ಮಂಗಳೂರು ಜೂನ್ 20 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ 100% ಹಾಗೂ ವಾಣಿಜ್ಯ ವಿಭಾಗದಲ್ಲಿ 97% ಫಲಿತಾಂಶ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 44 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 19 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.
ವಿಜ್ಞಾನ ವಿಭಾಗದ ತ್ರೀಷಾ ಶೆಟ್ಟಿ 585 ಪಿಸಿಎಮ್ಸಿಯಲ್ಲಿ 600 ರಲ್ಲಿ 585 ಅಂಕ, ಪಿಸಿಎಂಬಿಯ ಅವಿನಾಶ್.ಎಸ್. ಪಾಟೀಲ್ 600ರಲ್ಲಿ 578 ಅಂಕ, ಪಿಸಿಎಂಬಿಯ ದೀಕ್ಷಾ ಎಚ್ ವೈ 600ರಲ್ಲಿ 578, ಪಿಸಿಎಂಸಿಯಲ್ಲಿ ಆದಿತ್ಯ ಮಂಜುನಾಥ 600 ರಲ್ಲಿ 577, ಪಿಸಿಎಂಸಿಯ ಯಜ್ಞೇಶ್ ಕುಮಾರ್ 600ರಲ್ಲಿ 576, ಪಿಸಿಎಂಬಿಯ ಶೆಹಜಾನ್ ಅಹಮ್ಮದ್ ಸಮೀರ್ 600ರಲ್ಲಿ 574 ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 32 ವಿದ್ಯಾರ್ಥಿಗಳಲ್ಲಿ 19 ವಿಶಿಷ್ಟ ಶ್ರೇಣಿ, 9 ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ 4 ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದ ರಕ್ಷಾ ಎಮ್ 600ರಲ್ಲಿ 586, ದೀಕ್ಷಾ ಎಮ್ 600ರಲ್ಲಿ 584, ಸಾತ್ವಿಕ್ 600 ರಲ್ಲಿ 580, ವಿಹಾಲ್ 600ರಲ್ಲಿ 579, ನಚಿಕೇತ್ ಕಲ್ಲಘಟ್ಟ 600ರಲ್ಲಿ 578, ನಿಧಿ ಗೋಪಾಲ್ 600ರಲ್ಲಿ 578 ಇವರು ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.
ಶಕ್ತಿ ಪಪೂ ಕಾಲೇಜು ತನ್ನ ಮೂರನೇ ವರ್ಷದಲ್ಲಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.