ವಿದ್ಯಾ ಭಾರತಿ ಕರ್ನಾಟಕದ ಜ್ಞಾನ ವಿಜ್ಞಾನ ವಿಭಾಗದ ವಿವಿಧ ಸ್ಫರ್ಧೆಯಲ್ಲಿ ಶಕ್ತಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಮಂಗಳೂರು ಅ. 17: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ತನ್ಮಯ್ ಮತ್ತು ಚಿರತೇಜ್ ಇವರು ವಿಜ್ಞಾನ ವಸ್ತು ಪ್ರದರ್ಶನ, ಆದ್ಯಾ ಸುಲೋಚನಾ ವಿಜ್ಞಾನ ಪತ್ರವಾಚನ ಹಾಗೂ ಪ್ರದ್ಯುಮ್ನ ಇವರು ಆಶುಭಾಷಣದಲ್ಲಿ ವಿದ್ಯಾ ಭಾರತಿ ಕರ್ನಾಟಕ ಆಯೋಜಿಸಿರುವ ಜ್ಞಾನ-ವಿಜ್ಞಾನ ಮೇಳದಲ್ಲಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ರಾಜ್ಯಮಟ್ಟದಿಂದ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ಷೇತ್ರಿಯ ಮಟ್ಟದ ಸ್ಫರ್ಧೆಯು ಹೈದ್ರಾಬಾದ್‌ನ ಶಾರದಾಂಭ ಬಂಡಳಗುಡ್ಡ ಜಾಗೀರ್ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಮಧ್ಯಪ್ರದೇಶದ ಭೋಪಾಲ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ನವೆಂಬರ್ 3 ರಿಂದ 6 ರ ತನಕ ನಡೆಯುವ ರಾಷ್ಟ್ರಮಟ್ಟದ ಸ್ಫರ್ದೆಗೆ ಆಯ್ಕೆಯಾಗಿರುತ್ತಾರೆ.
ದ.ಕ. ಜಿಲ್ಲೆಯ ಕೃಷಿಯಾದ ಅಡಿಕೆಯನ್ನು ರಕ್ಷಣೆ ಮಾಡುವ Golden Arecanut ಮಾದರಿಯು ವಸ್ತು ಪ್ರದರ್ಶನದಲ್ಲಿ ಆಯ್ಕೆಯಾಗಿರುತ್ತದೆ. ಇವರನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್, ಆಡಳಿತಾಧಿಕಾರಿ ಕೆ. ಸಿ. ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಅಭಿನಂದಿಸಿರುತ್ತಾರೆ.