Shakthi Education Trust observed Virtual Hindi Diwas on Monday 14 September 2020. Sanjith Naik, the Secretary of Shakthi Education Trust inaugurated the function. Sinchana of Grade 8 and Chiranthana D. of Grade 9 spoke on the significance of the day. Dr. Saraswathi Retired Hindi Officer, Corporation Bank, Mangaluru was the chief guest. Speaking on this occasion she said the study of languages is ignored by the parents as well as the students as they mainly focus on professional courses like Engineering and Medicine. The ethical values extracted from the story narration, poems, novels in different languages overweigh the amount that is earned from the above mentioned profession.
English has always been defended because it’s a lingua franca and because globalisation demands a thorough knowledge of the language of our colonial forefathers to secure jobs. So, we now find a pathetic scramble for admissions into English medium schools. Such is the tendency to flatter and flaunt English knowledge that people tend to forget or ignore their own mother tongue and regional language she conveyed.
Dr. Muralidhar Naik, Retired HOD Hindi Department, University college, Mangaluru also Hindi Lecturer at Shakthi PU College in his Presidential address stated that despite Hindi’s official status there is still a lack of unanimity on the positives of encouraging all citizens to acquire basic skills in the language. Despite the bitter resistance to Hindi in some parts of the country, it continues to be the most precious symbol of Indian identity. There are studies that suggest that being multilingual may help improve multitasking, make your memory better, and can also help improve your listening and hearing skills.
Our government should take a solid step to stress the importance of communication, the advantages of multi-lingual skills and also design programs open to all. India would soon become a hub of linguistic and cultural activity. Our Government has given us great hope and we can look forward to many fresh developments under the National Education Policy that would make India stand apart he said.
Chief Advisor, Ramesh K. Institute Development Officer-Prakyath Rai, Vidya Kamath G-Principal of Shakthi Residential School, Neema Saxena-Coordinator of SGK Pre-school were present along with the teaching fraternity as well as the students. The winners list of the various competitions held in connection with the Hindi Diwas was announced. Ashwini Pai and Premalatha, our Hindi Teachers were the co-ordinators.
ಇ-ಹಿಂದಿ ದಿವಸ್ ಆಚರಣೆ
ಶಕ್ತಿನಗರದ ಶಕ್ತಿ ವಸತಿ ಶಾಲೆಯಿಂದ ಆಯೋಜಿಸಲಾದ ಇ-ಹಿಂದಿ ದಿವಸ್ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಹಿಂದಿ ಅಧಿಕಾರಿ ಡಾ. ಸರಸ್ವತಿಯವರು ಹೆತ್ತವರು ತಮ್ಮ ಮಕ್ಕಳಿಗೆ ಪಠ್ಯವಿಷಯ ಕಲಿಯಲು ಪ್ರೋತ್ಸಾಹಿಸುತ್ತಾರೆ. ಮತ್ತು ಹೆತ್ತವರಿಗೆ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಆಶಿಸುತ್ತಾರೆ. ಆದರೆ ಭಾಷಾ ಪಠ್ಯ ವಿಷಯಗಳನ್ನು ಓದಲು ಉತ್ತೇಜನ ನೀಡುವುದಿಲ್ಲ. ಆ ಪಠ್ಯ ವಿಷಯಗಳು ವಿದ್ಯಾರ್ಥಿಗಳಿಗೆ ತನ್ನ ಬದುಕಿನ ಗುರಿಯನ್ನು ತಲುಪಿ, ಹಣ ಸಂಪಾದನೆಯ ವ್ಯವಹಾರಿಕ ಬದುಕಿನ ಮಾರ್ಗವನ್ನು ತಿಳಿಸುತ್ತದೆ. ಆದರೆ ಭಾಷಾ ವಿಷಯಗಳು ಹೇಳುವ ಕಥೆ, ಕವನ, ಕಾದಂಬರಿಗಳು ವಿದ್ಯಾರ್ಥಿಗಳಿಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳನ್ನು ತಿಳಿಸುತ್ತವೆ. ಮನುಷ್ಯನ ಭಾವನೆಗೆ ಸ್ಪಂದಿಸುವ ಗುಣಗಳನ್ನು ತಿಳಿಸುತ್ತದೆ. ಆದುದರಿಂದ ಹೆತ್ತವರು ಹಾಗೂ ಭಾಷಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ, ಹಿಂದಿ, ಇಂಗ್ಲೀಷ್ ಇನ್ನಿತರ ಭಾಷಾ ಅಧ್ಯಯನ ವಿಷಯಗಳ ಕಡೆಗೆ ಒಲವು ಮೂಡಿಸಬೇಕು ಎಂದು ಹೇಳಿದರು.
ಭಾಷೆಯು ದೇಶಾಭಿಮಾನವನ್ನು ಹೊಮ್ಮಿಸುವಲ್ಲಿ ಪ್ರಧಾನ ಪಾತ್ರವಹಿಸುವುದರಿಂದ ವಿದ್ಯಾರ್ಥಿಗಳು ಭಾಷಾ ವಿಷಯಗಳಲ್ಲಿ ಒಲವು ಮೂಡಿಸಿ, ಆ ಮೂಲಕ ದೇಶದ ಅಭಿವೃದ್ಧಿಯತ್ತ ಕ್ರಮ ವಹಿಸಬೇಕು ಎಂದರು.
ಹಿಂದಿ ರಾಷ್ಟ್ರೀಯ ಭಾಷೆ ಎಂದು ಮನ್ನಣೆ ಪಡೆದಿದ್ದರೂ ಭಾರತೀಯರೂ ಆಂಗ್ಲ ಭಾಷೆಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಹಿಂದಿ ಭಾಷೆಯ ಬಗ್ಗೆ ನಮಗೆಲ್ಲರಿಗೂ ಒಲವು ಇರಬೇಕು ಎಂದು ಶಕ್ತಿ ಪದವಿ ಪೂರ್ವಕಾಲೇಜಿನ ಹಿಂದಿ ಉಪನ್ಯಾಸಕರಾದ ಮುರಳಿಧರ್ ನಾಕ್ ಹೇಳಿದರು. ಇಂದು ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಲಿಯಲು ಹೆಚ್ಚಿನ ಅವಕಾಶಗಳನ್ನು ನಮ್ಮ ಕೇಂದ್ರ ಸರಕಾರವು ನೀಡಿದೆ. ಹೊಸ ಶಿಕ್ಷಣ ನೀತಿಯ ಪ್ರಕಾರ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಅಧ್ಯಯನ ಮಾಡುವ ಅವಕಾಶ ನೀಡಿದ್ದು, ಇದು ಹಿಂದಿ ಭಾಷೆಯ ಬೆಳವಣಿಗೂ, ಅಭಿಮಾನಕ್ಕೂ ಪೂರಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ಟ್ರಸ್ಟ್ನ ಆಡಳಿತಾಧಿಕಾರಿ ಡಾ ಕೆ. ಸಿ. ನಾೖಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಕು. ಸಿಂಚನಾ ಹೆಗ್ಡೆ ಮತ್ತು ಚಿರಂತನ ಹಿಂದಿ ಭಾಷಾ ದಿವಸದ ಮಹತ್ವವನ್ನು ವಿವರಿಸಿದರು. ಶಿಕ್ಷಕಿ ಅಶ್ವಿನಿ ಪೈ ಕಾರ್ಯ ನಿರೂಪಿಸಿದರು. ಶಿಕ್ಷಕಿ ಪ್ರೇಮಲತಾ ಹಿಂದಿ ದಿವಸದ ಪ್ರಯುಕ್ತ ನಡೆಸಲಾದ ಸ್ವರ್ಧೆಗಳ ವಿಜೇತರನ್ನು ಹೇಳಿ, ಪ್ರೋತ್ಸಾಹ ನುಡಿಗಳಾನ್ನಾಡಿದರು.