Teachers are professional learners. The role of the teacher is to effectively excite a captive audience to learn. The teacher is a learner each and every minute of his life.All children have a basic human drive to learn. The teacher’s job is to convince the student that education fulfils that need. Teachers are the expert learners. They must transfer their abilities of learning to their students. Gathering little pearls of wisdom each day the teacher is able to influence pupils. The teacher must become a teacher of social skills. It is an underlying aspect of effective teaching. Teaching the curriculum through the development of social skills elaborates a student’s learning capabilities.
Learning does not begin with a blank mind. Teachers need to be careful not to be swayed by the external influences to achieve successful learning in their classrooms. Given valid opportunities, children will learn. Listen and observe your pupils and learn. Years of teaching need to tell you that you are still learning said G.R.Jagadish, the Zonal Joint-Secretary of Vidya Bharathi, speaking on the Valedictory programme of the two days training programme to the Faculty of Shakthi group of Institutions.
The District Secretary of Vidya Bharathi, Lokkayya was present along with the Administrator of Shakthi Education Trust, Dr. K.C.Naik, Chief Advisor Ramesh K, Principal in-charge of Shakthi PU College-Sudheer M K, Vidya Kamath, Principal, Shakthi Residential School, Neema Saxena, co-ordinator of Shree Gopalakrishna Pre-School.
Teachers shared their experience on two days session that included a session on Communication and Public Speaking by Parameshwara Hegde, Retd. Headmaster, Shree Sharada School, Panemangalore and Panchakosha by Sri Venkataramana Rao, Correspondent, Saraswathi Vidyalaya, Kadaba.
Rekha DCosta welcomed the gathering and Premalatha proposed the Vote of thanks. Akshatha M.G. was the Master of Ceremony.
ಶಿಕ್ಷಕರ ಪ್ರಶಿಕ್ಷಣ ವರ್ಗ – ಸಮಾರೋಪ
ಜ್ಞಾನ- ಕಲಿಕೆ ಎನ್ನುವುದು ಸರಸ್ವತಿಯ ಕೈಯಲ್ಲಿನ ಹಾರದಂತೆ ಅದು ನಿರಂತರವಾದುದು. ಅನಂತವಾದುದು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವಿಧ್ಯಾಭ್ಯಾಸ, ಜ್ಞಾನ, ಕಲಿಕೆಗಳನ್ನು ನಿರಂತರವಾಗಿ ಮುಂದುವರಿಸಬೇಕು. ಕಲಿಕಾ ಸಾಮರ್ಥ್ಯದ ಜೊತೆಗೆ ಕಲಿಕೆಯ ಗುಣಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳಿಂದ, ಸಹೋದ್ಯೋಗಿಗಳಿಂದ ನಮ್ಮಲ್ಲಿಲ್ಲದ ಒಳ್ಳೆಯ ವಿಚಾರ, ಗುಣಗಳನ್ನು ಕಲಿಯುವಗುಣವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ವಿಷಯಾಸಕ್ತಿಯ ಮನೋಭಾವನೆಯನ್ನು ಮೂಡಿಸಲು ಸಾಧ್ಯವಿದೆ. ವಿದ್ಯಾರ್ಥಿಗಳಿಂದ ನಾವು ನಿರೀಕ್ಷಿಸುವ ನೈತಿಕ ಮೌಲ್ಯಗಳನ್ನು ಸ್ವತಃ ಶಿಕ್ಷಕರೂ ತಮ್ಮ ಬದುಕಿನಲ್ಲಿ ಅಳವಡಿಸಿ ಅನುಷ್ಠಾನಕ್ಕೆ ತರುವ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಆದರ್ಶ ವ್ಯಕ್ತಿಗಳಾಗಬಹುದು ಮತ್ತು ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಕಾರಣೀಭೂತರಾಗುತ್ತಾರೆ. ಶಿಕ್ಷಕರು ಉತ್ತಮ ಶಿಕ್ಷಕರಾಗಬೇಕಾದರೆ, ಉತ್ತಮ ವಿದ್ಯಾರ್ಥಿಗಳು ಆಗಬೇಕು. ಪರಿಸರದಲ್ಲಿನ ಎಲ್ಲ ವಿಚಾರಗಳನ್ನು ಕೇಳುವ, ತಿಳಿಯುವ, ಸ್ವಭಾವವನ್ನು ಹೊಂದಿರಬೇಕು ಎಂದು ವಿದ್ಯಾ ಭಾರತೀಯ ಕ್ಷೇತ್ರಿಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಅವರು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ 2 ದಿನಗಳ ಕಾಲದ ಶಿಕ್ಷಕರ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ವಿದ್ಯಾಭಾರತಿ ದ.ಕ. ಜಿಲ್ಲೆ ಕಾರ್ಯದರ್ಶಿ ಲೋಕಯ್ಯ ಕೆ., ಶಕ್ತಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಟ್ರಸ್ಟಿ ಡಾ. ಮುರಳೀಧರ್ ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪ. ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಮ್. ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಎರಡನೇ ದಿವಸ ಪರಮೇಶ್ವರ ಹೆಗ್ಡೆ ಹಾಗೂ ಸರಸ್ವತಿ ವಿದ್ಯಾಲಯ ಕಡಬದ ಸಂಚಾಲಕರಾದ ವೆಂಕಟರಮಣ ರಾವ್ ಅವಧಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ರೇಖಾ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಲತ ವಂದಿಸಿದರು. ಶಿಕ್ಷಕಿ ಅಕ್ಷತ ಎಂ. ಜಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.