Call Us :
+91 96860 00046
+91 9108043552
info@shakthi.edu.in

Virtual Kannada Rajyotsava Celebration

Kannada, Kannadiga and Karnataka are interlinked and becomes meaningless when separated said Dr. Rohinaksha Shirlalu, Assistant Professor of Kannada at Karnataka Central University, Kalburgi, speaking on the occasion of Kannada Rajyotsava or Karnataka Foundation Day at Shakthi PU College, Shakthinagar, Mangaluru.

Kannada is not just a language it is the strength of kannadigas. Our Culture and Literature has taken a wonderful contour as we explore. Each language has its own style, idioms, cultural references and heritage. Children who are exposed to these features; the ideas they represent, the new vocabulary and the grammatical variation, are equipping themselves with the tools to understand the world in completely new ways.

The folks of Karnataka are its asset and are responsible for its socio-economic growth. The vast land of Karnataka has opened avenues for various occupations and Farming has brought in a lot of expansion. Let us together strive hard for its growth and sustain the urge to learn Kannada. By doing so let us draw the attention of the globe towards our state and thus create a scope for expansion in future, he stated.

Dr. K C Naik, the Administrator expressed his opinion that this years’ Rajyotsava is something very special as Kannada is given more prominence now. Prime Minister NarendraModi deserves all credits to this unique gesture where a child upto the age of 10 will compulsorily communicate in its Mother Tongue as per the National Education Policy, which is a healthy sign. Let Kannada be given due respect in all walks of life and let it not remain a days celebration, he said.

Ramesh K, the Chief Advisor, Prakyath Rai, Institute Development Officer, Sudheer M.K., Principal-in-charge of Shakthi PU College, Vidya Kamath, Principal, Shakthi Residential School, Neema Saxena, Co-ordinator, Shree Gopalakrishna Pre-School were present along with all Teaching and Non-teaching staff. The students got connected virtually.

Indrasena Reddy proposed the welcome address, Madhumitha spoke on the significance of the day, Prasad V Angadi concluded with the Vote of Thanks. Srusti compered the programme.

ಕನ್ನಡ ರಾಜ್ಯೋತ್ಸವ

ಕನ್ನಡ, ಕನ್ನಡಿಗರು, ಕರ್ನಾಟಕ ಇವು ಮೂರು ಪದಗಳು ತ್ರಿವಳಿ ಸಂಯೋಗದ ಸೂತ್ರ. ಹೇಗೆಂದರೆ ಕನ್ನಡದಿಂದ ಕನ್ನಡ ಭಾಷಿಕರು, ಕನ್ನಡ ಭಾಷಿಕರಿಂದ ಕರ್ನಾಟಕ ಈ ಮೂರು ಒಂದಕ್ಕೊಂದು ಬೆಸೆದುಕೊಂಡಿದ್ದು, ಎಂದಿಗೂ ಬೇರ್ಪಡಿಸಲಾಗದ ಬಾಂಧವ್ಯ ಅದು ಕೇವಲ ಭಾಷೆಯಲ್ಲ. ಬದುಕು ಹಾಗೂ ಭಾವನೆ. ಕರ್ನಾಟಕಕ್ಕೆ ಹಾಗೂ ಕನ್ನಡಕ್ಕೆ ಬಹಳ ವರ್ಷಗಳ ಇತಿಹಾಸ ಇದೆ. ಅದರೊಂದಿಗೆ ಭಾವನಾತ್ಮಕವಾದ ವಿಚಾರಗಳಿವೆ. ಕನ್ನಡ ಭಾಷೆ ಹಾಗೂ ರಾಜ್ಯಕ್ಕೆ ತನ್ನದೇ ಆದ ಶಕ್ತಿ ವೈಶಿಷ್ಟ್ಯತೆ ಇದೆ. ಮೊದಲನೆಯದಾಗಿ ಕರ್ನಾಟಕವು ಇತರ ರಾಜ್ಯ ದೇಶಗಳಿಗಿಂತ ಹೆಚ್ಚಿನ ಭೌಗೋಳಿಕ ವಿಸ್ತಾರ, ಆ ಮೂಲಕ ಎಲ್ಲಾ ರೀತಿಯ ಔದ್ಯೋಗಿಕ ಕೃಷಿ ಮೊದಲಾದ ಅಭಿವೃದ್ಧಿ ಸಾಧ್ಯವಿದೆ. ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆ ಮತ್ತು ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಕನ್ನಡಕ್ಕಿದೆ. ಕರ್ನಾಟಕದ ಜನಸಂಖ್ಯೆ ನಮ್ಮ ಶಕ್ತಿ. ಮಾನವ ಸಂಪನ್ಮೂಲವು ದೇಶದ ಅಭಿವೃದ್ಧಿಯ ಸಂಕೇತವಾಗಿದ್ದು ಈ ಮೂಲಕ ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಭಾಷೆ, ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಸೇರಿ ದುಡಿಯೋಣ, ಜಗತ್ತಿನ ಗಮನ ನಮ್ಮ ನಾಡು, ನುಡಿಯತ್ತ ಸೆಳೆಯುವಂತೆ ಮಾಡೋಣ, ಕನ್ನಡಕ್ಕಾಗಿ ಶ್ರಮಿಸೋಣ ಎಂದು ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ರೋಹಿಣಾಕ್ಷ ಶಿರ್ಲಾಲು ಇವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಕಾರ್ಯಕ್ರಮವನ್ನು ಉದ್ದೇಶಿಸಿ, ಈ ವರ್ಷದ ರಾಜ್ಯೋತ್ಸವ ಎಂದಿಗಿಂತಲೂ ವಿಶೇಷವಾದದು, ಏಕೆಂದರೆ ದೇಶದ ಪ್ರಧಾನಿಯವರು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಅದರಲ್ಲಿ ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಸ್ಥಾನ ಮಾನ ಸಿಗಲಿದೆ ಎಂದು ಹೇಳಿದರು ಮುಂದುವರೆದು ಕನ್ನಡತನ ಇವತ್ತು ಒಂದು ದಿನಕ್ಕೆ ಮಾತ್ರವಲ್ಲ ಅದು ಎಂದಿಗೂ ನಮ್ಮ ನುಡಿ, ಕಾರ್ಯ ಹಾಗೂ ಭಾವನೆಗಳಲ್ಲಿ ಇರಲಿ. ನಮ್ಮ ಮಾತೃಭಾಷೆ, ಧರ್ಮ, ಆಚಾರ-ವಿಚಾರ ಏನೇ ಇರಲಿ ನಾವು ಕನ್ನಡ ನಾಡಿನ ಪ್ರಜೆಗಳು ಎನ್ನುವ ಮನೋಭಾವನೆ ನಮ್ಮೆಲ್ಲರಲ್ಲೂ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಸಲಹೆಗಾರರಾದ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಗೋಪಾಲಕೃಷ್ಣ ಪೂರ್ವ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಮ್. ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಹಾಗೂ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕು. ಸೃಷ್ಟಿ ನಿರೂಪಿಸಿದರು, ಇಂದ್ರಸೇನ ರೆಡ್ಡಿ ಸ್ವಾಗತಿಸಿದರು. ಕಾರ್ಯಕ್ರಮದ ಮಹತ್ವವನ್ನು ಕು. ಮಧುಮಿತ ವಿವರಿಸಿದರು. ಪ್ರಸಾದ್ ವಿ. ಅಂಗಡಿ ವಂದಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery