“Our thinking should go beyond our home and we youngsters should start thinking about our Mother Land. America will think of Economy, Europe about trade and commerce while India speaks of sacrifice and renunciation. The tradition of sacrifice is seen in Indians. Indians are not about money, not about followers or profession but sacrifice only” said Sri Rajesh Padmar, Lecturer in Biology, renowned orator, social activist and a hobby journalist in his key note address on the martyrs, who have received the highest military award Param Vir Chakra for displaying their valour during wartime.
A special lecture was arranged to mark the sacrifices of Bhagath singh, Sukhdev Thapar and Shivaram Rajguru at Shakthi. Sri Rajesh Padmar also briefed on the making of Param Vir Chakra and its recipients. He also spoke of the Peace time Awards and the War time Awards.
Dr. K.C.Naik, the Administrator of Shakthi Education Trust presided over the function. Ramesh K, the Chief Advisor, Prakyath Rai-Institute Development Officer, Sudheer M.K. Principal in-charge of Shakthi PU College, Neema Saxena, Co-ordinator of Shakthi Pre-School, all teaching and non-teaching staff and Students were present on this occasion.
Vidya Kamath G, Principal Shakthi Residential School proposed the welcome address and introduced the guest. Sharanappa, Kannada Teacher compered the show and proposed the vote of thanks.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಬಲಿದಾನ್ ದಿವಸ್
ಭಾರತ ದೇಶವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಾಷ್ಟ್ರಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಯೋಚಿಸುತ್ತದೆ. ಆದರೆ ತ್ಯಾಗ ಮತ್ತು ದಾನದ ಕುರಿತು ಯೋಚಿಸುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಅಂತಹ ಶ್ರೇಷ್ಠ ಭೂಮಿಯಲ್ಲಿ ಜನಿಸಿದ ನಮ್ಮ ಆಲೋಚನೆಗಳು, ಐಶಾರಾಮ, ಆಡಂಭರದ ಜೀವನವನ್ನು ಮೀರಿ ಜನ್ಮಭೂಮಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಕ್ರಾಂತಿ, ಕಿಚ್ಚಿನ ಕಡೆ ಹೊರಳಬೇಕು ಎಂದು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಪದ್ಮಾರ್ ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಬಲಿದಾನ್ ದಿವಸ್ನ ಕಾರ್ಯಕ್ರಮದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಪರಮವೀರ ಚಕ್ರ ಪುರಸ್ಕೃತರಾದ ಭಗತ್ಸಿಂಗ್, ಸುಖ್ದೇವ್ ತಾಪರ್ ಮತ್ತು ಶಿವರಾಮ್ ರಾಜ್ಗುರು ಅವರ ದೇಶಾಭಿಮಾನ, ಸ್ವಾತಂತ್ರ್ಯದ ಕಿಚ್ಚು, ದೇಶಕ್ಕಾಗಿ ಪ್ರಾಣ ತ್ಯಾಗದ ಧೈರ್ಯವನ್ನು ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿ ಇಂದಿನ ಯುವಕರಿಗೆ ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯ ಕುರಿತು ಜ್ಞಾನ, ಮಾರ್ಗದರ್ಶನ ಶಾಲೆ, ಕಾಲೇಜುಗಳಲ್ಲಿ ಸಿಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ, ಪ್ರಧಾನ ಸಲಹೆಗಾರರಾದ ರಮೇಶ ಕೆ., ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಸುಧೀರ್ ಎಂ.ಕೆ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಹಾಗೂ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.
ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಸ್ವಾಗತಿಸಿ ಅತಿಥಿಯನ್ನು ಪರಿಚಯಿಸಿದರು. ಕನ್ನಡ ಶಿಕ್ಷಕರಾದ ಶರಣಪ್ಪ ಧನ್ಯವಾದ ಸಮರ್ಪಿಸಿದರು.