Shakthi PU College, Dakshina Kannada District Biology Lecturers associationand Dakshina Kannada PUC Principal’s Association jointly hosted a one day workshop at Reshma Memorial Auditorium, Shakthinagar. Sri Mohammad Imthiyaz, DDPU inaugurated the programme by lighting the lamp. ‘There is no doubt that a lot of information is available in this internet era but the lecturers have to promote themselves to the requirement of this competitive world. Only when we upgrade ourselves we can expect to bring in a change in students. Let us all strive to the benefit of our children and proceed further by accepting new knowledge’ he said.
‘In the whole of Karnataka, D.K.District has achieved good results in PU because of this type of seminars and workshops. Let the outstanding results continue to pour in’ said Sri Ramesh K, the Chief Advisor of Shakthi Education Trust as the Chief Guest on this occasion.
Umesh Karkera, President of DKPUC Principals’ Association orated that ‘The student’s achievement so far is mainly because of the cooperative endeavor of our lecturers. Even during the pandemic the persistent efforts of our lecturers in uploading relevant subject videos on YouTube is most appreciable’.
Dr.K.C.Naik, the Administrator of Shakthi Education Trust in his presidential address opined that ‘For the all-round development and improvisation of a child, the teacher’s role is very important. Such workshops need to be planned and executed very often’.
Sudheer M.K. Principal-in-charge of Shakthi PU College, The Founder President of Biology Lecturers Association Sukumar Jain, the present President Vinay Kumar Shetty were present on the dais.
Felicitation to the newly appointed Principals and to the Retired Biology Principals and Lecturers was taken up. Students who bagged cent percent score in Biology were also honoured with a cash Prize.
The President Vinay Kumar Shetty welcomed the gathering while Deekshith Rai, the Secretary of the Association proposed the vote of thanks. Rekha Baikady compered the show.
ಶಕ್ತಿ ಪ. ಪೂ. ಕಾಲೇಜಿನಲ್ಲಿ ಜಿಲ್ಲಾ ಪ. ಪೂ. ಜೀವಶಾಸ್ತ್ರ ಉಪನ್ಯಾಸಕರ ಕಾರ್ಯಗಾರ
ಮಂಗಳೂರು ಮಾ. 31 : ಶಕ್ತಿನಗರ ಶಕ್ತಿ ಪ. ಪೂ. ಕಾಲೇಜಿನ ಸಹಯೋಗದೊಂದಿಗೆ ದ.ಕ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘ ಜಂಟಿ ಆಶ್ರಯದಲ್ಲಿ ಇಂದು ಒಂದು ದಿನದ ಜಿಲ್ಲಾ ಪಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಗಾರ ನಡೆಯಿತು. ಈ ಕಾರ್ಯಗಾರವನ್ನು ದೀಪ ಬೆಳಗಿಸುವುದರ ಮೂಲಕ ದ.ಕ ಜಿಲ್ಲಾ ಪ ಪಊ ಉಪನಿರ್ದೇಶಕರಾದ ಶ್ರೀ ಮಹಮ್ಮದ್ ಇಮ್ತಿಯಾಜ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇಂಟರ್‌ನೆಟ್ ಯುಗದಲ್ಲಿ ಕಲಿಯಲು ಸಾಕಷ್ಟು ಮಾಹಿತಿ ಸಿಗುತ್ತದೆ. ಉಪನ್ಯಾಸಕರು ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದ ರೀತಿಯಲ್ಲಿ ತಯಾರಿಯನ್ನು ಮಾಡಬೇಕಾಗುವುದು ಅನಿವಾರ್ಯವಾಗಿದೆ. ನಾವು ಮೇಲ್ದರ್ಜೆಗೆ ಏರಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳ ವಿಕಾಸಕ್ಕೆ ನಾವು ಕಟಿಬದ್ಧರಾಗಿ ಕೆಲಸ ನಿರ್ವಹಿಸಬೇಕು. ಈ ಹಿನ್ನಲೆಯಲ್ಲಿ ಹೊಸ ಹೊಸ ವಿಚಾರವನ್ನು ತಿಳಿದುಕೊಂಡು ಮುನ್ನಡೆಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ದ.ಕ ರಾಜ್ಯದಲ್ಲಿಯೇ ಪ ಪೂ ಶಿಕ್ಷಣದಲ್ಲಿ ಫಲಿತಾಂಶ ತರುವಲ್ಲಿ ಇಂತಹ ಕಾರ್ಯಗಾರ ಮಾರ್ಗದರ್ಶನವನ್ನು ನೀಡಿದೆ ಎಂದು ಹೇಳಿದರು. ಪ ಪೂ ಶಿಕ್ಷಣ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿಯು ದ.ಕ ಮುಂಚೂಣಿಯಲ್ಲಿರಲಿ ಎಂದು ಶುಭ ಹಾರೈಸಿದರು.
ದ.ಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ ಕರ್ಕೇರ ಮಾತನಾಡಿ ಉಪನ್ಯಾಸಕರ ಸಹಕಾರ ಮನೋಭಾವನೆಯಿಂದ ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿದೆ. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ರಾಜ್ಯದ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ತರಗತಿಯನ್ನು ನಡೆಸಿಕೊಟ್ಟಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮ ಅಧಕ್ಷತೆಯನ್ನು ವಹಿಸಿ ಶಕ್ತಿ ಶಿಕ್ಷಣ ಸಂಸ್ಥೆಯ ಸ್ಥಾಪಕರು ಹಾಗೂ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಮಾತನಾಡಿ ಶಿಕ್ಷಣದ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರ ಪಾತ್ರ ಬಹು ಮುಖ್ಯವೆಂದು ಹೇಳಿದರು. ಇಂತಹ ಕಾರ್ಯಗಾರವು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಸುಧೀರ್ ಎಂ.ಕೆ, ದ.ಕ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಸ್ಥಾಪಕಾಧ್ಯಕ್ಷರಾದ ಶ್ರೀ ಸುಕುಮಾರ್ ಜೈನ್, ದ.ಕ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ವಿನಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದವರಿಗೆ ಮತ್ತು ನಿವೃತ್ತರಾದ ಜೀವಶಾಸ್ತ್ರ ಉಪನ್ಯಾಸಕರು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಹಾಗೆಯೇ ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಜೀವಶಾಸ್ತ್ರ ವಿಷಯದಲ್ಲಿ ನೂರರಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ವಿನಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಸಂಘದ ಕಾರ್ಯದರ್ಶಿ ದೀಕ್ಷಿತ್ ರೈ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರೇಖಾ ಬಿ. ಬೈಕಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.