ನಮ್ಮ ಮಕ್ಕಳೊಂದಿಗೆ ನಾವು ಕಳೆಯುತ್ತಿರುವ ಸಮಯ ಕನಿಷ್ಠ ಹಂತಕ್ಕೆ ತಲುಪಿದೆ. ಇದರಿಂದಾಗಿ ನಮ್ಮ ಮಕ್ಕಳು ತಾವು ಬೆಳೆಯುವ ಹಂತದಲ್ಲಿ ಹಲವಾರು ವಿಷಯಗಳಿಂದ ವಂಚಿತರಾಗುತ್ತಾರೆ. ಅಂಕಗಳಾಗಲೀ, ಸ್ಪರ್ಧೆಗಳಾಗಲೀ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಬಾರದು. ಇದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವುದಲ್ಲದೆ ಅವರ ಬೌದ್ಧಿಕ ಬೆಳವಣಿಗಗೆ ಕುಂಠಿತಗೊಳ್ಳುವ ಸಾಧ್ಯತೆಯೂ ಇರುತ್ತದೆ. ಮಕ್ಕಳೊಂದಿಗೆ ಸದಾ ಸ್ನೇಹಿತರಾಗಿಯೇ ಇರಬೇಕು ಎಂದು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ನಾಡಿನ ಹೆಸರಾಂತ ಮನೋವೈದ್ಯ ಹಾಗೂ ಆಪ್ತ ಸಲಹೆಗಾರ ಉಡುಪಿಯ ಡಾ. ಎ.ವಿ ಬಾಳಿಗಾ ಆಸ್ಪತ್ರೆಯ ಡಾ. ವಿರೂಪಾಕ್ಷ ದೇವರ ಮನೆ ಹೇಳಿದರು.
ಅವರು ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೖಕ್, ಆಡಳಿತ ಮಂಡಳಿಯ ಟ್ರಸ್ಟಿ ಡಾ. ಮುರಳೀಧರ ನಾೖಕ್, ಶಾಲಾ ಪ್ರಾಚಾರ್ಯರಾಗಿರುವ ವಿದ್ಯಾ ಕಾಮತ್ ಜಿ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.
ಪಿ.ಯು ಕಾಲೇಜಿನ ಪ್ರಾಚಾರ್ಯರು ಪ್ರಭಾಕರ ಜಿ.ಎಸ್. ಸ್ವಾಗತಿಸಿ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ನಯನ ಪ್ರಸಾದ್ ವಂದಿಸಿದರು. ಕು. ಶಿಲ್ಪಾ ಪಿ. ಕಾರ್ಯಕ್ರಮ ನಿರೂಪಿಸಿದರು.