Kanakadasa is a Guru of all times- the past, present and future. It wouldn’t be an exaggeration if he is referred as ‘Lokaguru’. To remove darkness of all forms he strived and tried educating people around.
In addition to being a poet, he worked as a social reformer. He effectively used music to convey his philosophy. He was a warrior and it is interpreted in Mohanatarangini that he was seriously injured in a battle and was miraculously saved. After this incident, he gave up his profession as a warrior and devoted himself to composing music, writing literature and explaining philosophy to the common man. He composed poems which are relevant even today said Dr. B.V.Vasanth Kumar, President, Karnataka Sahithya Academy and Asst. professor in Kannada at Maharani’s Women’s College for Arts and Commerce, Mysuru, on the occasion of Virtual Kanakadasa Jayanthi at Shakthi Campus today.
Kanakadasa’s writingsshowed his innovativeness in using the day-to-day activities of the common man. He joined Haridasa movement and became a follower of Vyasaraja who named him as Kanakadasa. His poems and krithi deal with many aspects of life and expose the futility of external rituals. They stress the need for the cultivation of moral values in life. His compositions addressed social issues in addition to the devotional aspect. His poem “Kula Kula Kulavendu hodedhadadiri” asks humans not to segregate themselves from one another, because every human is born the same way none is superior or inferior to one another.
Speaking on this occasion Dr. K.C.Naik, the Administrator of Shakthi Education Trust stated that the keerthanas composed by Kanakadasa is not just writings but great influentials on mankind at all times. Many such programmes ought to be conducted to spread an awareness about such noble soul to this as well as the next generation, he concluded.
Ramesh K, Chief Advisor, Prakyath Rai, Institute Development Officer, Sudheer M.K. Principal in-charge of Shakthi PU College, Vidya Kamath, Principal Shakthi Residential School were present on this occasion along with all teaching and non-teaching staff and the students of Shakthi Group of institutions.
Pooja Nair of I PU spoke on the significance of this day, Samyak Chadaga of Grade 9 proved his efficiency in singing one of the Kanakadasa keerthanas, Akshatha M.G. welcomed the gathering, Sharanappa introduced the guest to the audience and Deepthi G proposed the vote of thanks. Premalatha P was the Master of the ceremony.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಣೆ
ಕನಕದಾಸರು ಕರ್ನಾಟಕ ಮಾತ್ರವಲ್ಲ ಲೋಕಗುರು. ಮನುಷ್ಯನ ಜೀವನದುದ್ದಕ್ಕೂ ಅಜ್ಞಾನದಿಂದ ಜ್ಞಾನದತ್ತ, ವೈಯಕ್ತಿಕ, ಕುಟುಂಬ, ಸಮೂಹ, ಸಮಾಜ, ಲೋಕದ ಕತ್ತಲನ್ನು ಕಳೆದು ಬೆಳಕಿನತ್ತ ಕೊಂಡೊಯ್ಯಲು ಪ್ರೇರಣೆ ನೀಡಿದವರು. ಮನುಷ್ಯ ತನ್ನ ಮೌಢ್ಯಾಂಧಕಾರದಿಂದ ಹೊರಬರಲು ಸಮಾಜವನ್ನು ಟೀಕಿಸಿ, ತಿದ್ದಿ, ಮನುಷ್ಯನ ಆತ್ಮಸಾಕ್ಷಾತ್ಕಾರಕ್ಕೆ ಸ್ಪೂರ್ತಿಯಾದವರು. ಈ ಜಗತ್ತಿನಲ್ಲಿ ಭಕ್ತಿಗಿಂತ ಶ್ರೇಷ್ಠವಾದ ಶಕ್ತಿ ಮತ್ತೊಂದಿಲ್ಲ ಎಂದು ತಮ್ಮ ಮೂಲಕ ಜಗತ್ತಿಗೆ ಸಾರಿದವರು. ವ್ಯಕ್ತಿಯನ್ನು ಸಮಾಜದ ಕೇಂದ್ರ ಬಿಂದುವಾಗಿಸಲು ಆತನ ಸಿರಿ ಸಂಪತ್ತು ಮಾತ್ರವಲ್ಲದೆ ಆತನ ಗುಣ, ದೋಷಗಳೂ, ದೃಷ್ಠಿಕೋನ, ನಡವಳಿಕೆಗಳೂ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಮುಂದುವರೆದು ಕನಕದಾಸರು ಸಮಾಜ, ವ್ಯಕ್ತಿ, ಭಕ್ತಿ, ಮೌಢ್ಯತೆಯ ಕುರಿತಾಗಿ ಕೀರ್ತನೆಗಳನ್ನು ಮಾತ್ರವಲ್ಲದೆ ತಮ್ಮ ಗುರು-ಶಿಷ್ಯ ಹಾಗೂ ಶಿಕ್ಷಣದ ಕುರಿತಾದ ಕೀರ್ತನೆಗಳ ಮೂಲಕ ಶಿಕ್ಷಣ ಮತ್ತು ಶಿಕ್ಷಕ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನ ಮತ್ತು ಕಲಿಕೆಯ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯಬಹುದು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಮೈಸೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ.ವಿ, ವಸಂತ್ ಕುಮಾರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಕೆ. ಸಿ. ನಾೖಕ್ ಕಾರ್ಯಕ್ರಮವನ್ನುದ್ದೇಶಿಸಿ ಕನಕದಾಸರ ಕೀರ್ತನೆಗಳು ಕೇವಲ ಬರಹವಲ್ಲ, ಅವುಗಳು ಮನುಕುಲದ ಮೇಲೆ ಬೆಳಕನ್ನು ಚೆಲ್ಲುವ ಶಕ್ತಿಯಾಗಿವೆ. ಇಂತಹ ಸಾಧಕ ಸಂತರ ಜನ್ಮದಿನಾಚರಣೆಗಳನ್ನು ಸ್ಮರಿಸಿ ಇನ್ನು ಬಹಳಷ್ಟು ಕಾರ್ಯಕ್ರಮಗಳು ನಡೆಯಬೇಕು. ಆ ಮೂಲಕ ಸಮಾಜವನ್ನು ಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಧೀರ್ ಎಂ. ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂಜಾ ನಾಯರ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿ ಸಮ್ಯಖ್ ಚಡಗಾ ಕೀರ್ತನೆಯನ್ನು ಹಾಡಿದರು. ಶಿಕ್ಷಕಿ ಅಕ್ಷತ ಸ್ವಾಗತಿಸಿದರು. ಅಧ್ಯಾಪಕರಾದ ಶರಣಪ್ಪ ಅತಿಥಿ ಪರಿಚಯ ಮಾಡಿದರು. ದೀಪ್ತಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಪ್ರೇಮಲತ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.