ಶಕ್ತಿ ಫೆಸ್ಟ್ 2018 ರ ಎರಡನೇ ದಿನದ ಕಾರ್ಯಕ್ರಮದ ಉದ್ಘಾಟನೆ
ಮಂಗಳೂರು ಡಿ. 20 : ಶಕ್ತಿನಗರದ ಶಕ್ತಿ ವಸತಿಯುಕ್ತ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನಿಂದ ಆಯೋಜಿಸಲಾಗಿರುವ ಶಕ್ತಿ ಫೆಸ್ಟ್ – 2018 ರ ಎರಡನೇ ದಿನದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇಂದು ಶಕ್ತಿ ಶಾಲೆಯ ಮೈದಾನದಲ್ಲಿ ನಡೆಯಿತು. ಜಿಲ್ಲೆಯ ನಾನಾ ಶಾಲೆಯ 5ನೇ ತರಗತಿಯಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಸಾನಿದ್ಯ ಭಿನ್ನ ಸಾಮರ್ಥ್ಯದ ವಸತಿ ಶಾಲೆಯ ಸಂಚಾಲಕರಾದ ಶ್ರೀ ವಸಂತ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಹೆಚ್ಚು ಸಾಮರ್ಥ್ಯವಿದೆ. ಅವರಲ್ಲಿರುವ ಪ್ರತಿಭೆಗಳಿಗೆ ನಾವು ವೇದಿಕೆ ಕಲ್ಪಿಸಬೇಕಿದೆ. ಅಂತಹ ಕೆಲಸವನ್ನು ಶಕ್ತಿ ಶಾಲೆಯು ಮಾಡುತ್ತಿರುವುದು ನಿಜವಾಗಿಯು ಅಭಿನಂದನೀಯವಾಗಿದೆ. ಒಂದು ಒಳ್ಳೆಯ ಸೌಕರ್ಯವನ್ನು ಒದಗಿಸಿ ಶಕ್ತಿನಗರವನ್ನು ನಿರ್ಮಾಣ ಮಾಡಿರುವ ಕೆ.ಸಿ ನಾೖಕ್ರ ಪ್ರಯತ್ನವನ್ನು ಶ್ಲಾಘಿಸಿದರು. ಈ ಶಿಕ್ಷಣ ಸಂಸ್ಥೆಯ ಮೂಲಕ ಶಕ್ತಿನಗರ ನ್ಯೂ ಶಕ್ತಿನಗರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಸೀಮ್ ಬಾನು ಶಕ್ತಿ ಫೆಸ್ಟ್ 2018 ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳ ಅನಾವರಣದ ವೇದಿಕೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಸಕ್ತಿಯಿಂದ ಇಂತಹ ಸ್ಪರ್ದೆಗಳಲ್ಲಿ ಭಾಗವಹಿಸಬೇಕು ಆ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಸಾಧ್ಯವಿದೆ ಎಂದು ಹೇಳಿದರು. ಇವತ್ತು 5ನೇ ತರಗತಿಯಿಂದ 10ನೇ ತರಗತಿಯ ವರೆಗೆ ಅನೇಕ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ.
5, 6, ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ (ಸ್ವಚ್ಛ ಭಾರತ, ಹಸಿರು ಭಾರತ), ಕನ್ನಡ ಜನಪದ ಹಾಡು (ಸಮೂಹ) ಛದ್ಮವೇಷ (ಸಮಾಚಾರ ಪತ್ರ) ಸ್ಪೆಲ್ ಬೀ (ಇಂಗ್ಲಿಷ್) ಕಸದಿಂದ ರಸ (ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ತಯಾರಿ) ರಸಪ್ರಶ್ನೆ, ಇಂಗ್ಲಿಷ್ ಭಾಷಣ (Unity in Diversity), ಕನ್ನಡ ಭಾಷಣ (ವಿವಿಧತೆಯಲ್ಲಿ ಏಕತೆ) ಹಿಂದಿ ಭಾಷಣ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸ್ವಚ್ಛ ಭಾರತ ನಡೆಯಿತು.
8, 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಣ, ಕನ್ನಡ ಭಾಷಣ, ಹಿಂದಿ ಭಾಷಣ (ಜಾಗತಿಕ ತಾಪಮಾನ), ದಾಸರ ಪದ, ಪೋಸ್ಟರ್ ತಯಾರಿ (ಮಾದಕ ವಸ್ತುಗಳ ದಾಸರಾಗಬೇಡಿ) ಕಸದಿಂದ ರಸ (ತೆಂಗಿನ ಕಾಯಿಯ ಚಿಪ್ಪಿನಿಂದ) ರಸಪ್ರಶ್ನೆ, ಬೆಂಕಿಯಿಲ್ಲದೆ ಅಡುಗೆ, ವಿಜ್ಞಾನ ಪ್ರಾಜೆಕ್ಟ್, ವೈವಿರ್ಧಯಮಯ ಸಾಂಸ್ಕೃತಿಕ ಕಾರ್ಯಕ್ರಮ ( ಬಾಲ ಕಾರ್ಮಿಕರು ಮತ್ತು ಶಿಕ್ಷಣದ ಹಕ್ಕು) ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾೖಕ್, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ., ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್., ರಸಾಯನ ಶಾಸ್ತ್ರ ವಿಭಾಗಾಧಿಕಾರಿ ದರ್ಶನ್ ರಾಜ್ ಉಪಸ್ಥಿತರಿದ್ದರು. ಶಕ್ತಿ ಪ. ಪೂ. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರಿಯಾಂಕ ಗುಂಬರ್ ಸ್ವಾಗತಿಸಿ, ಉಪನ್ಯಾಸಕಿ ನಯನ ಪ್ರಸಾದ್ ವಂದಿಸಿದರು.