Mangaluru, 18.02.2022 : “Yoga has become global and accepted worldwide. The contributions of our country to this field is enormous. All Schools need to implement yoga as a part of their curriculum, the physical and mental growth to the full potential could be achieved then” said Dr. K.C. Naik, Administrator Shakthi Education Trust inaugurating the 2 days yoga session organized at Reshma Memorial Auditorium in the Shakthi Campus by Samvit.
Speaking on this occasion, the implementation Officer of Samvit Sri Manjunath Shinde said “ With an intention to make necessary changes and improvement in the Indian Education System, Samvit came into existence in 2017. It is a non-profitable organization that involves a lot of research work, willing to extend its network to numerous other educational institutions that aspire to progress.
“In the present scenario there is a need for yoga for the all round development of a child. The ancient Gurukul system was conducive for such growth and the Guru occupied a respectful status. Today, there is a need to reinforce such system to strengthen their mindset and direct the student towards becoming a beneficial citizen of this nation. With the implementation of yoga in the curriculum students will receive value based education and Samvit has taken the initiative ” said PrathviRaj, Principal of Shakthi PU College in his Presidential Address.
Lokayya D the DK District President of Vidya Bharathi shared the intention of spreading Indian Education System all over India. He asked the participants to utilise the knowledge gained in the two days training in their respective schools. Ramesh k, the District Secretary of Vidya Bharathi and Chief Advisor of Shakthi Education Trust, Samvit Yogacharya Manjunath Bengaluru, Yoga trainer Praveen, Prakash, Mithun Chitrapura were present on this occasion.
The programme began with the Saraswathi vandana by the students of Shakthi. Chandrashekar, the District convenor of Samvit proposed the Welcome address and Sanjay compered the event.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಎರಡು ದಿನಗಳ ಸಂವಿತ್ ಯೋಗ ಪ್ರಶಿಕ್ಷಣ ಕಾರ್ಯಗಾರದ ಉದ್ಘಾಟನೆ
ಮಂಗಳೂರು ಫೆ. 18 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸಭಾಂಗಣದಲ್ಲಿ ಇಂದು ಎರಡು ದಿನಗಳ ಸಂವಿತ್ ಹಾಗೂ ವಿದ್ಯಾಭಾರತಿ ಆಯೋಜಿಸಿರುವ ಯೋಗ ಪ್ರಶಿಕ್ಷಣದ ಉದ್ಘಾಟಣೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್ ನೆರವೇರಿಸಿದರು. ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಸುಮಾರು 17 ಶಾಲೆಗಳ ಯೋಗ ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದರು. ನಂತರ ಉದ್ಘಾಟನಾ ಭಾಷಣದಲ್ಲಿ ಡಾ. ಕೆ.ಸಿ. ನಾೖಕ್ ಮಾತನಾಡಿ ಯೋಗವನ್ನು ವಿಶ್ವವೇ ಸ್ವೀಕಾರ ಮಾಡಿದೆ. ನಮ್ಮ ದೇಶದ ಅತ್ಯಂತ ದೊಡ್ಡ ಕೊಡುಗೆ ಇದಾಗಿದೆ. ಇದನ್ನು ನಮ್ಮ ಎಲ್ಲಾ ಶಾಲೆಗಳು ಅಳವಡಿಸಿದಾಗ ಶಾರೀರಿಕ, ಮಾನಸಿಕ ಮತ್ತು ದೈಹಿಕವಾಗಿ ವಿದ್ಯಾರ್ಥಿಗಳು ವಿಕಾಸ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಂವಿತ್‌ನ ಅನುಷ್ಠಾನಾಧಿಕಾರಿ ಶ್ರೀ ಮಂಜುನಾಥ ಶಿಂಧೆ ಇವರು ಮಾತನಾಡಿ ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಸುಲಭವಾಗಿ ಅಳವಡಿಸಬಹುದಾದ ಅಗತ್ಯ ಸುಧಾರಣಾ ಕ್ರಮಗಳನ್ನು ರೂಪಿಸುವ ಮುಖ್ಯ ಉದ್ದೇಶದೊಂದಿಗೆ 2017 ರಲ್ಲಿ ಸ್ಥಾಪಿತವಾದ ಲಾಬೋದ್ದೇಶವಿಲ್ಲದ ಸ್ವಯಂ ಸೇವಾಸಂಸ್ಥೆ ಸಂವಿತ. ನಿರಂತರ ಶೈಕ್ಷಣಿಕ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ಹೆಚ್ಚಿನ ಸಂಖ್ಯೆಯ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಈ ಸುಧಾರಣಾ ಕ್ರಮಗಳನ್ನು ಪರಿಚಯಿಸುವ ಬಹುಮುಖ್ಯ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪೃಥ್ವಿರಾಜ್ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂದರೆ ಯೋಗ ಶಿಕ್ಷಣದ ಅಗತ್ಯತೆ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಈ ಹಿಂದೆ ಗುರುಕುಲ ಪದ್ದತಿ ಇತ್ತು. ಆಗ ಗುರುವಿಗೆ ಮಹತ್ತರವಾದ ಸ್ಥಾನವಿತ್ತು. ಇಂದು ಅದನ್ನು ಮತ್ತೆ ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರತಿಷ್ಠಾಪಿಸುವ ಅಗತ್ಯತೆ ಇದೆ. ನಾವು ಕೊಡುವ ಸಂಸ್ಕಾರದಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಪ್ರಜೆಯಾಗಲು ಸಾಧ್ಯವಿದೆ. ಇಂತಹ ಪಠ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಂತಾಗಬೇಕೆಂದು ತಿಳಿಸಿದರು. ಇಂತಹ ಕಾರ್ಯವನ್ನು ಮಾಡುವಲ್ಲಿ ಸಂವಿತ್ ಮುಂಚೂಣಿಯಲ್ಲಿರುವುದನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾ ಭಾರತಿಯ ದ.ಕ ಜಿಲ್ಲಾಧ್ಯಕ್ಷರಾದ ಲೋಕಯ್ಯ ಡಿ.ಮಾತನಾಡಿ ವಿದ್ಯಾಭಾರತಿಯು ಭಾರತಿಯ ಶಿಕ್ಷಣ ಪದ್ಧತಿಯನ್ನು ತಿಳಿಸುವ ಕಾರ್ಯವನ್ನು ದೇಶಾದ್ಯಂತ ಮಾಡುತ್ತಿದೆ. ಸಂವಿತ್‌ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಈ ಎರಡು ದಿನಗಳ ಕಾರ್ಯಗಾರ ಯೋಗ ಶಿಕ್ಷಕರು ಉತ್ತಮ ವಿಚಾರವನ್ನು ಪಡೆದು ಅದನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಹಾಗೂ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಸಂವಿತ್‌ನ ಯೋಗಚಾರ್ಯ ಮಂಜುನಾಥ ಬೆಂಗಳೂರು, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂವಿತ್‌ನ ಬೆಂಗಳೂರಿನ ಯೋಗ ತರಬೇತುದಾರರಾದ ಪ್ರವೀಣ, ಪ್ರಕಾಶ, ಮಿಥುನ್ ಚಿತ್ರಾಪುರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂವಿತ್‌ನ ಸಂಜಯ್ ಸ್ವಾಗತವನ್ನು ಸಂವಿತ್‌ನ ದ.ಕ ಜಿಲ್ಲಾ ಪ್ರಮುಖ ಚಂದ್ರಶೇಖರ ಹಾಗೂ ಪ್ರಾರ್ಥನೆಯನ್ನು ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಾ ಮತ್ತು ದೀಕ್ಷಾ ಸಂಗಡಿಗರು ನೆರವೇರಿಸಿದರು.