ಶಕ್ತಿನಗರ, ಮಂಗಳೂರು : ಇಲ್ಲಿನ ಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಅಕ್ಷರಭ್ಯಾಸ ಮಾಡಲಾಯಿತು. ಶಾರದೆಯ ವಿಗ್ರಹದೆದುರು ಹರಿವಾಣದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಪೋಷಕರು ಮಕ್ಕಳಿಂದ ’ಓಂ’ ಬರೆಸಿ ಶಿಕ್ಷಣಕ್ಕೆ ಓಂಕಾರ ಹಾಡಿದರು. ಶಾಲಾ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಆನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪೋಷಕರಿಗೆ ಶಾಲೆ ಹಾಗೂ ಶಾಲೆಯಲ್ಲಿ ನಡೆಯಲಿರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯ ಬಗ್ಗೆ ಶಾಲಾ ಪ್ರಾಯರ್ಯೆ ಮಾಹಿತಿ ನೀಡಿದರು. ಆರಂಭದಲ್ಲಿ ಶ್ರೀಮತಿ ಸ್ವಾತಿ ಭರತ್ ಸ್ವಾಗತ ಬಯಸಿ, ಕು. ದೀಪ್ತಿ ವಂದಿಸಿದರು. ಶ್ರೀಮತಿ ಪೂರ್ಣಿಮ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್ ಶಕ್ತಿ ಶಿಕ್ಷಣ ಸಂಸ್ಥೆಗಳ ಒಟ್ಟುಗುರಿಯನ್ನು ಸಾದರ ಪಡಿಸಿದರು. ಶಿಕ್ಷಣ ಎಂದರೆ ಕೇವಲ ಅಂಕಗಳಲ್ಲ. ಅಲ್ಲಿ ಮಾನವ ನಿರ್ಮಾಣದ ಕೆಲಸ ನಿರಂತರ ನಡೆಯಬೇಕು. ಮಾನವೀಯ ಮೌಲ್ಯಗಳ ಬೋಧನೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಮಿಲಿತವಾಗಿರಬೇಕು. ಆದುದರಿಂದಲೇ ಶಕ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಯೋಗಾಭ್ಯಾಸ, ಧ್ಯಾನ, ಶ್ಲೋಕ ಕಂಠಪಾಠವಲ್ಲದೆ ಅದರ ಅರ್ಥ ವಿವರಣೆ ನೀಡಲಾಗುವುದು ಎಂದರು.
ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಸೀಮ್ ಬಾನು, ಶಕ್ತಿ ಪ. ಪೂ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ. ಎಸ್., ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಶ್ರೀಮತಿ ನಿರ್ಮಲಾ ಸಕ್ಸೇನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.