Call Us :
+91 96860 00046
+91 9108043552
info@shakthi.edu.in

Shakthi Institutions Annual Day

Mangaluru: The Annual Day of Shakthi P.U.College Shakthi Residential School, and Shree Gopalakrishna Pre School was celebrated on a grand scale on 30th Nov.2019 at the college auditorium.

Mr. B.L Santhosh, the National Secretary Bharathiya Janatha Party was the Chief Guest on the occasion. Addressing the gathering he said, “The God has created different sorts of children. A teacher moulds all the children studying their different nature, attitude and aptitude. We should not focus only on marks. The teachers and parents have to focus more attention on values and life education. He urged the parents to spend more time to speak with the children rather than watching TV or Mobile.

Another chief guest Shri Krishna J Palemar, the Ex-minister of Karnataka spoke on the occasion and gave a call to the students to give due importance to cleanliness and in saving the environment. The parents should take the benefit of this educational institution to the fullest extent for students here can get value based education.

Sri D.B. Mehta, the president of CREDAI Mangaluru said, that learning never ends. Constant learning one can contribute to the society. The students should give more importance to gather knowledge from all corners. Every problem has a solution. If we have attitude of working hard we can solve problems and face challenges. He told the students to be honest.

The chief guests gave away the prizes to the achievers.

Shri V.K Talithaya the Ex-vice president of MRPL presided over the function. He gave a call to the students and said that the students should cultivate the habit of the attachment to the school and should have affection to the teachers. The students should cultivate good qualities.

Mr. Nalin Kumar Kateel M.P, Mr. Vedavyasa Kamath MLA, Dr. Bharath Shetty MLA north, Vanitha Prasad the Corporator, Sri Monappa Bhandary Ex-MLC, Shakila Kava Ex-deputy Mayor were present on the occasion.

Mr. Sanjith Naik, the secretary of Shakthi Education Trust and the correspondent welcomed the gathering, Mr. Prabhakara G.S, the Principal of Shakthi P.U.College ,Smt Vidya Kamath G the principal of Shakthi Residential School and Neema Saxena the co-ordinator of Shree Gopalakrishna Pre School read out the Annual Report of their respective institutions. Baikady Janaradana Achar, the administrator of Shakthi Education Trust proposed vote of thanks. The students of the schools and college presented variety entertainment programme at the end.

ಶಕ್ತಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ

ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಪೋಷಕರು ಪ್ರತಿಯೊಂದು ವಿದ್ಯಾರ್ಥಿಯ ಮೇಲೆ ಸಮಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಶಿಕ್ಷಕರು ಹಾಗೂ ಪೋಷಕರ ನಡುವಿನ ಒಳ್ಳೆಯ ಬಾಂಧವ್ಯ, ನಂಬಿಕೆ, ಮಾತುಗಾರಿಕೆ ವಿದ್ಯಾರ್ಥಿಗಳ ಬದುಕಿನ ಔನತ್ಯಕ್ಕೆ ಸಹಕಾರಿ. ಹೆತ್ತವರುತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರವನ್ನು ನೀಡುವಲ್ಲಿಗಮನಹರಿಸಬೇಕು. ಮಾತ್ರವಲ್ಲದೆ ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಔನತ್ಯಕ್ಕೆ ಪ್ರೇರಕ ಶಕ್ತಿಯಾಗುವಲ್ಲಿ ಪ್ರಯತ್ನಿಸಬೇಕು ಎಂದು ಮುಖ್ಯ ಅತಿಥಿಯಾದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿದರು.

ಈ ವಿದ್ಯಾ ಸಂಸ್ಥೆಯು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ. ಈ ಪ್ರೋತ್ಸಾಹವು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಈ ಸಂಸ್ಥೆ ಶಿಕ್ಷಕರಿಗೆ ತಮ್ಮ ಶಾಲಾ ದಿನಗಳನ್ನು ಮರುಕಳಿಸಲು, ಮಕ್ಕಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕೊಡುತ್ತಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ವಚ್ಛತೆಯನ್ನು ಅಳವಡಿಸಬೇಕು. ಅದು ಪರಿಸರ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆಯು ಆಗಿರಬೇಕು. ಈ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳ ಬದುಕಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಸಿಗುವ ಎಲ್ಲಾ ಅವಕಾಶಗಳ ವಿದ್ಯಾರ್ಥಿಗಳು ಬಳಸುವುದರ ಮೂಲಕ ತಮ್ಮ ಭವಿಷ್ಯನ್ನು ರೂಪಿಸಿಕೊಳ್ಳಬೇಕು ಮತ್ತು ಪೋಷಕರುಇದರ ಸಂಪೂರ್ಣ ಲಾಭವನ್ನು ಪಡೆಯಬೇಕು ಎಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್ ಹೇಳಿದರು.

ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಮಾಜ ಹಾಗೂ ದೇಶಕ್ಕೆಕೊಡುಗೆಯನ್ನು ನೀಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ನಾಯಕರು. ಅವರು ವಿದ್ಯಾರ್ಥಿಗಳ ತಪ್ಪನ್ನುತಿದ್ದಿ, ಪ್ರೋತ್ಸಾಹಿಸಿ ಸರಿದಾರಿಯತ್ತ ಕೊಂಡೊಯ್ಯುವರು. ಇಂತಹ ನಾಯಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವೂ ಹೌದು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಛಲ, ಆತ್ಮವಿಶ್ವಾಸ ಹಾಗೂ ಸಮಯ ಪರಿಪಾಲನೆಗೆ ಮಹತ್ವವನ್ನು ನೀಡಬೇಕು. ಗೆಲುವನ್ನು ಸ್ವಗತವೆಂಬಂತೆ ಪರಿಗಣಿಸಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿಏನನ್ನಾದರು ಸಾಧಿಸುವ ಗುರಿಯನ್ನು ವಿದ್ಯಾರ್ಥಿದೆಸೆಯಿಂದಲೇ ಹೊಂದಿರಬೇಕು, ಇದರಿಂದ ಬದುಕು ಉತ್ತಮ ಹಾಗೂ ಸರಳ ಸುಂದರವಾಗುತ್ತದೆ ಎಂದು ಕ್ರೆ ಡೈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಿ.ಬಿ ಮೆಹ್ತ ಅವರು ಹೇಳಿದರು.

ಶಾಲೆಯ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಮಾರ್ಗವನ್ನು ಕಲಿಸಬೇಕು.ಯಾವ ವಿದ್ಯಾರ್ಥಿ ತಾನು ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ಗೌರವಿಸಿ ಜೀವನದುದ್ದಕ್ಕೂ ಸ್ಮರಿಸುತ್ತಾನೊ ಅವರ ಬದುಕು ಉಜ್ವಲವಾಗುತ್ತದೆ ಎಂದು ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ ಸದಸ್ಯ ವಿ.ಕೆ ತಾಳಿತ್ತಾಯ ಹೇಳಿದರು. ಮುಂದುವರೆದು ಹೆತ್ತವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಅವಕಾಶವನ್ನು ಆರಿಸುವ ಸ್ವಾತಂತ್ರ್ಯವನ್ನು ನೀಡಬೇಕು,ಆಗಮಾತ್ರ ವಿದ್ಯಾರ್ಥಿಗಳ ಜೀವನ ಸಾಕಾರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷರು ಶ್ರೀ ನಳಿನ್ ಕುಮಾರ್‌ ಕಟೀಲ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮಂಗಳೂರು ಉತ್ತರ ವಲಯದ ಶಾಸಕ, ಡಾ. ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಉಪ ಮೇಯರ್ ಶಕೀಲಾ ಕಾವ, ಶಕ್ತಿನಗರ ವಾರ್ಡಿನ ಕಾರ್ಪೊರೇಟರ್‌ ವನಿತಾ ಪ್ರಸಾದ್, ಕಾರ್ಪೊರೇಟರ್‌ ಕಿಶೋರ್ ಉಪಸ್ಥಿತರಿದ್ದರು.

ಶಕ್ತಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂಜೀತ್ ನಾಕ್ ವೇದಿಕೆಯಲ್ಲಿರುವವರನ್ನು ಸ್ವಾಗತಿಸಿದರು. ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ, ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್‌ ಅವರು ವಂದಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು,

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery