ಮಂಗಳೂರು ಜೂನ್ 21 : ಶಕ್ತಿನಗರ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಇಂದು ಶಕ್ತಿ ವಿದ್ಯಾ ಸಂಸ್ಥೆಯು ಕ್ರೀಡಾ ಭಾರತಿ ಮಂಗಳೂರಿನ ಸಹಯೋಗದೊಂದಿಗೆ ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಿತು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕರು ಅಂತಾರಾಷ್ಟ್ಸೀಯ ಯೋಗ ದಿನವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನಾವು ನಮ್ಮ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಯೋಗವನ್ನು ದಿನನಿತ್ಯ ಅಭ್ಯಾಸ ಮಾಡಬೇಕು. ನಾವು ಏಕಾಗ್ರತೆಯಿಂದ ಓದಿದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ತಂದೆ ತಾಯಿಯು ಪ್ರತಿಯೊಬ್ಬ ಮಗು ವಿದ್ಯೆಯನ್ನು ಪ್ರೀತಿಯಿಂದ ಪಡೆಯಬೇಕೆಂಬ ಆಸೆಯಿಂದ ಶಾಲೆಗೆ ಕಳಿಸುತ್ತಾರೆ. ಅವರ ಭಾವನೆಗೆ ನಾವು ಯಾವುದೇ ಕಾರಣಕ್ಕೂ ದಕ್ಕೆ ತರಬಾರದು. ನಾವು ದಿನನಿತ್ಯದ ಪಠ್ಯವನ್ನು ಅಭ್ಯಾಸ ಮಾಡುವುದರ ಜೊತೆಗೆ ಯೋಗವನ್ನು ಅಭ್ಯಾಸ ಮಾಡಿದಾಗ ಹೆಚ್ಚಿನ ಅಂಕ ಪಡೆಯಬಹುದು ಮಾತ್ರವಲ್ಲದೆ ಶಾರೀರಿಕವಾಗಿ, ಮಾನಸಿಕವಾಗಿ ಸಧೃಡರಾಗಲು ಯೋಗಾಭ್ಯಾಸ ಪರಿಣಾಮಕಾರಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕ್ರೀಡಾ ಭಾರತಿ ಮಂಗಳೂರಿನ ಅಧಕ್ಷರಾದ ಶ್ರೀ ಕರಿಯಪ್ಪ ರೈ ವಹಿಸಿ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶಿಸ್ತು ಬದ್ದ ನಡವಳಿಕೆಗೆ ಯೋಗವು ಕಾರಣವಾಗಿರಬಹುದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ರೀಡಾ ಭಾರತೀಯ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೇಮಾರು, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ ಹೆಗಡೆ, ಕ್ರೀಡಾ ಭಾರತಿ ಯೋಗಾ ಮಾರ್ಗದರ್ಶಕರಾದ ಶ್ರೀಮತಿ ವೀಣಾ ಮಾರ್ಲ ಮತ್ತು ಸುಭದ್ರರಾವ್ ಇವರು ಉಪಸ್ಥಿತರಿದ್ದು ಯೋಗಭ್ಯಾಸವನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಯೋಗ ಶಿಷ್ಟಾಚಾರದ ಪ್ರಕಾರ ಪ್ರಾರ್ಥನೆ, ಸರಳ ವ್ಯಾಯಾಮ, ತಾಡಸನ, ವೃಕ್ಷಾಸನ, ಪಾದ ಪದ್ಮಸನ, ಅರ್ಧ ಚಕ್ರಸನ, ತ್ರಿಕೋನಸಾನ, ದಂಡಾಸನ, ಭದ್ರಸನ, ವಜ್ರಸನ, ಅರ್ಧ ಉತ್ಥಾನಮಂಡುಕಾಸನ, ವಕ್ರಸನ, ಮಕರಾಸನ, ಭುಜಂಗಸನ, ಸೇತು ಬಂಧಸನ, ಅರ್ಧ ಹಾಲಸನ, ಪವನ ಮುಕ್ತಸನ, ಶವಾಸನ, ಕಫಲಭಾತಿ , ನಾಡಿಶೋಧ ಪ್ರಣಾಯಾಮ, ಶಿತಾಲಿ ಪ್ರಣಾಯಾಮ, ಭಮರಿ ಪ್ರಾಣಾಯಾಮ, ಧ್ಯಾನವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅಭ್ಯಾಸ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಅದ್ಯಾಪಕರಾದ ಶರಣಪ್ಪ ನೆರವೇರಿಸಿದರು. ದೈಹಿಕ ನಿರ್ದೇಶಕಿ ಸುರೇಖಾ ಮತ್ತು ಅಧ್ಯಾಪಕರು ಯೋಗವನ್ನು ಅಭ್ಯಾಸಿಸಲು ಸಹಕರಿಸಿದರು.