“The sacrifice, strength and extreme sufferings of our Freedom Fighters, Social Reformers must be recalled, remembered and passed on to the next generations. Celebrate small occasions like Raksha Bandhan that depicts our culture which arouse the Nations reliability for generations to come.The occasion of Raksha Bandhan involves a pledge of life-time practice of moral, cultural and spiritual values. The values and the sentiments attached to the rituals of this festival are worth inculcating by the whole human race, the sentiments of harmony and peaceful coexistence” said Suresh, RSS Pracharak of Mangaluru as the Chief Guest speaking on the occasion of Raksha Bandhan celebrations at Shakthi.
“It is our responsibility to take care of a sapling or a drop of water that in turn would take care of us. Take care of your body and that in turn will take care of you. It is necessary to survive in pollution free, drug free, socially aware environment with brotherhood sentiments that leads to National integrity, he added.
Basavesh, Joint Organising Secretary of ABVP, Karnataka stated that “Raksha Bandhan symbolizes the unmatched bond of love, care and respect. But in a broader perspective the festival of Raksha Bandhan conveys an intrinsic message of universal brotherhood and sisterhood. The festival of Rakhi celebrated in Educational institutions conveys a message that has socio spiritual significance emphasising the need for nurturing of positive qualities, purity in thought, word and deed”.
Dr. K.C.Naik in his Presidential Address shared that “Rakhi festival celebration is not just restricted to a particular state or place. It is celebrated nationwide. These rituals not only strengthen the bond of love, but also transcends the boundaries of the family. This helps to broaden ones’ vision beyond the borders of one’s own family to the entire earth as one family”.
Prasanna Darbe, Trustee Kukke Shree Subramanya Temple, Institute Development officer Prakyath Rai, Prof. T.Rajaram Rao, Principal Shakthi PU College, Vidya Kamath G, Principal Shakthi Residential School, all teaching and non-teaching staff were present on this occasion.Rakhi’s were tied to all the men colleagues by their counterparts.
Ramesh K, the Chief Advisor welcomed the gathering and introduced the guests. Premalatha P, Hindi teacher spoke on the significance of the celebrations. Rekha Dcosta, Kannada teacher proposed the Vote of Thanks. Sharanappa, Kannada Teacher compered the show.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ರಕ್ಷಾ ಬಂಧನ
ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರಕ ಶ್ರೀ ಸುರೇಶ ಆಗಮಿಸಿದರು. ನಂತರ ಮಾತನಾಡಿದ ಅವರು ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರ ತ್ಯಾಗ, ಬಲಿದಾನವನ್ನು ನಾವು ನೆನಪಿಸಿಕೊಳ್ಳಬೇಕು ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆಂದು ಹೇಳಿದರು. ರಕ್ಷಾ ಬಂಧನವನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿಯು ಪುನರಾವರ್ತನೆಯಾಗುತ್ತದೆ. ಇದು ಮುಂದಿನ ಪೀಳಿಗೆಗೆ ವಿಶ್ವಾಸಾರ್ಹತೆಯನ್ನು ಹುಟ್ಟುಹಾಕುತ್ತದೆ. ರಕ್ಷಾಬಂಧನವು ನೈತಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುತ್ತದೆ. ಈ ಹಬ್ಬದ ಆಚರಣೆಯಿಂದ ಮೌಲ್ಯಗಳು ಮತ್ತು ಭಾವನೆಗಳನ್ನು ಇಡೀ ಮಾನವ ಜನಾಂಗ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯ ಭಾವನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಒಂದು ಸಸಿ ಅಥವಾ ಒಂದು ಹನಿ ನೀರನ್ನು ಕೂಡಾ ನಾವು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಮಾಲಿನ್ಯ ಮುಕ್ತ, ಮಾದಕದ್ರವ್ಯ ಮುಕ್ತ ಸಾಮಾಜಿಕ ಜಾಗೃತಿಯ ವಾತಾವರಣದಲ್ಲಿ ರಾಷ್ಟೀಯ ಸಮಗ್ರತೆಗೆ ಕಾರಣವಾಗುವ ಸಹೋದರತ್ವದ ಭಾವನೆಗಳೊಂದಿಗೆ ಬದುಕುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಬಸವೇಶ್ ಮಾತನಾಡಿ ರಕ್ಷಾ ಬಂಧನವು ಪ್ರೀತಿ, ಕಾಳಜಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಆದರೆ ವಿಶಾಲ ದೃಷ್ಟಿಕೋನದಲ್ಲಿ ರಕ್ಷಾ ಬಂಧನವು ಸಾರ್ವತ್ರಿಕ ಸಹೋದರತ್ವ ಮತ್ತು ಸಹೋದರಿಯರ ಅಂತರ್ಗತ ಸಂದೇಶವನ್ನು ನೀಡುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸಲ್ಪಡುವ ರಾಖಿ ಹಬ್ಬವು ಸಾಮಾಜಿಕ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಸಂದೇಶವನ್ನು ನೀಡುತ್ತದೆ. ಇದು ಸಕಾರಾತ್ಮಕ ಗುಣಗಳ ಪೋಷಣೆ, ಚಿಂತನೆಯಲ್ಲಿ ಶುದ್ಧತೆ, ಮಾತು ಮತ್ತು ಕಾರ್ಯದ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.
ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆಗಳು ಪ್ರೀತಿಯ ಬಂಧವನ್ನು ಬಲಪಡಿಸುವುದಲ್ಲದೆ, ಕುಟುಂಬದ ಗಡಿಗಳನ್ನು ಮೀರಿದೆ. ಇದು ಒಬ್ಬರ ಸ್ವಂತ ಕುಟುಂಬದ ವ್ಯಾಪ್ತಿಯನ್ನು ಮೀರಿ ಇಡೀ ಜಗತ್ತು ಒಂದು ಕುಟುಂಬವಾಗಿ ವಿಸ್ತರಿಸಲು ಸಹಾಯ ಮಾಡುತ್ತದೆ. ಕಾರ್ಯಕ್ರಮದಲ್ಲಿ ಸಹದ್ಯೋಗಿಗಳು ಪರಸ್ಪರ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಟ್ರಸ್ಟಿ, ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪ್ರೋ.ಟಿ.ರಾಜರಾಮ್ ರಾವ್, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ. ಜಿ. ಕಾಮತ್ ಉಪಸ್ಥಿತರಿದ್ದರು.
ಪ್ರಧಾನ ಸಲಹೆಗಾರ ರಮೇಶ್ ಕೆ. ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ಶಿಕ್ಷಕಿ ಪ್ರೇಮಲತಾ.ಪಿ ರಕ್ಷಾ ಬಂಧನ ಸಂದೇಶ ವಾಚಿಸಿದರು. ಕನ್ನಡ ಶಿಕ್ಷಕಿ ರೇಖಾ ಡಿಕೋಸ್ತಾ ವಂದಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.