“Sports is the festival of life, it will never come in the way of academics. Never be afraid of losing. Competition and excellence comes out of participation. Learn to win and lose. Learn to be emotionally balanced and accept the loss as an experience” said Dr. Gerald Santosh Dsouza, Director, Physical Education, Department of Physical Education, Mangalore University speaking on the occasion of the virtual National Day celebration as the chief guest.
“Personality is not just the physical appearance; it is the social, mental, intellectual and health quality of an individual. Major Dhyan Chand personifies resilience. Educationists speak of the holistic development of a child but that is not happening in schools. Children are deprived of sports that promote physical exercise. Celebration of Sports Day in Schools is a must. Children should be made to come out of their comfort zone and grow in all directions. Teach them to conquer their fears and phobia and let fly our tricolour flag very high. Work towards making of the Olympic champs” he added, sharing the hockey nuance and recapturing the Indians performance at the Tokyo Olympic Games”.
Vidya Kamath G, Principal of Shakthi Residential School in her presidential address stated “We need to consider using physical activity and exercises as a strategy to maintain health during this pandemic. Consider this difficult time as a turning point to learn new ways to build our emotional resilience and our physical health. Exercises can be effective treatment strategies for symptoms of both depression and anxiety. Sports help us to showcase one’s leadership skills, sportsman spirit and increase one’s ability to deal with failure. Shakthi provides platform to improve concentration and reflexes through indoor games like Table Tennis, chess and carom. Swimming helps to improve stamina and strengthen the body. Games like kabbadi, volley ball, basket ball, kho kho and cricket teaches how to work together and co-operate in a team”.
Sanjith Naik, Secretary, Dr K.C.Naik the Administrator, Ramesh K, the Chief Advisor, Prakyath Rai, Institute Development Officer, Prof. T. Rajaram Rao, Principal of Shakthi PU College, Neema Saxena, Co-ordinator of Shakthi Pre-School along with teaching fraternity and students were virtually connected.
Sharanappa, Kannada Teacher invoked the blessings of the almighty, Deepthi, Computer teacher introduced the guest and Sangeetha Marina, English teacher was the Master of ceremony and proposed the welcome address and the vote of thanks.
ಶಕ್ತಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಇ-ಕ್ರೀಡಾ ದಿನಾಚರಣೆ
ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವತಿಯಿಂದ ಇಂದು ಇ-ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅವರು ಮಾತನಾಡುತ್ತಾ, ಕ್ರೀಡೆ ಜೀವನದ ಅಂಗವಾಗಿದೆ, ಇದು ಎಂದಿಗೂ ಶಿಕ್ಷಣದ ಭಾಗ, ಸೋಲಿಗೆ ಎಂದಿಗೂ ಹೆದರಬೇಡಿ, ಭಾಗವಹಿಸುವಿಕೆಯಿಂದ ಸ್ಪರ್ಧೆ ಮತ್ತು ಆತ್ಮಶಕ್ತಿಯು ಹೊರಹೊಮ್ಮುತ್ತದೆ. ಗೆಲುವು ಮತ್ತು ಸೋಲು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು.
ವ್ಯಕ್ತಿತ್ವ ಕೇವಲ ದೈಹಿಕ ನೋಟವಲ್ಲ, ಇದು ವ್ಯಕ್ತಿಯ ಸಾಮಾಜಿಕ, ಮಾನಸಿಕ, ಬೌದ್ಧಿಕ ಮತ್ತು ಆರೋಗ್ಯದ ಗುಣಮಟ್ಟವಾಗಿದೆ. ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯಂದು ನಾವು ಕ್ರೀಡಾ ಮನೋಭಾವನೆಯನ್ನು ರೂಢಿಸುವ ಶಪಥ ಮಾಡಬೇಕು. ಶಿಕ್ಷಣ ತಜ್ಞರ ಆಶಯ ಶಾಲೆಯಲ್ಲಿ ಮಗುವು ಸಮಗ್ರ ಬೆಳವಣಿಗೆಯಾಗಬೇಕೆಂದರೆ ಪ್ರತಿಯೊಂದು ಮಗುವು ಕ್ರೀಡೆಯಲ್ಲಿ ಭಾಗವಹಿಸಬೇಕು. ಆದರೆ ನಮ್ಮ ದುರ್ದೈವವೆಂದರೆ ದೈಹಿಕ ವ್ಯಾಯಾಮವನ್ನು ಉತ್ತೇಜಿಸುವ ಕ್ರೀಡೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಶಾಲೆಯಲ್ಲಿ ಕ್ರೀಡಾ ದಿನಾಚರಣೆಯನ್ನು ಆಚರಿಸುವುದು ಅತ್ಯಗತ್ಯವೆಂದು ಅವರು ಹೇಳಿದರು. ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಂತೆ ಶಾಲೆಗಳು ಉತ್ತೇಜಿಸಬೇಕು. ಆಗ ಅವರ ಭಯ ದೂರವಾಗಿ ಜಯವನ್ನು ತಂದು ಕೊಡುವಲ್ಲಿ ಸಹಾಯಕವಾಗುತ್ತದೆ. ಈ ಮೂಲಕ ಭಾರತದ ತ್ರಿವರ್ಣ ಧ್ವಜ ತುಂಬಾ ಎತ್ತರಕ್ಕೆ ಹಾರಬೇಕು ಹಾಗೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಂತ ಶಕ್ತಿ ಬರಬೇಕೆಂದು ಹಾರೈಸಿದರು.
ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವನ್ನು ಒಂದು ತಂತ್ರವಾಗಿ ಪರಿಗಣಿಸಬೇಕಾಗಿದೆ ಈ ಕಷ್ಟದ ಸಮಯದಲ್ಲಿ ನಮ್ಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಕ್ರೀಡೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಖಿನ್ನತೆ ಮತ್ತು ಆತಂಕ ಎರಡಕ್ಕೂ ವ್ಯಾಯಾಮ ಪರಿಣಾಮಕಾರಿ ಚಿಕಿತ್ಸಾ ತಂತ್ರವಾಗಿದೆ. ನಮ್ಮ ನಾಯಕತ್ವ, ಕೌಶಲ್ಯ, ಕ್ರೀಡಾ ಮನೋಭಾವವನ್ನು ಪ್ರದರ್ಶಿಸಲು ಕ್ರೀಡೆ ಸಹಕಾರಿಯಾಗಿದೆ.
ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತದೆ. ಟೇಬಲ್ ಟೆನ್ನಿಸ್, ಚೆಸ್, ಕ್ಯಾರಂ, ಹೊರಾಂಗಣ ಕ್ರೀಡೆಗಳಾದ ಕಬ್ಬಡ್ಡಿ, ವಾಲಿಬಾಲ್, ಬಾಸ್ಕೆಟ್ ಬಾಲ್, ಖೋ-ಖೋ ಮತ್ತು ಕ್ರಿಕೇಟ್ ಆಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸುವಂತಹ ಉತ್ತೇಜನವನ್ನು ನೀಡುತ್ತದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್, ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲ ಟಿ. ರಾಜಾರಾಮ್ ರಾವ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ, ಶಕ್ತಿ ಕ್ರೀಡಾ ನಿರ್ದೇಶಕಿ ಸುರೇಖಾ, ಕ್ರೀಡಾ ನಿರ್ದೇಶಕ ಆಕಾಶ್ ಶೆಟ್ಟಿ, ರಾಜೇಶ್ ಖಾರ್ವಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಧ್ಯಾಪಕಿ ಸಂಗೀತಾ ಮರೀನಾ ನಿರೂಪಿಸಿ, ಕನ್ನಡ ಅಧ್ಯಾಪಕ ಶರಣಪ್ಪ ಪ್ರಾರ್ಥಿಸಿ, ದೀಪ್ತಿ ಸ್ವಾಗತಿಸಿದರು.