Shakthi PU College, Shakthinagar welcomed Prof. Raja Ram Rao as its new Principal.The Principal in-charge Sudheer M.K. welcomed him with a bouquet and handed over the charge to him.
Prof. Raja Ram Rao has a vast experience of 30 years of teaching mathematics in and around Mangaluru. He has served as a lecturer in Mathematics for 25 years in Canara PU College. He was the Principal as well as the Academic Administrator at Vikas PU College for 3 years. Raja Ram Rao has been in the panel of the PU Board question paper setter and the PU text book committee. Trained myriads of students to face the CET and JEE exams. With this immense experience in hand Shakthi group of institutions feel blessed to have such a knowledgeable person in chair.
Dr.K.C.Naik, the Administrator, Sanjith Naik, Secretary, Ramesh K,the Chief Advisor, Prakyath Rai, the Institute Development Officer, Vidya Kamath, Principal Shakthi Residential School, Neema Saxena, Coordinator Shakthi Pre-school, all teaching and Non-teaching staff congratulated him on this occasion.
ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾಗಿ ಶ್ರೀ ರಾಜರಾಮರಾವ್ ಟಿ. ನೇಮಕ
ಮಂಗಳೂರು ಎ. 08 : ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿ ಶ್ರೀ ರಾಜರಾಮರಾವ್ ಟಿ. ನೇಮಕವಾಗಿರುತ್ತಾರೆ. ಇವರಿಗೆ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಂ.ಕೆ. ಹೂಗುಚ್ಛ ನೀಡುವುದರ ಮೂಲಕ ನೂತನ ಜವಾಬ್ದಾರಿಯನ್ನು ವಹಿಸಿಕೊಟ್ಟರು.
ಶ್ರೀ ರಾಜರಾಮರಾವ್ ಟಿ. ಇವರು ಮಂಗಳೂರಿನ ಪ್ರತಿಷ್ಠಿತ ಕೆನರಾ ಪ. ಪೂ. ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ 25 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ ವಿಕಾಸ್ ಪ ಪೂ ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ದ್ವಿತೀಯ ಪ ಪೂ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆಯ ರಚನಾ ಸಮಿತಿ ಸದಸ್ಯರಾಗಿ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಮಾನವ ಸಂಪನ್ಮೂಲ ತರಬೇತುದಾರರಾಗಿ ಮಾರ್ಗದರ್ಶನ ಮಾಡಿರುತ್ತಾರೆ. ಇವರು ಸಿಇಟಿ, ಜೆಇಇಗೆ ಸಾಕಷ್ಟು ಪಾಠ ಮಾಡಿರುವ ಅನುಭವವಿರುತ್ತದೆ. ಇವರು 30 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಶಕ್ತಿ ಪ ಪೂ ಕಾಲೇಜನ್ನು ಇನ್ನು ಮುಂದೆ ಮುನ್ನಡೆಸಲಿದ್ದಾರೆ.
ಅಭಿನಂದನೆ: ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್, ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ದಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ. ಜಿ. ಕಾಮತ್, ಶಕ್ತಿ ಪ ಪೂ ಕಾಲೇಜಿನ ಶಿಕ್ಷಕ-ಶಿಕ್ಷಕೇತರರು ನೂತನ ಪ್ರಾಂಶುಪಾಲರಿಗೆ ಅಭಿನಂದನೆಯನ್ನು ಸಲ್ಲಿಸಿದರು.