ಶಕ್ತಿ ಪಪೂ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ಪದವಿಪೂರ್ವ ವಿಭಾಗದ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಪ್ರಾರೊಂಭೋತ್ಸವ
ಮಂಗಳೂರು : ಶಕ್ತಿ ನಗರದ ಶಕ್ತಿ ಪಪೂ ಕಾಲೇಜಿನ ಪ್ರಥಮ ವ?ದ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಪ್ರಾರೊಂಭೋತ್ಸವು ವಿದ್ಯಾರ್ಥಿಗಳು ಮತ್ತು ಪೋಷಕರ ಸಮ್ಮುಖದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಕಾಸ್ ಪಪೂ ಕಾಲೇಜಿನ ನಿಕಟಪೂರ್ವ ಡೀನ್ ಡಾ. ಮಂಜುಳಾ ರಾವ್ ಆಗಮಿಸಿದರು. ನಂತರ ಮಾತನಾಡಿದ ಅವರು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಅವರು ಅಪೇಕ್ಷೆ ಪಟ್ಟ ಎಲ್ಲಾ ವಸ್ತುಗಳನ್ನು ನಾವು ಅವರಿಗೆ ತೆಗೆದುಕೊಡುತ್ತೇವೆ. ವಸತಿ ನಿಲಯದಲ್ಲಿ ಪ್ರವೇಶ ಪಡೆದ ನಂತರ ನಾವು ಕಾಲೇಜಿನ ನಿಯಾಮವಾಳಿಯನ್ನು ಪಾಲನೆ ಮಾಡಬೇಕು. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಒದಗಿಸಿರುತ್ತಾರೆ. ನಮಗೆಲ್ಲರಿಗೂ ಒಳ್ಳೆಯ ಕಲಿಕಾ ವಾತವರಣವಿರುತ್ತದೆ. ಇದನ್ನು ನಾವು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುವುದು ನಾವು ಯೋಚನೆ ಮಾಡಬೇಕು. ನಿಮ್ಮ ತಂದೆ ತಾಯಿ ತುಂಬಾ ಆಸಕ್ತಿಯಿಂದ ನಿಮ್ಮನ್ನು ಇಲ್ಲಿ ಸೇರಿಸಿರುತ್ತಾರೆ. ಅವರ ಮನಸ್ಸಿಗೆ ಯಾವಾಗಲೂ ನೋವು ಮಾಡಬಾರದು. ನಾವು ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿ ಓದಬೇಕೆಂದು ಹೇಳಿದರು.
ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಮಾತನಾಡಿ ಶಕ್ತಿ ಪಪೂ ಕಾಲೇಜಿನ 6 ವರ್ಷಗಳ ಸಾಧನೆಯ ಕುರಿತಂತೆ ಮಾಹಿತಿ ನೀಡಿದರು. ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತೇವೆ. ಇದನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆ ಮೇಲೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುಶಿಲ್ ವಿಜ್ಞಾನದ ಕುರಿತಂತೆ ಮಾಹಿತಿ ನೀಡಿದರು. ಉಪನ್ಯಾಸಕಿ ಮೆಲಿಸ ಲೂವಿಸ್ ವಾಣಿಜ್ಯ ವಿಷಯದ ಕುರಿತು ಮಾಹಿತಿ ನೀಡಿದರು. ಭಾಷಾ ವಿಷಯದ ಕುರಿತಂತೆ ಹಂಸಲೇಖ ಮತ್ತು ಕಾಲೇಜು ಹಾಗೂ ಹಾಸ್ಟೆಲ್ ನಿಯಮಗಳ ಬಗ್ಗೆ ಉಪ ಪ್ರಾಂಶುಪಾಲರಾದ ದಿವ್ಯಜ್ಯೋತಿಯವರು ಮಾಹಿತಿ ನೀಡಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುನೀಲ್ ರವರು ನಿರೂಪಿಸಿದರು.