Call Us :
+91 96860 00046
+91 9108043552
info@shakthi.edu.in

Hair Donation Program for Cancer Patients at Shakti PU College by Seeds of Hope

Mangalore Sep 11: “Seeds of Hope” Muliya Foundation organized a hair donation program in collaboration with Shakthi PU College, Shaktinagar. Life skills trainer Vandana Kamath inaugurated the program by lighting the lamp.

Later speaking, she shared her experience and said cancer can be conquered when we have courage and self-confidence. Chemotherapy is required during cancer treatment, during which the cells are destroyed and the hair falls out. Then there is a need for a wig, he said.

Dr. Rohan Gatti Chief of Surgical Oncology Department, Father Muller’s Hospital arrived as the chief guest. He said that the cancer patient should not lose heart. Chemotherapy is the most important treatment in three phases. When all the process is complete the hair falls out completely. It takes a long time to get back to normal. A cured patient spends days in embarrassment during this period. Wearing a wig can eliminate embarrassment. Hair is needed to make a wig. He said that the interest and concern of the students of Shakti Pre-University College in collecting hair for this is commendable.

Muliya Foundation Chairman Keshav Prasad speaking on this occasion said 9 students from Puttur started the Seeds of Hope organization in 2020 under the leadership of Aadya Sulochana. Today 14 members are actively working in this organization. Earlier, camps were organized in Puttur and Karkala, 300 people’s hair was collected and 15 wigs were distributed. Each wig costs 8 to 10 thousand to make. He said it would be very beneficial for cancer patients.

Ramesh K., Chief Advisor of Shakti Education Trust and Mangaluru University Syndicate member presided over the program. Students have been taking care of the society since pre-independence in India.
He said that it is possible to organize such a “hair donation” program as students have the selfless qualities to do real social work. He said that Shakti Education Institute will always encourage and cooperate with students for such work.

Mauna, student of Shakti PU College, donated her hair and said that if I have spent anything till now, it is all the parents’ earnings. Today I donated the hair grown on my own head. Hair is only for beauty. Donated hair grows back. So there is nothing to lose in this, she said

Sumana Polali, President of JCI Mangalore, Babita Shetty, President of Mangalore Beautician Institute, Sheetal Karkera, President of Inner Wheel Mangalore South were present on the stage.

A total of more than 65 people donated hair in the program. Hair cutting was done by the office bearers of Mangalore’s beautician institute. On this occasion, Greeting Card Making was organized for the children. Seeds of Hope was led by Aadya Sulochana Kanya Shetty, Srujan Krishna, Srilatha Nayak and Pradyumna Rao. Shakti Pre-University College, Pre-University Principals Association, Mangalore University, Rotary, Red Cross, JCI, Mangalore Beautician Institute have supported the program.

ಸೀಡ್ಸ್ ಆಫ್ ಹೋಪ್‌ನಿಂದ ಶಕ್ತಿ ಪಪೂ ಕಾಲೇಜಿನಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಕೇಶದಾನ ಕಾರ್ಯಕ್ರಮ

ಮಂಗಳೂರು ಸೆ. 11 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ಸಹಯೋಗದೊಂದಿಗೆ ಸೀಡ್ಸ್ ಆಪ್ ಹೋಪ್ ಮುಳಿಯ ಫೌಂಡೇಶನ್ ಕೇಶದಾನ ಕಾರ್ಯಕ್ರಮವನ್ನು ಆಯೋಜಿಸಿತು. ಜೀವನ ಕೌಶಲ ತರಬೇತುಗಾರ್ತಿ ವಂದನಾ ಕಾಮತ್ ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಮ್ಮಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ಇದ್ದಾಗ ಕ್ಯಾನ್ಸರ್‌ನ್ನು ಗೆದ್ದು ಬರಬಹುದೆಂದು ಅವರ ಅನುಭವವನ್ನು ಹಂಚಿಕೊಂಡರು. ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಕಿಮೋ ಥೆರಪಿ ಮಾಡಬೇಕಾಗುತ್ತದೆ. ಆಗ ಜೀವಕೋಶಗಳು ನಾಶವಾಗಿ ಕೂದಲು ಉದುರುತ್ತದೆ. ಆಗ ವಿಗ್‌ನ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಫಾದರ್ ಮುಲ್ಲರ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ರೋಹನ್ ಗಟ್ಟಿ ಮಾತನಾಡಿ ಕ್ಯಾನ್ಸರ್ ರೋಗಿಯು ಧೈರ್ಯ ಕಳೆದುಕೊಳ್ಳಬಾರದು ಇದಕ್ಕೆ ಮೂರು ಘಟ್ಟಗಳಲ್ಲಿ ಪ್ರಮುಖವಾದ ಚಿಕಿತ್ಸೆ ಕಿಮೋಥೆರಪಿ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಾಗ ಕೂದಲು ಪೂರ್ತಿ ಉದುರುತ್ತದೆ. ಅದು ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ಬೇಕಾಗುತ್ತದೆ. ಗುಣಮುಖರಾದ ರೋಗಿ ಈ ಅವಧಿಯಲ್ಲಿ ಮುಜುಗುರದಲ್ಲಿ ದಿನದೂಡುತ್ತಾರೆ. ವಿಗ್ ಧರಿಸುವುದರಿಂದ ಮುಜುಗುರವನ್ನು ಇಲ್ಲದಾಗಿಸಬಹುದು. ವಿಗ್ ತಯಾರಿಸಲು ಕೂದಲು ಬೇಕು. ಇದಕ್ಕಾಗಿ ಕೂದಲು ಸಂಗ್ರಹಿಸಲು ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಆಸಕ್ತಿ, ಕಾಳಜಿವಹಿಸಿರುವುದು ಅಭಿನಂದನೀಯ ಕಾರ್ಯ ಎಂದು ಹೇಳಿದರು.

ಮುಳಿಯ ಫೌಂಡೇಶನ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅತಿಥಿಯಾಗಿ ಮಾತನಾಡಿ ಪುತ್ತೂರಿನ 9 ವಿದ್ಯಾರ್ಥಿಗಳು 2020 ರಲ್ಲಿ ಆದ್ಯಾ ಸುಲೋಚನಾ ನೇತೃತ್ವದಲ್ಲಿ ಸೀಡ್ಸ್ ಆಫ್ ಹೋಪ್ ಸಂಸ್ಥೆಯನ್ನು ಪ್ರಾರಂಭಿಸಿತು. ಇಂದು 14 ಮಂದಿ ಸದಸ್ಯರು ಸಕ್ರಿಯವಾಗಿ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪುತ್ತೂರು ಮತ್ತು ಕಾರ್ಕಳದಲ್ಲಿ ಶಿಬಿರ ಆಯೋಜಿಸಿ 300 ಮಂದಿಯಿಂದ ಕೂದಲು ಸಂಗ್ರಹ ಮಾಡಿ 15 ವಿಗ್ ವಿತರಿಸಿರುತ್ತಾರೆ. ಪ್ರತಿ ವಿಗ್ ತಯಾರಿಸಲು 8 ರಿಂದ 10 ಸಾವಿರ ವೆಚ್ಚವಾಗುತ್ತದೆ. ಇದು ಕ್ಯಾನ್ಸರ್ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ ಕೆ. ಮಾತನಾಡಿ ವಿದ್ಯಾರ್ಥಿಗಳು ಸಮಾಜದ ಬಗ್ಗೆ ಕಾಳಜಿವಹಿಸಿಕೊಂಡು ಬರುತ್ತಿರುವುದು ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ನಡೆಯುತ್ತಿದೆ. ನಿಜವಾದ ಸಮಾಜ ಕಾರ್ಯ ಮಾಡಬೇಕೆಂಬ ನಿಸ್ವಾರ್ಥ ಗುಣ ವಿದ್ಯಾರ್ಥಿಗಳಲ್ಲಿರುವುದರಿಂದ ಇಂತಹ ಕೇಶದಾನ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲು ಸಾದ್ಯಾವಾಗಿದೆ ಎಂದು ಹೇಳಿದರು. ಶಕ್ತಿ ಶಿಕ್ಷಣ ಸಂಸ್ಥೆ ಎಂದಿಗೂ ಇಂತಹ ಕಾರ್ಯಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಹಕಾರವನ್ನು ನೀಡುತ್ತದೆ ಎಂದು ಅಧ್ಯಕ್ಷ ನುಡಿಯಲ್ಲಿ ತಿಳಿಸಿದರು.

ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಮೌನ ತನ್ನ ಕೂದಲು ದಾನಮಾಡಿ ಮಾತನಾಡಿ ಈ ವರೆಗೆ ನಾನೇನಾದರೂ ಖರ್ಚು ಮಾಡಿದ್ದರೆ ಅದೆಲ್ಲವೂ ಪಾಲಕರ ಸಂಪಾದನೆ. ಇವತ್ತು ನನ್ನದೇ ತಲೆಯಲ್ಲಿ ಬೆಳೆದ ಕೂದಲನ್ನು ಮನತುಂಬಿ ದಾನ ಮಾಡಿದ್ದೇನೆ. ಕೂದಲು ಸೌಂದರ್ಯಕ್ಕಾಗಿ ಮಾತ್ರ ಇರುವುದು. ದಾನ ಮಾಡಿದ ಕೂದಲು ಮತ್ತೆ ಬೆಳೆಯುತ್ತದೆ. ಆದ್ದರಿಂದ ಇದರಲ್ಲಿ ಕಳೆದು ಕೊಳ್ಳುವಂತ್ತದ್ದು ಏನೂ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜೆಸಿಐ ಮಂಗಳೂರು ಸ್ಪೂರ್ತಿಯ ಅಧ್ಯಕ್ಷರಾದ ಸುಮನಾ ಪೊಳಲಿ, ಮಂಗಳೂರು ಬ್ಯೂಟಿಷಿಯನ್ ಸಂಸ್ಥೆಯ ಅಧ್ಯಕ್ಷರಾದ ಬಬಿತಾ ಶೆಟ್ಟಿ, ಇನ್ನರ್ ವೀಲ್ ಮಂಗಳೂರು ದಕ್ಷಿಣ ಅಧ್ಯಕ್ಷರಾದ ಶೀತಲ್ ಕರ್ಕೇರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು ೬೫ಕ್ಕಿಂತಲೂ ಹೆಚ್ಚು ಜನರು ಕೂದಲು ದಾನ ಮಾಡಿದರು. ಮಂಗಳೂರಿನ ಬ್ಯೂಟಿಷಿಯನ್ ಸಂಸ್ಥೆಯ ಪದಾಧಿಕಾರಿಗಳು ಹೇರ್ ಕಟ್ಟಿಂಗ್ ನಡೆಸಿದರು. ಇದೆ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಆಯೋಜಿಸಲಾಗಿತ್ತು. ಸೀಡ್ಸ್ ಆಫ್ ಹೋಪ್‌ನ ಆದ್ಯ ಸುಲೋಚನಾ ಕನ್ಯಾ ಶೆಟ್ಟಿ, ಸೃಜನ್ ಕೃಷ್ಣ, ಶ್ರೀಲತ ನಾಯಕ್ ಮತ್ತು ಪ್ರದ್ಯುಮ್ನ ರಾವ್ ನೇತೃತ್ವವಹಿಸಿದರು. ಕಾರ್ಯಕ್ರಮಕ್ಕೆ ಶಕ್ತಿ ಪದವಿ ಪೂರ್ವ ಕಾಲೇಜು, ಪದವಿ ಪೂರ್ವ ಪ್ರಾಚಾರ್ಯರ ಸಂಘ, ಮಂಗಳೂರು ವಿವಿ, ರೋಟರಿ, ರೆಡ್ ಕ್ರಾಸ್, ಜೆಸಿಐ, ಮಂಗಳೂರು ಬೂಟಿಷಿಯನ್ ಸಂಸ್ಥೆ, ಸಹಕಾರ ನೀಡಿದ್ದಾರೆ.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery