ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಎಪ್ರಿಲ್ 11 ರಿಂದ 30 ರ ತನಕ ’ಶಕ್ತಿ ಕ್ಯಾನ್ ಕ್ರಿಯೇಟ್’ ಎಂಬ ಶೀರ್ಷಿಕೆಯಲ್ಲಿ ಇಪ್ಪತ್ತು ದಿನಗಳ ಕಾಲದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವಾಹ್ನ 8 ರಿಂದ ಸಂಜೆ 5 ರ ತನಕ ನಡೆಯಲಿರುವ ಈ ಶಿಬಿರದಲ್ಲಿ ಯೋಗ, ಚಿತ್ರಕಲೆ, ಕರಕುಶಲ ಕಲೆ, ವ್ಯಂಗ್ಯಚಿತ್ರ, ಮುಖವಾಡ ರಚನೆ, ಫೋಮ್ ಆರ್ಟ್, ಆವೆ ಮಣ್ಣಿನ ರಚನೆ, ವರ್ಲಿ ಆರ್ಟ್, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ವೇದಗಣಿತ, ಗೆರಟೆ ಕಲೆ, ಮಿಮಿಕ್ರಿ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ, ಭಾಷಣ ಕಲೆ, ಸುಂದರ ಕೈ ಬರಹ, ಪೇಪರ್ ಕಟ್ಟಿಂಗ್, ಲೋಹದ ಉಬ್ಬು ಶಿಲ್ಪ, ಜನಪದ ಹಾಡು, ಕುಣಿತ, ಕಿರುನಾಟಕ, ಕತೆ ಕೇಳು – ಹೇಳು, ನೆರಳಿನಾಟ, ಮ್ಯಾಜಿಕ್, ವನ – ವನ್ಯಜೀವಿಗಳು, ಸೀಮೆ ಸುಣ್ಣದಿಂದ ಕಲಾಕೃತಿ ರಚನೆ, ರೇಡಿಯೋ ಸಾರಂಗ್ ಪ್ರಾತ್ಯಕ್ಷಿಕೆ, ಸಮುದ್ರ ತೀರದಲ್ಲಿ ಗಾಳಿಪಟ ಹಾರಿಸುವುದು, ಪ್ರವಾಸ ಇತ್ಯಾದಿ ಚಟುವಟಿಕೆಗಳು ಈ ಶಿಬಿರದಲ್ಲಿ ನಡೆಯಲಿವೆ.
ನಾಡಿನ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾಗಿರುವ ಪಿ.ಎನ್. ಆಚಾರ್ಯ ಮಣಿಪಾಲ, ವೆಂಕಿ ಪಲಿಮಾರ್, ಪೆರ್ಮುದೆ ಮೋಹನ್ ಕುಮಾರ್, ಜಾನ್ ಚಂದ್ರನ್, ದಿನೇಶ್ ಹೊಳ್ಳ, ವೀಣಾ ಶ್ರೀನಿವಾಸ್, ಸುಧೀರ್ ಕಾವೂರು, ಪೂರ್ಣೆಶ್ ಪಿ, ರತ್ನಾವತಿ ಜೆ. ಬೈಕಾಡಿ, ಸಚಿತಾ ನಂದಗೋಪಾಲ್, ಗೋಪಾಲಕೃಷ್ಣ ದೇಲಂಪಾಡಿ, ರಮೇಶ್ ಕಲ್ಮಾಡಿ, ಪ್ರೇಮನಾಥ ಮರ್ಣೆ, ಮೈಮ್ ರಾಮದಾಸ್, ಅರುಣ್ ಕುಮಾರ್ ಕುಳಾಯಿ, ಪಟ್ಟಾಭಿರಾಮ ಸುಳ್ಯ, ರಚನಾ ಕಾಮತ್, ಮುರಳೀಧರ್ ಕಾಮತ್, ನಾದಶ್ರೀ, ಎ.ಜಿ ಸದಾಶಿವ, ಮಹೇಶ್ ರಾವ್ ಉಡುಪಿ, ಸುರೇಖಾ ಕವತ್ತಾರು, ರಾಜೇಶ್ ಶ್ರೀವನ, ಎಂ.ಎಸ್ ಹೆಬ್ಬಾರ್, ಬೈಕಾಡಿ ಜನಾರ್ದನ ಆಚಾರ್, ನಸೀಮ್ ಬಾನು, ವಿದ್ಯಾ ಕಾಮತ್ ಜಿ, ರಾಜೇಶ್ವರಿ, ಪ್ರಶಾಂತ್, ಗಣೇಶ್ ಕುದ್ರೋಳಿ, ಆಶ್ಲೀ, ಹರೀಶ್ ಆಚಾರ್ ತೊಕ್ಕೊಟ್ಟು, ಸುಂದರ್ ತೋಡಾರ್, ಸಹನಾ ತೋಡಾರ್, ಶಿವಶಂಕರ್, ವಿನೀತ್ ಮೊದಲಾದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಶಿಬಿರವು 1-4, 5-7 ಹಾಗೂ 8-10 ತರಗತಿಗಳ ಮೂರು ವಿಭಾಗಗಳಲ್ಲಿ ನಡೆಯಲಿದ್ದು ಯಾವುದೇ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಶಿಬಿರದ ಸಮಯದಲ್ಲಿ ನಗರದ ಪ್ರಮುಖ ಕೇಂದ್ರಗಳಿಂದ ಶಾಲಾ ಬಸ್ನಲ್ಲಿ ಸಂಚಾರ ಸೌಲಭ್ಯ ಒದಗಿಸಲಾಗುವುದು. ಊಟ – ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಲಾ ಪ್ರಾಚಾರ್ಯರಾಗಿರುವ ಶ್ರೀಮತಿ ವಿದ್ಯಾ ಕಾಮತ್ ಜಿ. ತಿಳಿಸಿದರು.
ಈ ಸಂದರ್ಭದಲ್ಲಿ ಬೇಸಿಗೆ ಶಿಬಿರ 2019 ರ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು. ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.