ಮಂಗಳೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದ.ಕ. ಹಾಗೂ ಶಕ್ತಿನಗರದ ಶಕ್ತಿ ಪಿ.ಯು. ಕಾಲೇಜಿನ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 17-3-2019 ರ ಮಧ್ಯಾಹ್ನ 2.30 ಕ್ಕೆ ಶಕ್ತಿ ಪಿ.ಯು. ಕಾಲೇಜಿನಲ್ಲಿ “ಅನುಭಾವ ಸಂಗಮ” ಚಿಂತನಗೋಷ್ಠಿಗಳು ನಡೆಯಲಿವೆ.
’ವರ್ತಮಾನಕ್ಕೂ ವಚನ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಚಿಂತನಗೋಷ್ಠಿಗಳ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ನಡೆಸಲಿದ್ದಾರೆ. ಶ್ರೀ ಜಗನ್ನಾಥಪ್ಪ ಪನಸಾಳೆ ಜನವಾಡಾ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಪ್ರಾಚಾರ್ಯ ಪ್ರಭಾಕರ ಜಿ.ಎಸ್. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ. ನಾೖಕ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
’ವಚನಗಳು ಸಾರುವ ಸಾರ್ವಕಾಲಿಕ ಮೌಲ್ಯಗಳು’ ವಿಷಯದ ಕುರಿತಂತೆ ಶ್ರೀಮತಿ ಸಾವಿತ್ರಿ ರಮೇಶ್ ಭಟ್, ’ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನಗಳು’ ಕುರಿತಂತೆ ಡಾ. ಎಸ್. ಪಿ ಗುರುದಾಸ್ ಚಿಂತನಗೋಷ್ಠಿಯಲ್ಲಿ ವಿಚಾರ ಮಂಡಿಸಲಿರುವರು. ಡಾ. ನಾಯಕ್ ರೂಪ್ಸಿಂಗ್ ಹಾಗೂ ಶ್ರೀಮತಿ ಸುಜಯ ಶೆಟ್ಟಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಲಿರುವರು.
ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಮುರಳೀಧರ್ ನಾೖಕ್ ವಹಿಸಲಿದ್ದು ಶ್ರೀಮತಿ ವಿದ್ಯಾ ಕಾಮತ್ ಜಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಬೈಕಾಡಿ ಜನಾರ್ದನ ಆಚಾರ್ ಸಮಾರೋಪ ಭಾಷಣ ಮಾಡಲಿರುವರು. ಕಾರ್ಯಕ್ರಮದಲ್ಲಿ ಇಂಚರ ತಂಡ ಉರ್ವ ಇದರ ಸದಸ್ಯರು ವಚನ ಗಾಯನ ಪ್ರಸ್ತುತ ಪಡಿಸಲಿದ್ದಾರೆ.
ದ.ಕ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೈಕಾಡಿ ಜನಾರ್ದನ ಆಚಾರ್, ಕಾರ್ಯದರ್ಶಿ ಕೆ.ಜಿ. ಪಾಟೀಲ, ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಸದಸ್ಯ ರಮೇಶ್ ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.