“The possession of self-discipline enables one to choose, and then persevere with actions, thoughts and behaviour, that lead to improvement and success. It also gives the power and inner strength to do what one wishes.Kabbadi the Game of the Masses because of its simplicity and public appeal is a game of discipline. Along with the studies one can excel in sports with involvement and extraordinary efforts. Every year at least one or two students must qualify to represent the state from Shakthi PU College aspired Sri Purushottam Poojary, Secretary of D.K. Amateur Kabbadi Association and wished success to all the 100 participants speaking on the inauguration of the Kabbadi selection process at Reshma Memorial Auditorium in Shakthi Campus.
Prof. T.Rajaram Rao, Principal of Shakthi PU College briefed about the concept of appreciating and encouraging sports talent through free education and free training in Kabbadi at Shakthi. “Let the best talent get selected and further strive to represent at the state and the National level and bring name and fame to themselves and the institution. Winning and losing is a part of the game and a lesson for the life, so accept the result with the right spirit” he said in his Presidential address.
Sri Aakash, Physical Director of Shakthi PU College and the Kabbadi coach briefed the procedure of selection and conducted the process. “Footwork, setting path of attack, tactics and necessary skills along with retreat are the criterias for the selection” he quoted. Our Staff Surekha, Rajesh Kharvi, Harshith and Shivaprasad assisted.
Dr.K.C.Naik, Administrator, Ramesh K, Chief Advisor, Prakyath Rai, Institute Development Officer, Vidya Kamath G, Principal Shakthi Residential School and all staff were present on this occasion.
Shrivara, Lecturer in Sanskrit invoked the blessings of the almighty, Divya Jyothi, Lecturer in Business Studies welcomed the gathering and Preethi Keekan, Lecturer in Economics proposed the vote of thanks. Shilpa, Lecturer in Commerce was the Master of Ceremony.
ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಕಬಡ್ಡಿಯ ಆಯ್ಕೆ ಪ್ರಕ್ರಿಯೆ
ಮಂಗಳೂರು ಜು. 31 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶ ಪಡೆಯಲು ಕಬಡ್ಡಿಯ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ದ.ಕ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವಯಂ ಶಿಸ್ತನ್ನು ಹೊಂದಿದ್ದರೆ ನಾವು ನಮ್ಮ ಯಶಸ್ಸಿಗೆ ಕಾರಣವಾಗುತ್ತೇವೆ. ನಮ್ಮ ಆಲೋಚನೆಗಳು ಮತ್ತು ನಡವಳಿಕೆಗಳು ಹಾಗೂ ಪರಿಶ್ರಮವು ನಮಗೆ ಸರಿಯಾದ ಪ್ರತಿಫಲವನ್ನು ನೀಡುತ್ತದೆ. ಕಬಡ್ಡಿ ಆಟದಿಂದ ಶಕ್ತಿ ಮತ್ತು ಆಂತರಿಕ ಶಕ್ತಿ ಹೊಂದಲು ಕಬಡ್ಡಿ ಆಟಗಾರರಿಗೆ ಅನುಕೂಲವಾಗುತ್ತದೆ. ಸರಳತೆ ಮತ್ತು ಸಾರ್ವಜನಿಕ ಆಕರ್ಷಣೆಯಿಂದಾಗಿ ಕಬಡ್ಡಿ ಆಟವು ಜನಸಾಮಾನ್ಯರ ಶಿಸ್ತಿನ ಆಟವಾಗಿದೆ. ಅಧ್ಯಯನದ ಜೊತೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಅಸಾಧಾರಣ ಪ್ರಯತ್ನಗಳಿಂದ ಉತ್ತಮ ಸಾಧನೆ ಮಾಡಬಹುದು. ಪ್ರತಿ ವರ್ಷ ಕನಿಷ್ಠ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿಗಳು ಶಕ್ತಿ ಪಪೂ ಕಾಲೇಜಿನಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಲು ಅರ್ಹರಾಗಿರಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜರಾಮ್ ರಾವ್ ಅವರು ಶಕ್ತಿ ಶಿಕ್ಷಣ ಸಂಸ್ಥೆಯು ಕಬಡ್ಡಿಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ತರಬೇತಿಯನ್ನು ನೀಡುವ ಕುರಿತಂತೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಸಂಸ್ಥೆಯ ತೀರ್ಮಾನವನ್ನು ಪ್ರಶಂಸಿದರು. ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವುದರ ಜೊತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ತರುವುದರ ಮೂಲಕ ಶಕ್ತಿ ವಿದ್ಯಾ ಸಂಸ್ಥೆಯ ಕಲ್ಪನೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಗೆಲುವು ಮತ್ತು ಸೋಲು ಆಟದ ಒಂದು ಭಾಗ ಮತ್ತು ಜೀವನಕ್ಕೆ ಒಂದು ಪಾಠ, ಆದ್ದರಿಂದ ಫಲಿತಾಂಶವನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಿ ಎಂದು ಅವರು ಹೇಳಿದರು.
ಶಕ್ತಿ ಪ ಪೂ ಕಾಲೇಜಿನ ದೈಹಿಕ ನಿರ್ದೇಶಕರು ಮತ್ತು ಕಬಡ್ಡಿ ತರಬೇತುದಾರರಾದ ಆಕಾಶ್ ಶೆಟ್ಟಿ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಬಡ್ಡಿಯು ನಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ದಾಳಿಯ ಮಾರ್ಗವನ್ನು ನೋಡಿ ಅವರನ್ನು ಹಿಮ್ಮೆಟ್ಟುವಿಕೆಯ ಅಗತ್ಯ ಕೌಶಲ್ಯವನ್ನು ಮಾನದಂಡವಾಗಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ಒಟ್ಟು ರಾಜ್ಯದ ವಿವಿಧ ಜಿಲ್ಲೆಗಳ 100 ಕ್ಕೂ ಅಧಿಕ ಕಬಡ್ಡಿ ಪ್ರತಿಭೆಗಳು ಭಾಗವಹಿಸಿದರು. ದೈಹಿಕ ಶಿಕ್ಷಕಿ ಸುರೇಖಾ, ರಾಜೇಶ್ ಖಾರ್ವಿ, ಹರ್ಷಿತ್, ಪ್ರಕಾಶ್ ಮತ್ತು ಶಿವಪ್ರಸಾದ್ ತಂಡಕ್ಕೆ ಸಹಕಾರವನ್ನು ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಕೃತ ಅಧ್ಯಾಪಕರಾದ ಶ್ರೀವರ ಪ್ರಾರ್ಥಿಸಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಿಲ್ಪಾ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯ ಜ್ಯೋತಿ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಪ್ರೀತಿ ಕೀಕನ್ ವಂದಿಸಿದರು.