾಜ ಕಾರ್ಯ ವಿದ್ಯಾರ್ಥಿನಿ ಆದಿತ್ಯ ಪಿ., ಧನ್ಯವಾದವನ್ನು ಅಕ್ಷತ ಎಸ್ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಪ್ರೊ. ದುರ್ಗೇಶ ಬೈಲೂರು, ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.