“You must get inspiration. You have to do something. Remember most of the students draw inspiration on the days like this. Whatever you do, do it passionately. When you are professing your profession you have to set your own benchmark. You must be at a level where there is no match. Work and study passionately” advised Narendra Nayak, Chairman of Expert Charitable Institutions inaugurating the Annual Day Celebration of Shakthi PU College.
“Nothing is impossible; it all depends on your mindset. Anything you do with sincerity and hard work shall not go a waste. Have faith in the system and yourself. To go fast you can walk alone but to go far you need people around you. For the long term existence of this institution it is backed by a huge team along with proficient people like the Principal and the Chief Advisor Ramesh” he added.
The mega event began with a traditional welcome by playing ‘Channde’ and ‘purna kumbha’ held by all lady staff of the college. PU students and staff invoked the blessings of the almighty. Prathviraj, Principal of Shakthi PU College read out the Annual Report initially. The winners of the Volley ball, Kabbadi, Badminton, Chess, Kick Boxing and Karate as well as the science fair at the Nationals were felicitated on this occasion along with general proficiency prizes.
Dr. K.C.Naik, Administrator in his presidential address recollected the difficulty faced by him in the inception of this institution. He assured the audience that in the years to come Shakthi will make some noise at the competitive examinations and the students will be able to grab their dream profession.
Sanjith Naik, Secretary of Shakthi Education Trust, Ramesh k, Chief Advisor, Vidya Kamath G, Principal Shakthi Residential School and Patricia Pinto, Co-ordinator Shakthi Pre School were present on the dais.
Ravishankar, Sanskrit Lecturer rendered the welcome address while Sushil Rathi, Lecturer in Physics gave the Vote of thanks. Omprakash, Lecturer in English compered the show. Students along with their parents witnessed the showcasing of the talents in varied forms of art by the PU students.
ಶಕ್ತಿ ಪದವಿ ಪೂರ್ವ ಕಾಲೇಜಿನ ಮಕ್ಕಳ ವಾರ್ಷಿಕೋತ್ಸವ ಸಮಾರಂಭ
ಮಂಗಳೂರು ಡಿ. 17 : ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ಮಕ್ಕಳ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಚೇರ್‌ಮೆನ್ ಪ್ರೊ. ನರೇಂದ್ರ ಎಲ್. ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನೀವು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಕಾಲೇಜಿನಿಂದ ಸ್ಫೂರ್ತಿ ಪಡೆಯಬೇಕು. ನೀವು ಏನೇ ಮಾಡಿದರೂ ಅದನ್ನು ಉತ್ಸಾಹದಿಂದ ಮಾಡಿ. ನೀವು ನಿಮ್ಮ ವೃತ್ತಿಯಲ್ಲಿ ನಿಮ್ಮದೇ ಛಾಪನ್ನು ಮೂಡಿಸಬೇಕು. ನಿಮ್ಮ ಪ್ರವೃತ್ತಿಯೇ ನಿಮ್ಮ ವೃತ್ತಿಯಾದಾಗ ಮಾತ್ರ ಅದು ಸಾಧ್ಯ. ಉತ್ಸಾಹದಿಂದ ಕೆಲಸ ಮಾಡಿ ಮತ್ತು ನಿಮ್ಮ ವೃತ್ತಿಗೆ ಅಗತ್ಯವಿರುವ ಕೌಶಲ್ಯವನ್ನು ವೃದ್ಧಿಕೊಳ್ಳುತ್ತಿರಿ ಆಗ ಮಾತ್ರ ನೀವು ವೃತ್ತಿರಂಗದ ಉನ್ನತ ಸ್ಥಾನಕ್ಕೇರಬಹುದು ಎಂದು ಸಲಹೆ ನೀಡಿದರು.
“ಯಾವುದೂ ಅಸಾಧ್ಯವಲ್ಲ; ಇದು ನಿಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ನೀವು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮಾಡುವ ಯಾವುದೇ ಕೆಲಸವು ವ್ಯರ್ಥವಾಗುವುದಿಲ್ಲ. ವ್ಯವಸ್ಥೆ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ. ವೇಗವಾಗಿ ಹೋಗಲು ನೀವು ಒಬ್ಬಂಟಿಯಾಗಿ ನಡೆಯಬೇಕು, ಆದರೆ ದೂರ ಹೋಗಲು ನಿಮ್ಮ ಸುತ್ತಲಿನ ಜನರು ಬೇಕು. ಈ ಸಂಸ್ಥೆಯ ದೀರ್ಘಾವಧಿಯ ಅಸ್ತಿತ್ವಕ್ಕಾಗಿ ಪ್ರಾಂಶುಪಾಲರು ಮತ್ತು ಮುಖ್ಯ ಸಲಹೆಗಾರ ರಮೇಶ್ ಅವರಂತಹ ನಿಪುಣ ವ್ಯಕ್ತಿಗಳೊಂದಿಗೆ ಸಂಸ್ಥೆಯ ಸಿಬ್ಬಂದಿ ವರ್ಗವು ಕೈ ಜೋಡಿಸಿದೆ ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳಿಂದ ’ಚಂಡೆ’ ಹಾಗೂ ಮಹಿಳಾ ಸಿಬ್ಬಂದಿಯಿಂದ ನಡೆದ ’ಪೂರ್ಣಕುಂಭ’ ಸ್ವಾಗತದೊಂದಿಗೆ ಬೃಹತ್ ಕಾರ್ಯಕ್ರಮವು ಸಾಂಪ್ರದಾಯಿಕ ಶೈಲಿಯಿಂದ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಅವರು ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ವಾಲಿ ಬಾಲ್, ಕಬ್ಬಡಿ, ಬ್ಯಾಡ್ಮಿಂಟನ್, ಚೆಸ್, ಕಿಕ್ ಬಾಕ್ಸಿಂಗ್ ಮತ್ತು ಕರಾಟೆ ಹಾಗೂ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ಆಡಳಿತಾಧಿಕಾರಿ ಡಾ.ಕೆ.ಸಿ.ನಾೖಕ್ ಅವರು ಈ ಸಂಸ್ಥೆಯ ಪ್ರಾರಂಭದಲ್ಲಿ ತಾವು ಎದುರಿಸಿದ ಕಷ್ಟವನ್ನು ಸ್ಮರಿಸಿದರು. ಮುಂಬರುವ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಕ್ತಿ ಒಂದಿಷ್ಟು ಸದ್ದು ಮಾಡಲಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಕನಸಿನ ವೃತ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಭಿಕರಿಗೆ ಭರವಸೆ ನೀಡಿದರು.
ವೇದಿಕೆಯಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸಂಜಿತ್ ನಾೖಕ್, ಮುಖ್ಯ ಸಲಹೆಗಾರ ರಮೇಶ್ ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ, ಸಂಯೋಜಕಿ ಪೆಟ್ರೀಷಿಯಾ ಪಿಂಟೋ ಉಪಸ್ಥಿತರಿದ್ದರು.
ಸಂಸ್ಕೃತ ಉಪನ್ಯಾಸಕ ರವಿಶಂಕರ್ ಅವರು ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕ ಸುಶೀಲ್ ರಾಥಿ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕ ಓಂಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಪಿಯು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದನ್ನು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ವೀಕ್ಷಿಸಿದರು.