‘The celebration of independence is not just restricted to 15th August, it should be incepted in every walk of life regularly. Every citizen needs to experience exhibit patriotism in his daily life’ said Sri Baikady Janardan Achar, President of SKGI Co-operative Society the Chief Guest of the 74th Independence Day. The sacrifice, the blood-shed and tears of innumerable freedom fighters is responsible for our successful Independent lives. We citizens of India aught to serve this nation with integrity and honesty to the benefit of our fellow-citizens to make the dreams of the Mahatma’s Rama Rajya come true. He opined the youth especially the children who are the future citizens of India the need to be prepared in terms of being honest, compassionate and considerate along with education. This is the job of every Parent as well as Teachers. Shakthi Group of Institutions have been successfully inculcating discipline, moral values and patriotism through various platforms to contribute valuable citizens to this nation. He blessed the Institution for a prosperous future.
Dr. K.C Naik the Managing Trustee of Shree Gopalakrishna Temple, Mr.Sanjith Naikthe Secretary of Shakthi Education Trust, Smt. Saguna C Naik the Trustee of Shakthi Education Trust, Smt. Anju Alva Naik the Member of Shakthi Education Trust, Ramesh K the Chief Advisor, PrakyathRai the Institute Development Officer, Prabhakara G.S., Principal Shakthi PU College, Vidya Kamath, Principal Shakthi Residential School, Neema Saxena, co-ordinator Shree Gopalakrishna Pre-School, Krishna Kumar Administrator Shree Gopala Krishna Temple were present.
Ashwini Pai, Hindi Teacher, spoke on the significance of the Day. Deepthi compered the Show. All Teaching and Non-Teaching Staff were present. Students and parents were connected virtually.
74 ನೇ ಸ್ವಾತಂತ್ರ್ಯ ದಿನಾಚರಣೆ
ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಕೇವಲ ಒಂದು ದಿನದ ಸಂಭ್ರಮವಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರೀಯ ಮನೋಭಾವನೆಯನ್ನು ತನ್ನ ದಿನ ನಿತ್ಯದ ಕೆಲಸದಲ್ಲಿ ನಿತ್ಯಜೀವನದಲ್ಲಿ ಮೈಗೂಡಿಸಬೇಕು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಕೆ.ಜಿ.ಐ ಕೊ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬೈಕಾಡಿ ಜನಾರ್ದನ ಆಚಾರ್ ಹೇಳಿದರು. ಇಂದು ನಾವು ಸರ್ವ ಸ್ವತಂತ್ರರಾಗಿ ಜೀವಿಸುತ್ತಿದ್ದರೆ, ಅದಕ್ಕೆ ಅಸಂಖ್ಯ ಭಾರತೀಯಕಣ್ಣೀರು, ರಕ್ತ, ಬಲಿದಾನ ಹರಿದಿದೆ. ಅದನ್ನು ಭಾರತೀಯರು ಎಂದಿಗೂ ಮರೆಯಬಾರದು. ನಾವು ನಿಸ್ವಾರ್ಥತೆಯಿಂದ, ಎಲ್ಲರ ಒಳಿತಾಗಿ, ತ್ಯಾಗ, ಸತ್ಯ, ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿಗಾಗಿ ಬದುಕಿದರೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿದೆ. ಅದಕ್ಕಾಗಿ ನಾವು ದೇಶದ ಯುವಶಕ್ತಿಯನ್ನು ತಯಾರಿ ಮಾಡಬೇಕಾಗಿದೆ. ಮಕ್ಕಳಿಗೆ ಹೆತ್ತವರು ಮತ್ತು ಶಿಕ್ಷಕರು ಉತ್ತಮ ಶಿಕ್ಷಣದೊಂದಿಗೆ ಸಹಾಯ, ತ್ಯಾಗ ಪ್ರೀತಿ, ಸ್ನೇಹ ರಾಷ್ಟ್ರೀಯತೆಯ ಮನೋಭಾವವನ್ನು ಕಲಿಸಿಕೊಡಬೇಕಾಗಿದೆ. ಶಕ್ತಿ ವಿದ್ಯಾಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಶಿಸ್ತು, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದು ದೇಶಕ್ಕೆ ಉತ್ತಮ ಪ್ರಜೆಗಳನ್ನು ಸೃಷ್ಠಿ ಮಾಡುವ ಶಕ್ತಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಒಳ್ಳೆಯ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಡಾ. ಕೆ.ಸಿ. ನಾೖಕ್, ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯಾದರ್ಶಿಯಾದ ಸಂಜೀತ್ ನಾಕ್, ಆಡಳಿತ ಮಂಡಳಿಯ ಸಗುಣ ಸಿ. ನಾೖಕ್, ಅಂಜು ಆಳ್ವ ನಾಕ್, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ್ ಜಿ ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ, ಗೋಪಾಲಕೃಷ್ಣ ಪ್ರಿ-ಸ್ಕೂಲ್ನ ನಿಮಾ ಸಕ್ಸೇನಾ, ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಾಲಾ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶ್ರೀ ಗೋಪಾಲಕೃಷ್ಣ ದೇವಾಸ್ಥನದ ಆಡಳಿತಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.
ಅಶ್ವಿನಿ ಕಾಮತ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಕು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.