Call Us :
+91 96860 00046
+91 9108043552
info@shakthi.edu.in

Free Kabaddi selection process

Shakti Pre-University College Free Kabaddi selection process was inaugurated by Premanath Shetty, Director of Physical Education, Vivekananda Pre-University College, Edpadavu in Shakthi PU College, Shakthinagara, Mangaluru.

He addressed the audience and told that the players must have self-discipline in this game and must identify themselves as successful players. He said that he would like to congratulate Dr.K.C.Naik on this occasion. He also spoke about good skills of the game and wished good luck to all the 116 students of the state who will be participating in the new selection process.

Mr.Ramesh K, Chief Advisor, Shakthi Education Trust presided over the program. He spoke about the organisation, how it has been providing free food, accommodation and coaching for Kabaddi students from the last 2 years. As a result Shakthi students have represented the state of Karnataka at the all India level. It is special here to note that Kabaddi students pass out with 90-97% marks, though they are constantly involved in sports training, giving a message that academics is also given importance. Kabaddi students won Bronze medal at the All India Level. It is our intention to pass them by imparting cultured education in the coming days as well.

Out of 116 students participating in the Kabaddi selection process 10 students will be selected and they will be given free education. A total of 35 students will be given free education throughout the year. Apart from this, spending Rs.30 lakhs per year in sports is a specialty of this organization.

Ranjith Naik, Patna Pro-Kabaddi Player and Premnath Shetty were felicitated on this occasion. Dr.K C Naik, Founder of the organisation and Sanjith Naik, Secretary were present during this event. Mr. Prathviraj, Principal Shakthi PU College, gave the welcome speech. Mr. Ravishankar Hegde, Principal Shakthi Residential School proposed the vote of thanks. Sharanappa Sir Kannada Department was the MC for the programme.

ಶಕ್ತಿ ಪದವಿ ಪೂರ್ವ ಕಾಲೇಜಿನ ಉಚಿತ ಕಬಡ್ಡಿಯ ಆಯ್ಕೆ ಪ್ರಕ್ರಿಯೆಯನ್ನು ಎಡಪದವು ವಿವೇಕಾನಂದ ಪಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿಯವರು ಉದ್ಘಾಟಿಸಿದರು.

ಮಂಗಳೂರು ಏ೧೭: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ಮೈದಾನದಲ್ಲಿ ಕಬಡ್ಡಿ ಆಯ್ಕೆ ಪ್ರಕ್ರಿಯೆಯನ್ನು ಎಡಪದವು ವಿವೇಕಾನಂದ ಪಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವಯಂ ಶಿಸ್ತನ್ನು ಈ ಆಟದಲ್ಲಿ ಹೊಂದಬೇಕು. ಆಗ ನಾವು ಯಶಸ್ವಿ ಆಟಗಾರರಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಕಬಡ್ಡಿ ಆಟವಾಡ ಬೇಕಾದರೆ ನಾವು ಖೋ ಖೋ, ವಾಲಿಬಾಲ್ ಹಾಗೂ ಇತರೆ ಆಟವನ್ನಾಡಿದಾಗ ಇದನ್ನು ಸುಲಭವಾಗಿ ಆಟವಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕಬಡ್ಡಿಯಲ್ಲಿ ತನ್ನ ಕೌಶಲ್ಯದ ಪ್ರದರ್ಶನ, ತಾಳ್ಮೆಯ ಪ್ರದರ್ಶನದಿಂದ ಯಶಸ್ವಿ ಆಟಗಾರರಾಗಿ ಹೊರ ಹೊಮ್ಮಲು ಸಾಧ್ಯವಿದೆ. ಕ್ರೀಡೆಗೆ ಶಕ್ತಿ ವಿದ್ಯಾ ಸಂಸ್ಥೆಯು ಹೆಚ್ಚಿನ ಉತ್ತೇಜನ ನೀಡುತ್ತಿರುವ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಕ್‌ರನ್ನು ಅಭಿನಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಬಡ್ಡಿಯ ಆಟದ ಬಗ್ಗೆ ಅನೇಕ ರೀತಿಯ ಒಳ್ಳೆಯ ಕೌಶಲ್ಯವನ್ನು ತಿಳಿಸಿಕೊಟ್ಟು ಹೊಸದಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ರಾಜ್ಯದ 116 ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಶಕ್ತಿ ವಿದ್ಯಾ ಸಂಸ್ಥೆಯು ಕಳೆದ 2 ವರ್ಷಗಳಿಂದ ಕಬಡ್ಡಿಯ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಪಾಠ ಪ್ರವಚನವನ್ನು ಮಾಡುತ್ತಿದೆ. ಇದರ ಪರಿಣಾಮವಾಗಿ ಶಕ್ತಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯವನ್ನು ಅಖಿಲ ಭಾರತೀಯ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ. ಕಬಡ್ಡಿಯ ವಿದ್ಯಾರ್ಥಿಗಳು 90 % ರಿಂದ 97 % ವರೆಗೆ ಅಂಕ ಪಡೆದು ತೇರ್ಗಡೆಯಾಗಿರುವುದು ಇಲ್ಲಿಯ ವಿಶೇಷ. ಆಟದ ಜೊತೆ ನಿರಂತರ ಪಾಠ ಪ್ರವಚನವು ನಡೆಯುತ್ತಿದೆ. ವಿದ್ಯಾ ಭಾರತಿ ಅಖಿಲ ಭಾರತ ಮಟ್ಟದಲ್ಲಿ ಕಂಚು ಪದಕ ಪಡೆದಿರುವುದು ಇವರ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿಯೂ ಸಂಸ್ಕಾರಯುತ ಶಿಕ್ಷಣ ನೀಡಿ ಅವರನ್ನು ತೇರ್ಗಡೆ ಮಾಡುವುದು ನಮ್ಮ ಉದ್ದೇಶ.

ಈ ಬಾರಿಯೂ 116 ವಿದ್ಯಾರ್ಥಿಗಳು ಕಬಡ್ಡಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಅವರಲ್ಲಿ 10 ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು. ಒಟ್ಟು 35 ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿ ಉಚಿತ ಶಿಕ್ಷಣ ನೀಡಲಾಗುವುದು. ಇದಲ್ಲದೆ ಕ್ರೀಡೆಗೆ ವರ್ಷದಲ್ಲಿ 30 ಲಕ್ಷ ರೂಪಾಯಿಯನ್ನು ಖರ್ಚು ಮಾಡುತ್ತಿರುವುದು ಸಂಸ್ಥೆಯ ವಿಶೇಷತೆ.

ವೇದಿಕೆಯಲ್ಲಿ ಪಾಟ್ನ ಪ್ರೋ-ಕಬಡ್ಡಿ ಆಟಗಾರ ರಂಜಿತ್ ನಾಯ್ಕ ಉಪಸ್ಥಿತರಿದ್ದು ಇವರನ್ನು ಮತ್ತು ಪ್ರೇಮನಾಥ್ ಶೆಟ್ಟಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾೖಕ್‌, ಕಾರ್ಯದರ್ಶಿ ಸಂಜೀತ್ ನಾೖಕ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ನಡೆಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ವಂದಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಶರಣಪ್ಪ ನಿರೂಪಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery