Shakthi PU College in Shakthinagar, Mangaluru has started online classes for the benefit of their students in and out of Karnataka state. The students of the college can fully utilise this benefit staying safe at home during lockdown. The experienced lecturers and the resource persons in the subjects concerned prepare them to face competitive examinations. The google classroom will be online for four hours a day and the students have to login to their Smartphone or computer and the subject resource persons have fully prepared in advance for online classes. Outstation students of Shakthi PU College in Arunachala Pradesh, Assam, Maharashtra, Goa and the students spread over different regions of Karnataka are very curious to make use of this benefit made available to them said Prabhakar G. S., the principal of the college.
Dr. K. C. Naik, the founder of the institution, Sanjith Naik, the secretary of Shakthi Education Trust have requested all the parents and students not to come out of their homes during corona lockdown and stay safe at homes and maintain social distancing. The students are advised to clarify their doubts about the subjects and competitive exams with their lecturers concerned.
ಶಕ್ತಿ ಪ. ಪೂ. ಕಾಲೇಜಿನಿಂದ ಲಾಕ್‌ಡೌನ್ ನಿಮಿತ್ತ ಆನ್‌ಲೈನ್ ಉಚಿತ ತರಗತಿ
ಮಂಗಳೂರು : ಶಕ್ತಿನಗರದ ಶಕ್ತಿ ಪ. ಪೂ. ಕಾಲೇಜಿನ ವತಿಯಿಂದ ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಸ್ಥೆಯಲ್ಲಿ ಓದುತ್ತಿರುವ ರಾಜ್ಯ ಹಾಗೂ ಅಂತರರಾಜ್ಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಅವರ – ಅವರ ಮನೆಯಲ್ಲಿಯೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲು ಹಾಗೂ ಇತರೆ ವಿಷಯಗಳನ್ನು ಪುನರ್ ವಿಮರ್ಶೆ ಮಾಡುವ ಸಲುವಾಗಿ ಆನ್‌ಲೈನ್ ತರಗತಿಗಳನ್ನು ಮನೆಯಲ್ಲಿಯೇ ನಮ್ಮ ಅಧ್ಯಾಪಕರು ಪ್ರಾರಂಭಿಸಿದ್ದಾರೆ. ಗೂಗಲ್ ಕ್ಲಾಸ್ ರೂಮ್ ಎಂಬ ಸಾಫ್ಟ್‌ವೇರ್ ಮೂಲಕ ಈ ತರಗತಿಗಳು ನಡೆಯುತ್ತಿದೆ. ಸದ್ಯಕ್ಕೆ ಪ್ರತಿ ದಿನ ೪ ಗಂಟೆಗಳ ತರಗತಿಗಳನ್ನು ನಡೆಸಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಅವರ – ಅವರ ಮೊಬೈಲು ಅಥವಾ ಕಂಪ್ಯೂಟರ್‌ನಲ್ಲಿ ಲಾಗಿನ್ ಆದರೆ ಸಾಕಾಗುತ್ತದೆ. ಇದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಅಧ್ಯಾಪಕರು ಮುಂಚಿತವಾಗಿ ಮಾಡಿಕೊಂಡಿರುತ್ತಾರೆ.
ಈಗಾಗಲೇ ಶಕ್ತಿ ಪ. ಪೂ. ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿರುವ ದೇಶದ ಅರುಣಾಚಲ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಈ ಪ್ರಯತ್ನ ವಿದ್ಯಾರ್ಥಿಗಳ ಪೋಷಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಗೂಗಲ್ ಕ್ಲಾಸ್ ರೂಮ್ ಆನ್‌ಲೈನ್ ತರಗತಿಗೆ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹ ಮಾಡುತ್ತಿಲ್ಲ. ಈ ತರಬೇತಿಯನ್ನು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ಕೊರೋನಾ ಹಿನ್ನಲೆಯಲ್ಲಿ, ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಮತ್ತು ಸಂಸ್ಥೆಯ ಕಾರ್ಯದರ್ಶಿ ಶ್ರೀ ಸಂಜೀತ್ ನಾೖಕ್ ಅವರು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬರಬಾರದೆಂದು ಕರೆ ನೀಡಿದ್ದಾರೆ. ಪೋಷಕರಿಗೆ ಸಮಾಜದಲ್ಲಿ ಅಂತರ ಕಾಪಾಡುವಂತೆ ಮತ್ತು ಇತರರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ. ದೇಶದ ಹಿತ ಕಾಪಾಡುವುದರಲ್ಲಿ ಎಲ್ಲರೂ ಕೈ ಜೋಡಿಸಬೇಕು. ವಿದ್ಯಾರ್ಥಿಗಳ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಅಧ್ಯಾಪಕರು ಆನ್‌ಲೈನ್ ಮೂಲಕ ಮಾರ್ಗದರ್ಶನ ನೀಡಿ ಅನುಮಾನ ಬಗೆ ಹರಿಸುವಂತೆ ನಿರ್ದೇಶಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಜಿ.ಎಸ್ ಹಾಗೂ ಎಲ್ಲಾ ಅಧ್ಯಾಪಕರು ಮಾರ್ಗದರ್ಶನ ಮಾಡುವುದಾಗಿ ತಿಳಿಸಿದ್ದಾರೆ.