Shakthi Residential School, Shree Gopalakrishna Pre-school and Shakthi P.U.College in collaboration with the Department of Public Instructions, South, Mangaluru Conducted a talk on ‘New Education Policy’ on Saturday 22nd February 2020.
Dr. Mahabaleshwara Rao, the co-ordinator of Dr. T.M.A Pai college of Education, Udupi was the Resource person. He began with the Education Policy of 1986 that contained 10 core elements and 84 values proposed by NCERT and felt that it is applicable even today. The Indian Education system has been a legacy of British Education or a white man’s burden on us. We are also considered to be ‘Children of Macaulay’. But never spoke on professional college and commercialisation of Education. Today, we are in need of ‘India centred Education’ which must be much different from ‘ Urban centric’.
In the present scenario there is a need for early childhood care and Education policy. A child’s brain between the age group of 0 – 6 years is highly receptive and about 85% of its growth occurs during this period. Therefore, there is a need to expose the child to psycho motor, physical cognitive social and linguistic development of nurtured well at this age, the child would become very productive, thoughtful and empathetic he opined.
Early Childhood Care Education(ECCE) is a kind of ‘School preparedness’ that would have a flexible curriculum, no separation of age(3-6yrs) play based activity based and multilingual communication is permitted. Since ‘Every child is a miniature scientist’ there is a need to expose the child to varied sounds, indigenous art, team – work, interaction and co-operation. He also added that there is a proposal to make ECCE free and qualitative programme.
Moving on to the School education, he stated that the policy mentions the four stage design of school education. 5 + 3 + 3 + 4. First five years being foundation stage, next 3 years of preparatory stage, then the 3 years of Primary and last the Higher Secondary level. The syllabus would comprise of common core and Electives, in order to reduce the curriculum load. There is no distinction between science and Art. It should be experiment, discussion and analysis based he added.
A change in the exam system is the need of the hour. The medium of instruction upto Grade 5 should be in the mother tongue only. Digital learning, CCE and value Education is to be given emphasis. A Knowledge of India’s diversity and vastness along with the current affairs is to be introduced in the syllabus.
He concluded hoping that the New Education Policy would meet the changing dynamics of the populations requirement with regards to quality educations and innovation by equipping its students with the necessary skills and knowledge.
Representatives from 85 schools of Mangaluru participated and found satisfying response to their queries.
Dr.Prashanth Kumar, Block Education officer, Mangaluru South congratulated the host school for their social commitment and requested other schools to organise such beneficial programmes in future to the benefit of Parents, Teachers and students.
He said ‘Change is inevitable, change is constant and it is the lane of life.’ The final version of the New Education Policy has come about after filtering through more than 2 lakh suggestions received by the government and after discussions with state govt. If people with similar thoughts were given a chance or considered the outcome would have been more effective and productive, he added. There is no doubt that the students, teachers and educational institutions would get the right equipment to bring about an educational revolution, he concluded.
Smt. Vidya Kamath, the Principal of SRS welcomed the gathering, Smt. Priyanka Rai proposed the vote of thanks. Smt. RekhaD’costa compered the programme.
Sri K.C.Naik, the Managing Trustee of Shree Gopalakrishna Temple, Sri Baikady Janardana Achar, Administrator Sri Ramesh K, chief advisor, Sri Prakhyath Rai, Institute Development officer, Sri Prabhakara G.S, the principal of Shakthi P.U.College and Smt. Neema Saxena, Co-ordinator of Shree Gopalakrishna Pre School were present on this occasion.
’ಹೊಸ ಶಿಕ್ಷಣ ನೀತಿ’- ವಿಚಾರ ಸಂಕಿರಣ
ಭಾರತ ದೇಶವು ಭಾಷೆಯ, ಬಹು ನಂಬಿಕೆಯ, ಆಹಾರ ಪದ್ಧತಿ, ಬಹು ಸಂಸ್ಕೃತಿಯ ವೈವಿದ್ಯತೆಯಲ್ಲಿ ಏಕತೆಯನ್ನು ಸಾರಿದ ದೇಶ. ಭಾರತೀಯ ಪರಂಪರೆಯ ಆಧಾರವೇ ವೈವಿದ್ಯತೆಯಲ್ಲಿ ಏಕತೆ. ಈ ಮೂಲಕ ಭಾರತವು ಪ್ರಪಂಚದಾದ್ಯಂತ ಗುರುತಿಸಿ ಕೊಂಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶವು ರಾಜಕೀಯವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರ, ಇದೆಲ್ಲದಕ್ಕೂ ಕಾರಣ ನಮ್ಮ ದೇಶದಲ್ಲಿ ನೀಡುವ ಶಿಕ್ಷಣವನ್ನು ಪಡೆದು ಎಷ್ಟೇ ಭಾರತೀಯರು ತಮ್ಮ ಜ್ಞಾನ ಹಾಗೂ ಸೇವೆಯನ್ನು ವಿದೇಶಗಳಿಗೆ ಧಾರೆ ಎರೆಯುತ್ತಿದ್ದಾರೆ ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ಪಿ.ಯು. ಕಾಲೇಜು ಮತ್ತು ದಕ್ಷಿಣ ವಲಯ ಮಂಗಳೂರು ಇದರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಅವರ ಸಹಯೋಗದೊಂದಿಗೆ ನಡೆದ ’ಹೊಸ ಶಿಕ್ಷಣ ನೀತಿ’- ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿಯ ಸಂಯೋಜಕರಾದ ಡಾ. ಮಹಾಬಲೇಶ್ವರ ರಾವ್ ತಮ್ಮ ಉಪನ್ಯಾಸ ಭಾಷಣದಲ್ಲಿ ಹೇಳಿದರು.
ಒಂದು ಮಗುವಿನ ಮೆದುಳಿನ ವಿಕಾಸವು 0-6 ವರ್ಷದ ವರೆಗೆ ಆಗ್ಗಿದ್ದು ಶೇ. 85% ರಷ್ಟು ಭಾಗವನ್ನು ಈ ಹಂತದಲ್ಲಿ ಕಲಿತು ಉಳಿದ ಶೇ. 15% ಭಾಗವನ್ನು ಮುಂದಿನ ಹಂತದಲ್ಲಿ ಕಲಿಯುತ್ತದೆ. ಆದ ಕಾರಣ 6 ವರ್ಷದ ವರೆಗೆ ಮಗುವಿಗೆ ಸರಿಯಾದ ಮೌಲ್ಯಯುತ ಶಿಕ್ಷಣವನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆ ಆದ ಕಾರಣ, ಮನೆಯ ವಾತಾವರಣವೂ ಕಲಿಗೆ ಪೂರಕವಾಗಿರಬೇಕು, ಪೌಷ್ಠಿಕ ಆಹಾರವೂ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾಗಿರುವುದರಿಂದ ಮಗುವಿನ ಶಾರೀರಿಕ ಚಟುವಟಿಕೆಯೂ ಅಗತ್ಯ. ಇಂತಹ ಗಟ್ಟಿ ತಳಪಾಯ ಮಗುವಿಗೆ ಸಿಕ್ಕಿದಾಗ ಆ ಮಗು ಯೋಗ್ಯ ವ್ಯಕ್ತಿಯಾಗಿ ಸಮಾಜಕ್ಕೆ ಉಪಯುಕ್ತ ವಾತಾವರಣವನನ್ನೂ ಕಲ್ಪಿಸುವಲ್ಲಿ ಸಹಕಾರಿ ಯಾಗುವನು. ಇದು ಆಗಬೇಕಾರೆ ನಮ್ಮ ಶಿಕ್ಷಣ ನೀತಿಯಲ್ಲಿ ಹೊಸ ಬದಲಾವಣೆ ಆಗಲೇ ಬೇಕು. ೧೯೪೪ರಿಂದ ೨೦೧೯ರ ವರೆಗೆ ನಡೆದ ಹೊಸ ರೀತಿ, ಬದಲಾವಣೆಗಳ ಪ್ರಯೋಗದಿಂದ ಭಾರತವು ಇಷ್ಟು ಸಾಧನೆಯನ್ನು ಮಾಡಿದೆ. ಇದರಿಂದ ಹೊಸ ನೀತಿಯಾದ ಭಾರತ ಕೇಂದ್ರಿತ ಶಿಕ್ಷಣ (India Center Education) ಹಾಗೂ ECCE – ‘Early Childhood Care & Education’ ನೀತಿಯನ್ನು ಜಾರಿಗೆ ತರಲಿದೆ.
ಒಟ್ಟು ಹೊಸ ನೀತಿಯ ಪರಿಕಲ್ಪನೆಯು ಮಾತೃಭಾಷಾ ಹಾಗೂ ಬಹು ಭಾಷಿಯ, ಆಧುನಿಕ ತಂತ್ರಜ್ಞಾನ, ವಿದ್ಯುನ್ಮಾನ ಪ್ರಯೋಗಗಳಿಗೆ ಮಹತ್ವವನ್ನು ನೀಡುವುದರ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡಲಿದೆ. ಜೊತೆಗೆ ಇದರ ಭಾರತೀಯ ಸಂಸ್ಕೃತಿ, ಪ್ರಾದೇಶಿಕ ಇತಿಹಾಸಗಳ, ರಂಗಭೂಮಿ, ಕಲೆಗಳ ಬಗ್ಗೆ ತಿಳಿವಳಿಕೆ ಹಾಗೂ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಿದೆ.
ಶಿಶು ವಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಮಾತೃಭಾಷೆಯ ಪರಿಚಯದೊಂದಿಗೆ ಪ್ರಾದೇಶಿಕ ಭಾಷೆಗಳನ್ನು ಕಲಿಯುವ ಅಭಿರುಚಿಯನ್ನು ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಗುವಿನಲ್ಲಿ ಭಾಷಾಕಲಿಕಾ ಸಾಮರ್ಥ್ಯದ ಜೊತೆಗೆ ಸೂಕ್ಷ್ಮ ಗ್ರಹಿಕೆಯ ವಿಕಾಸವೂ ಆಗಬೇಕೆನ್ನುವ ಉದ್ದೇಶವನ್ನು ಹೊಂದಿದೆ. ಹಾಗಾಗಿ ಶಿಕ್ಷಕರು ಪೋಷಕರು ಈ ಹೊಸ ಶಿಕ್ಷಣ ನೀತಿಗೆ ಪ್ರೋತ್ಸಾಹಿಸಿ, ಹೊಸ ಶಿಕ್ಷಣ ನೀತಿಯನ್ನು ಮಕ್ಕಳಿಗೆ ನೀಡುವ ಮೂಲಕ ಪ್ರಜ್ಞಾವಂತ ದೇಶ ಸಮಾಜವನ್ನು ಕಟ್ಟಲು ಕೈ ಜೋಡಿಸೋಣ ಎಂದರು.
ಹೊಸ ಶಿಕ್ಷಣ ನೀತಿಯ ಜೊತೆಗೆ ಪ್ರಸ್ತುತ್ತ ದಿನದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆ ಜನರ ಯಾಂತ್ರಿಕ ಬದುಕು ಶಾಲೆ-ವಿದ್ಯಾರ್ಥಿಗಳ ಮಾನಸಿಕ ದೈಹಿಕ ಒತ್ತಡಗಳು, ಶಿಕ್ಷಕರ ಸೇವಾ ಅಭದ್ರತೆಯ ಕುರಿತು ಮಾತನಾಡಿದರು.
ಹಳೆಯ ಸಾಂಪ್ರದಾಯಿಕ ವಿಧಾನದಿಂದ ಹೊರಬಂದು ಹೊಸ ಸಮಾಜ ಸೃಷ್ಟಿಯಾಗಬೇಕದರೆ, ನಾವು ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲೇಬೇಕು ಎಂದರು. ಹಳೆಯ ಪರೀಕ್ಷಾ ನೀತಿ, ಪಠ್ಯಕ್ರಮವನ್ನು ಬದಲಾಯಿಸುವ ಪ್ರಯತ್ನ ಆಗಲೇ ಬೇಕು. ಇಂತಹ ಒಂದು ವೇದಿಕೆಯ ಮೂಲಕ ಹೊಸ ಶಿಕ್ಷಣ ನೀತಿಗೆ ಚಾಲನೆ ನೀಡಿದ ಶಕ್ತಿ ಎಜುಕೇಶನ್ ಟ್ರಸ್ಟ್ಗೆ ಅಭಿನಂಧನೆ ಎಂದು ದಕ್ಷಿಣ ವಲಯ ಮಂಗಳೂರು ಇದರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಹೇಳಿದರು.
ಮುಂದುವರಿದು ಹೊಸ ಶಿಕ್ಷಣ ನೀತಿಯು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಹೊಸ ಆಯಾಮವನ್ನು ನೀಡುವುದಲ್ಲದೆ ಹೊಸ ಸಮಾಜದ ನಿರ್ಮಾಣ ಸಾಧ್ಯ ಎಂದರು.
ವಿವಿಧ 84 ಶಾಲೆಗಳಿಂದ ಆಗಮಿಸಿದ 94 ಶಿಕ್ಷಕರು ಪಾಲ್ಗೊಂಡು ಕಾರ್ಯಮದ ಯಶಸ್ವಿಗೆ ಕಾರಣರಾದರು.
ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಸಿ. ನಾೖಕ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ, ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯರು ಪ್ರಭಾಕರ ಜಿ. ಎಸ್, ಶಕ್ತಿ ಎಜುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಸಂಸ್ಥೆಯ ಅಭಿವೃಧ್ಧಿ ಅಧಿಕಾರಿಗಳಾದ ಪ್ರಖ್ಯಾತ್ ರೈ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ರೇಖಾ ನಿರೂಪಿಸಿದರು. ಪ್ರಾಂಶುಪಾಲರಾದ ವಿದ್ಯಾಕಾಮತ್ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾಂಕ ವಂದಿಸಿದರು.