Call Us :
+91 96860 00046
+91 9108043552
info@shakthi.edu.in

Inauguration Street Play-An awareness on Corona

Shakthi Pre-School, Shakthi Residential School and Shakthi PU College, Shakthinagar, Mangaluru conducted the inauguration of a Month’s long street play-An awareness on Corona on 9th January at Customs Colony Dattanagar, Mangaluru.

The coronavirus pandemic has swamped the nations of the world and altered the speed, fabric and nature of our lives.As part of the global response to the pandemic, the citizens of many countries were having to stay at home. Physical distancing and isolation measures, the closure of schools and workplaces were particularly challenging for us, as they affected what we love to do, where we want to be, and who we want to be with.It is absolutely natural for each of us to feel stress, anxiety, fear, and loneliness during this time.COVID-19 has affected people’s social connectedness, their trust in people and institutions, their jobs and incomes.

The Faculty of Shakthi Group of Institutions came forward with a unique way of depicting all new experiences and the trauma that people and the frontline workers have undergone during this pandemic through a street play. The Health Club of Shakthi Residential School provided a platform for this project, which was inaugurated by Dr. Ashok H, the Nodal Officer for COVID 19, D.K.Dist. Speaking on this occasion he appreciated the task of the teachers and the precautions taken to present the same to the general public with utmost care. While analysing the statistics of COVID cases he said that the literate people were more ignorant and negligent than the illiterates. Protocols when followed accurately will definitely subside the risk he stated.

The Joint Commissioner of Mangalore Customs Joannes George C. IRS was the Chief Guest. The progress that is evident today is mainly because of our willingness to cope up with the situation, our friends and neighbours. The team work is vital to influence our living and our fight against the corona virus. He appreciated the care taken by the faculty in presenting themselves following all protocols.

Vanitha Prasad, the Corporator congratulated the team for their unique venture and conveyed her good wishes for this project and many more in future.

Dr. Jagadeesh K, Dist. Surveillance officer, Praveen Kandi, Customs Deputy Commissioner, Ramesh Chandra, Customs Assistant Commissioner, Yerri Swamy Customs Chief Accounts Officer, Sri Vinay Kumar and Sri Harish Gowda- the President & Secretary respectively of the Dattanagar Residents Association were the Guests of honour.

Dr. KC Naik the Administrator of Shakthi Education trust in his Presidential address prayed for a healthy and prosperous year 2021. He asked the audience to remain positive anddo a little to make the world better by contributing to positive changes in their communities, families, or even themselves.

Ramesh K, Chief Advisor, Prakyath Rai, Institute Development Officer, Vidya Kamath, Principal, Shakthi Residential School, Neema Saxena, Co-ordinator, Shakthi Pre-School were present on this occasion

The residents of the customs colony and Dattanagar appreciated the efforts of the teachers. Sharanappa, Kannada Teacher is the script writer and Director of the play. Muralidhar Kamath provided assistance in Music and direction.Sharanappa, welcomed the gathering, Premalatha, introduced the guest while Bhavyshri, proposed the Vote of thanks. Rekha Dcosta compered the show.

ಕೊರೋನಾ ಜಾಗೃತಿ ಬೀದಿ ನಾಟಕದ ಉದ್ಘಾಟನಾ ಸಮಾರಂಭ

ಮಂಗಳೂರು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತ ಪ ಪೂ ಕಾಲೇಜಿನ ವತಿಯಿಂದ ದತ್ತನಗರದ ಕಸ್ಟಮ್ಸ್ ಕಾಲೋನಿಯಲ್ಲಿ ಇಂದು ಕೊರೋನಾ ಜಾಗೃತಿ ಬೀದಿ ನಾಟಕದ ಉದ್ಘಾಟನಾ ಸಮಾರಂಭ.

ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನ ವತಿಯಿಂದ ಇಂದು ಬೆಳಗ್ಗೆ ೧೦:೩೦ಕ್ಕೆ ನಗರದ ದತ್ತನಗರದ ಕಸ್ಟಮ್ಸ್ ಕಾಲೋನಿಯಲ್ಲಿ ಕೊರೋನಾ ಜಾಗೃತಿಯ ಬೀದಿ ನಾಟಕದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಕೋವಿಡ್-೧೯ರ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಅಶೋಕ.ಎಚ್. ನೆರೆವೇರಿಸಿದರು ನಂತರ ಮಾತನಾಡಿದ ಅವರು ಬೀದಿ ನಾಟಕದ ಮೂಲಕ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತೆಗೆದುಕೊಂಡ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕೋವಿಡ್-೧೯ ಪ್ರಕರಣಗಳ ಅಂಕಿ ಅಂಶಗಳನ್ನು ವಿಶ್ಲೇಷಿಸುವಾಗ ಅಕ್ಷರಾಭ್ಯಾಸ ಇಲ್ಲದಿರುವವರಿಗಿಂತ ಅಕ್ಷರಾಭ್ಯಾಸವನ್ನು ಪಡೆದಿರುವವರು ಹೆಚ್ಚು ಅಜ್ಞಾನ ಹಾಗೂ ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಹೇಳಿದರು. ಕೋವಿಡ್‌ನ ನಿಯಮಾವಳಿಯನ್ನು ಹೆಚ್ಚು ಪಾಲನೆ ಮಾಡುತ್ತಿದ್ದರೆ ಸಾವು ನೋವಿನ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಮಂಗಳೂರು ಕಸ್ಟಮ್ಸ್‌ನ ಜಂಟಿ ಆಯುಕ್ತರಾದ ಜೋವಾನ್ನೆಸ್ ಜಾರ್ಜ್ ಸಿ., ಐಆರ್‌ಎಸ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಈಗಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಮ್ಮ ಸ್ನೇಹಿತರು ಮತ್ತು ನೆರೆಹೊರೆಯವರು ಹೆಚ್ಚಿನ ಪ್ರಯತ್ನ ಪಟ್ಟಿದ್ದಾರೆ. ಕರೋನಾ ವೈರಸ್ ನಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರದಂತೆ ಮಾಡಲು ನಾವು ಹೆಚ್ಚಿನ ಜಾಗೃತಿ ಹೊಂದುವ ಅವಶ್ಯಕತೆಯಿದೆ ಎಂದು ಹೇಳಿದರು. ಎಲ್ಲಾ ನಿಯಾಮವಳಿಯನ್ನು ಅನುಸರಿಸಿ ಬೀದಿನಾಟಕವನ್ನು ಆಯೋಜಿಸಿರುವ ಅಧ್ಯಾಪಕರ ಕಾರ್ಯವನ್ನು ಅವರು ಶ್ಲಾಘಿಸಿದರು. ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್ ಮಾತನಾಡಿ ಸಮಾಜದಲ್ಲಿ ನಾವು ಕೊರೋನಾ ವೈರಸ್‌ನ ವಿರುದ್ಧ ಜಾಗೃತವಾಗಬೇಕು. ಈ ಹಿನ್ನಲೆಯಲ್ಲಿ ಶಕ್ತಿ ಸಂಸ್ಥೆ ಹಮ್ಮಿಕೊಂಡಿರುವ ಕೆಲಸ ಶ್ಲಾಘನೀಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಸಂಸ್ಥೆಯ ಅಧ್ಯಕ್ಷರಾದ ಡಾ.ಕೆ.ಸಿ ನಾಕ್ ಮಾತನಾಡಿ ೨೦೨೧ರಲ್ಲಿ ಎಲ್ಲರಿಗೂ ಆರೋಗ್ಯ ಮತ್ತು ಸಮೃದ್ಧವಾದ ವರ್ಷವಾಗಲಿ ಎಂದು ಪ್ರಾರ್ಥಿಸಿದರು. ನಮ್ಮ ಸುತ್ತುಮುತ್ತಲಿನ ಎಲ್ಲಾ ಜನರು ಆರೋಗ್ಯವಾಗಿರಲು ನಾವೆಲ್ಲರೂ ಜಾಗೃತರಾಗಬೇಕು. ಈ ಹಿನ್ನಲೆಯಲ್ಲಿ ಎಲ್ಲರು ಇಂತಹ ಜಾಗೃತಿಯ ಕಾರ್ಯಕ್ರಮವನ್ನು ಆಯೋಜಿಸೋಣ ಎಂದು ಹೇಳಿದರು.

ಬೀದಿ ನಾಟಕದ ಉದ್ದೇಶ:
ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು ಯಾವುದೇ ರೀತಿಯ ಭಯವನ್ನು ಪಡದೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ಸಮಾಜದಲ್ಲಿ ಬದುಕುವುದು ಈ ನಾಟಕದ ಉದ್ದೇಶ. ಮುಂದಿನ ದಿನಗಳಲ್ಲಿ ಲಸಿಕೆ ಬರುವ ತನಕ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡುವುದು, ರೋಗದ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಇದರ ಸಾರಾ. ಇದರಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕ – ಶಿಕ್ಷಕೇತರರು ಅಭಿನಯಿಸಿರುತ್ತಾರೆ.

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಕೋವಿಡ್ ಜಾಗೃತ ದಳದ ಅಧಿಕಾರಿ ಡಾ. ಜಗದೀಶ ಕೆ., ಕಸ್ಟಮ್ಸ್‌ನ ಉಪ ಆಯುಕ್ತರಾದ ಪ್ರವೀಣ್ ಕಂಡಿ, ಕಸ್ಟಮ್ಸ್ ಸಹಾಯಕ ಆಯುಕ್ತರಾದ ರಮೇಶ್ಚಂದ್ರ, ಕಸ್ಟಮ್ಸ್ ಪ್ರಧಾನ ಲೆಕ್ಕಾಧಿಕಾರಿ ಹೀರೆ ಸ್ವಾಮಿ, ದತ್ತನಗರ ನಾಗರಿಕ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್, ಮತ್ತು ಕಾರ್ಯದರ್ಶಿ ಹರೀಶ ಗೌಡ, ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊರೋನಾ ಜಾಗೃತಿ ಬೀದಿ ನಾಟಕದ ರಚನೆಯನ್ನು ಶಾಲೆಯ ಕನ್ನಡ ಅಧ್ಯಾಪಕರಾದ ಶರಣಪ್ಪ ಮಾಡಿದ್ದಾರೆ. ನಾಟಕಕ್ಕೆ ಸಂಗೀತಾ ಹಾಗೂ ನಿರ್ದೇಶನವನ್ನು ಮುರಲೀಧರ್ ಕಾಮತ್, ಕಾರ್ಯಕ್ರಮದ ಸ್ವಾಗತವನ್ನು ಹಿಂದಿ ಅಧ್ಯಾಪಕಿ ಪ್ರೇಮಲತಾ, ಧನ್ಯವಾದವನ್ನು ಭವ್ಯಶ್ರೀ ಹಾಗೂ ರೇಖಾ ಡಿ ಕೋಸ್ಟ ನಿರೂಪಣೆಯನ್ನು ಮಾಡಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery