Fresher’s Day is a way to welcome new comers in a college.It is the day where seniors and juniors finally bond and unite to celebrate being part of the college.
Dr. Shikaripura Krishna Murthy was the Chief Guest and key note speaker on this occasion. He spoke on the few secrets of success that makes a difference in one’s life like the appearance, skill, trait, interest, cognition, concern, will power, situational engineering, learning from experience etc. The interpersonal discipline and personal discipline traits like ahimsa,satya, asteya, brahmacharya, aparigraha, shaucha, santosha, tapas, swadhyaya and Ishwara pranidhana was also discussed and made known.
The Secretary, Sanjith Naik said “Fresher’s Day is a special day, a beginning of new opportunity to your bonding. Very importantly the PUC days are the most important days of your life. Believe me when you go out of this world this network of new friends that you make here will help you go a long way far.During these two years you can easily slip and your mind may wander but still you may make a comeback, by then you may lose your precious time. Be serious and stay focused in all aspects both academics and co-curricular, it would help you succeed and yield a fruitful life”.
‘Fresher’s Day is to welcome new students in college’s friendly atmosphere and to encourage their creative impulses to boost their confidence and pursue their passion. These types of celebrations help juniors to mingle with seniors and form a splendid co-ordination. This leads to a better understanding among all and a feeling of co-operation is fostered’ said Ramesh K, the Chief Advisor.
‘Let your dreams come true and help you acquire successful life. Whether you opt science or commerce, there is no shortcut to success. Work hard to reach your goal now and have a better future. The fruits of hard work could be benefitted in the near future. If you are determined to work no one can stop you. Be good and do good to have fruitful life’ said Sudheer M.K, the Principal in-charge.
Dr. K.C.Naik in his presidential address asked the students to ‘Rise to the occasion and added that we are second to none. The students need to make a self-analysis of what you wish to be and accordingly focus. We have learnt from our mistakes but you cannot make mistakes now he concluded.
Chetana, student representative requested the juniors to consider themselves lucky to have enrolled in this college. ‘All your dreams and aims could be accomplished with the timely guidance from all our lecturers’ she opined.
The event created many memories for the first year students and their seniors alike with an array of cultural programs like Bharatanatyam, semi classical dance, singing, instrumental music etc.
Prakyath Rai, Institute Development Officer, Vidya Kamath G,Principal Shakthi Residential School, all staff and students were present on this occasion.
ಶಕ್ತಿ ಪದವಿ ಪೂರ್ವ ಕಾಲೇಜಿನ ಕಿರಿಯ ವಿದ್ಯಾರ್ಥಿಗಳ ಸ್ವಾಗತದ ಕಾರ್ಯಕ್ರಮ
ಮಂಗಳೂರು ಮಾ 2೦ : ಶಕ್ತಿನಗರದ ಶಕ್ತಿ ಪ ಪೂ ಕಾಲೇಜಿನ ದ್ವಿತೀಯ ಪ ಪೂ ವಿದ್ಯಾರ್ಥಿಗಳು ಪ್ರಥಮ ಪ ಪೂ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಸಂಸ್ಕೃತ ಮುಖ್ಯಸ್ಥರಾದ ಡಾ. ಶಿಕಾರಿಪುರ ಕೃಷ್ಣ ಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನೋಟ, ಕೌಶಲ್ಯ, ಗುಣಲಕ್ಷಣ, ಆಸಕ್ತಿ, ಅರಿವು ಕಾಳಜಿ, ಇಚ್ಛಾಶಕ್ತಿ, ಛಲ, ಇವು ಯಶಸ್ಸಿನ ಕೆಲವು ರಹಸ್ಯಗಳಾಗಿವೆ ಎಂದು ಹೇಳಿದರು.
ಅಹಿಂಸಾ, ಪರಸ್ಪರ ಶಿಸ್ತು ಮತ್ತು ವೈಯಕ್ತಿಕ ಶಿಸ್ತು, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪಸ್ಸು, ಸ್ವಾದ್ಯಾಯ ಕುರಿತಂತೆ ವಿದ್ಯಾರ್ಥಿಗಳು ಇವುಗಳನ್ನು ಹೇಗೆ ಅಳವಡಿಸಬೇಕೆಂಬುವುದನ್ನು ತಿಳಿಸಿದರು. ನಾವು ಓದುವಿಕೆಗೆ ಹೆಚ್ಚು ಗಮನ ನೀಡಬೇಕು. ಛಲದಿಂದ ಎಲ್ಲವನ್ನು ಸಾಧಿಸಲು ಸಾಧ್ಯವೆಂಬುವುದನ್ನು ಅವರು ತಿಳಿಸಿದರು. ನಮ್ಮ ಯಶಸ್ಸಿನ ಮೆಟ್ಟಲನ್ನು ನಾವೇ ಕಟ್ಟಬೇಕು. ಅದಕ್ಕೆ ಕಾಲೇಜಿನ ಶಿಕ್ಷಕರ ಸಹಾಯವನ್ನು ತೆಗೆದುಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಕ್ ಮಾತನಾಡಿ ಇದೊಂದು ವಿಶೇಷ ದಿನ, ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬುವುದನ್ನು ಇದು ತೋರಿಸುತ್ತದೆ. ಪ್ರಮುಖವಾಗಿ ಪ ಪೂ ಜೀವನವು ನಮ್ಮ ಜೀವನದ ಪ್ರಮುಖ ಘಟ್ಟ. ಹೊಸ ಸ್ನೇಹಿತರ ಪರಿಚಯ ನಮ್ಮ ಓದುವಿಕೆಗೆ ಸಹಕಾರಿಯಾಗುತ್ತದೆ. ನಿಮ್ಮ ಅಮೂಲ್ಯ ಸಮಯವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ನೀವು ಸದಾ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಆ ಮೂಲಕ ಯಶಸ್ವಿಯಾಗಬಹುದು.
ಕಾಲೇಜಿನಲ್ಲಿ ಸ್ನೇಹಿತರ ವಾತಾವರಣದಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸವುದು ಮತ್ತು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳ ಜೊತೆ ಬೆರೆಯಲು ಇದು ಸಹಕಾರಿಯಾಗುತ್ತದೆ. ಇದರಿಂದಾಗಿ ಎಲ್ಲರ ನಡುವೆ ಉತ್ತಮ ತಿಳುವಳಿಕೆ ಮತ್ತು ಸಹಕಾರದ ಭಾವನೆಗಳು ಬರುತ್ತದೆ. ಎಂದು ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಸುಧೀರ್ ಎಂ.ಕೆ ಮಾತನಾಡಿ ನಿಮ್ಮ ಕನಸುಗಳು ನನಸಾಗಲಿ ಮತ್ತು ಯಶಸ್ವಿ ಜೀವನವನ್ನು ಪಡೆಯಲು ಸಹಾಯವಾಗಲಿ. ನೀವು ವಿಜ್ಞಾನ ಮತ್ತು ವಾಣಿಜ್ಯವನ್ನು ಆಯ್ಕೆ ಮಾಡಿಕೊಂಡರು ಅದರಲ್ಲಿ ಯಶಸ್ಸನ್ನು ಕಾಣಬೇಕೆಂದು ಹೇಳಿದರು. ಕಠಿಣ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಪ್ರಯೋಜನವನ್ನು ಪಡೆಯಬಹುದೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್ ವಿದ್ಯಾರ್ಥಿಗಳು ನೀವು ಏನಾಗಬೇಕೆಂಬುದರ ಬಗ್ಗೆ ಸ್ವಯಂ ವಿಶ್ಲೇಷಣೆ ಮಾಡಬೇಕಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ನಡೆಯಬೇಕು. ನಾವು ತಪ್ಪು ಮಾಡಿದರು ಅದನ್ನು ತಿದ್ದಿಕೊಂಡು ಸರಿ ದಾರಿಯಲ್ಲಿ ನಡೆಯಬೇಕೆಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಚೇತನಾ ಮಾತನಾಡಿ ಈ ಕಾಲೇಜಿನಲ್ಲಿ ಸೇರಲು ನಾವು ಅದೃಷ್ಟ ಮಾಡಿದ್ದೇವೆ. ಇಲ್ಲಿ ಎಲ್ಲಾ ಉಪನ್ಯಾಸಕರು ಸರಿಯಾದ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಇದು ನಮ್ಮನ್ನು ಸರಿದಾರಿಯಲ್ಲಿ ಹೋಗಲು ಪ್ರೇರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಥಮ ಪ ಪೂ ವಿದ್ಯಾರ್ಥಿಗಳು ಭರತನಾಟ್ಯ, ಅರೆ ಶಾಸ್ತ್ರೀಯ ನೃತ್ಯ, ಹಾಡುಗಾರಿಕೆ, ವಾದ್ಯ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು. ಸ್ವಾಗತವನ್ನು ದ್ವಿತೀಯ ಪ. ಪೂ. ವಿದ್ಯಾರ್ಥಿ ಶಿವನ್, ವಂದನಾರ್ಪಣೆಯನ್ನು ಧನ್ಯಶ್ರೀ ಹಾಗೂ ಶ್ರಾವಣಿ ಶೆಟ್ಟಿ ನಿರೂಪಿಸಿರು.