Call Us :
+91 96860 00046
+91 9108043552
info@shakthi.edu.in

Inauguration of Shakthi Advanced Learning

“There is no dearth of Educational institutions, but the number of institutions which impart quality education is very less in India. Right from their school days the students should come to know how to accept defeat and victory. They must be made to understand that every defeat is a stepping stone for their success in future. Education should help them in mental, physical, spiritual, social and sensational growth – said Mr. P. Subramanya Yadapadithaya, the vice chancellor of Mangalore University. He was addressing the gathering after inaugurating the Shakthi Advanced Learning at Shakthinagar, Mangaluru under the auspices of Shakthi Residential School managed by Shakthi Education Trust.

He gave a call to the teachers and the management that they must be able to go beyond the syllabus and help them to face the challenges in life. No one is born dullard, if the opportunities are given the latent talents and skills hidden will come out he said.

Mr. N.Vinay Hegde, the chancellor of Nitte deemed to be university presided over the function. He said that more than the marks the students secure, education should aim at character building of the students. It helps them to build the nation. He told the students to give respect to the parents and teachers.

Mr. Pradeep Kumar Kalkura, the president of Kannada Sahithya Parishat, Dakshina Kannada told the students to aim high and try to reach them with sincere efforts.

Smt. Vidya Kamath G., the Principal of Shakthi Residential School delivered the welcome address. Mr. Sanjith Naik, the secretary of Shakthi Education Trust spoke about Shakthi Institutions. Mr. Darshan Raj, the co-ordinator of Shakthi Advanced Learning delivered key note address. Mr. Prabhakara G.S, the principal of Shakthi P.U.College proposed the vote of thanks. Miss Chetna Naik and Miss Manasa compered the programme.

Mr. K.C Naik, the founder of Shakthi Institutions, Baikady Janardana Achar, the administrator of Shakthi Education Trust, Ramesh K, the chief advisor Prakyath Rai, the institute development officer and Neema Saxena, the co-ordinator of Shree Gopalakrishna Pre-school were present.

ವಿದ್ಯಾರ್ಥಿ ಶಿಕ್ಷಕರಲ್ಲಿ ಪಠ್ಯಕ್ರಮವನ್ನು ಮೀರಿದಚಿಂತನೆ ಬಹುಮುಖ್ಯ – ಪ್ರೊ. ಯಡಪಡಿತ್ತಾಯ

ಮಂಗಳೂರು ನ. 11 : ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿರುವ ಜತೆಯಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯಕ್ರಮವನ್ನು ಮೀರಿ ಚಿಂತಿಸಬೇಕಾಗುತ್ತದೆ. ಇದಕ್ಕೆ ಸುಧಾರಿತ ಕಲಿಕಾ ಕ್ರಮ ಅತ್ಯಂತ ಪೂರಕಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಯಡಪಡಿತ್ತಾಯ ಹೇಳಿದರು.

ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್ ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿರುವ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಖರವಾದ ಗುರಿ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದವರು ಹೇಳಿದರು.

ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುವ ಸಂಸ್ಥೆಗಳಾಗಿರುವ ಈ ಕಾಲಘಟ್ಟದಲ್ಲಿ ಇಂತಹ ಸುಧಾರಿತ ಶಿಕ್ಷಣ ಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕೌಶಲ್ಯವನ್ನು ವೃದ್ಧಿಸುತ್ತವೆ. ಮುಂದೆ ಅವರ ಉದ್ಯೋಗ ಜೀವನದಲ್ಲಿಯೂ ಈ ಕ್ರಮಗಳು ಸಹಕಾರಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ವಿನಯ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳ್ಳದೆ, ಉತ್ತಮ ಮಾನವರಾಗಿ ಬೆಳೆಯಬೇಕಾಗಿದೆ. ಇದಕ್ಕೆ ಮಾನಸಿಕ ಬೆಳವಣಿಗೆ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸುಧಾರಿತ ಕಲಿಕಾ ಕ್ರಮ ಮಕ್ಕಳಲ್ಲಿ ಮನೋಸ್ಥೈರ್ಯವನ್ನು ತುಂಬುತ್ತದೆ ಎಂದರು.

ಶಕ್ತಿ ಅಡ್ವಾನ್ಸ್‌ಡ್ ಲರ್ನಿಂಗ್ ಬಗ್ಗೆ ದಿಕ್ಸೂಚಿ ಭಾಷಣ ನೀಡಿದ ಸಂಸ್ಥೆಯ ಸಂಯೋಜಕ ಡಾ. ದರ್ಶನ್‌ರಾಜ್, ಇದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿ ಸಂಶೋಧನಾತ್ಮಕ ನಿಲುವಿನೊಂದಿಗೆ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಹಕಾರಿ ಮಾತ್ರವಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒತ್ತಡವಿಲ್ಲದೆ ಎದುರಿಸಲು ನೆರವು ನೀಡಲಿದೆ ಎಂದರು.

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಎನ್.ಎಸ್.ಒ, ಡಿ.ಎಂ.ಬಿ, ಐ.ಇ.ಒ, ಐ.ಜಿ.ಕೆ.ಒ, ಎನ್.ಐ.ಎಂ.ಒ, ಎನ್.ಡಿ.ಎ, ಕೆ.ಎ.ಪಿ.ವೈ ಮೊದಲಾದ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಅಡ್ವಾನ್ಸ್‌ಡ್ ಲರ್ನಿಂಗ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಇದು ಮುಂದೆ ಐ.ಎ.ಎಸ್, ಐ.ಪಿ.ಎಸ್, ಐ.ಆರ್.ಎಸ್, ಕೆ.ಎ.ಎಸ್ ಮೊದಲಾದ ಪರೀಕ್ಷೆಗಳನ್ನು ಎದುರಿಸಲು ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳಿಗೆ ಅಡ್ಡಿಯಾಗದಂತೆ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಅವರ ಪರಿಪೂರ್ಣ ವ್ಯಕ್ತಿತ್ವ ರೂಪಿಸುವತ್ತ ಈ ವ್ಯವಸ್ಥೆಯಡಿ ಗಮನ ನೀಡಲಾಗುತ್ತದೆ. ಇಂಜಿನಿಯರಿಂಗ್, ವೈದ್ಯಕೀಯ, ವ್ಯವಹಾರ, ಬ್ಯಾಕಿಂಗ್, ಸ್ವಉದ್ಯೋಗ, ಶಿಕ್ಷಣ, ರಕ್ಷಣೆ, ಕೃಷಿ ಹೀಗೆ ವಿವಿಧ ವಲಯಗಳ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಆ ಕ್ಷೇತ್ರದ ಪರಿಚಯ, ಉದ್ಯೋಗಾವಕಾಶಗಳು ಹಾಗೂ ಆ ಕ್ಷೇತ್ರಗಳಿಗೆ ಪ್ರವೇಶದ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ಡಾ. ದರ್ಶನ್‌ರಾಜ್ ತಿಳಿಸಿದರು.

ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಆರಂಭದಲ್ಲಿ ಸ್ವಾಗತ ಬಯಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ. ಎಸ್. ವಂದಿಸಿದರು. ಕು. ಚೇತನ ಹಾಗೂ ಕು. ಮಾನಸ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌ ಪ್ರಾಸ್ತಾವಿಕವಾಗಿ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯು ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾೖಕ್‌, ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ಗೋಪಾಲಕೃಷ್ಣ ಪ್ರಿ ಸ್ಕೂಲ್‌ನ ಸಂಯೋಜಕರಾದ ನೀಮಾ ಸಕ್ಸೇನಾ, ಬೈಕಾಡಿ ಜನಾರ್ದನ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery