Call Us :
+91 96860 00046
+91 9108043552
info@shakthi.edu.in

Teachers Day Celebration at Shakthi

“A Teacher is a Senior Student and a student is a Junior Teacher. A good Teacher must be a good student throughout the life. Love your Profession, Love your Institution, Love your students and command respect but not demand respect. Perfection is Divine and to err is human. To attain perfection and to reach ones goal one needs a Guru” said Prof. P.Anantha Krishna Bhat, Retd. Prof in Political Science, Canara First Grade College, Mangaluru as the Guest of Honour and in reply to the felicitation on account of Teachers Day Celebration at Shakthi.

“Students need to be answerable, accountable and responsible to themselves. This is the secret of Education. Identify a purpose and in spite of all the hurdles try to achieve it. Unleash the tremendous potentialities and make your journey beautiful in the coming years. Fall in love with yourself.Your parents, the institution expect a lot from you and are helping you to be on the track, to focus and stay away from diversions” said Capt. Ganesh Karnik, Former MLC Northern Teachers Constituency Karnataka as the Chief Guest on this occasion.

“Education is all about enlightenment. When you have light within there is no darkness. Have you trained your mind to receive only good signals and get attracted to good things? The secret of success depends only on this. It is our duty to recognise the contributions of our teachers and honour them. Nation building is totally dependent on the construction of Human resource. Develop love towards the nation, comprehend the role of the citizen, develop awareness about the environment, be duty minded and time conscious” he concluded.

Manasa, outgoing student of II PU was felicitated for her outstanding achievement of scoring 600/600 in Board Exams. In reply to the felicitation she said she was fortunate to be a part of Shakthi and appreciated the efforts of all her lecturers, fellow students and the Management.

Dr. K.C.Naik, Administrator in his Presidential Address stated that “The most satisfying stream that I have involved myself is the field of Education. Wish to take this institution to the international level and produce socially constructive students. Only Teachers can bring a child to light from darkness and they owe the responsibility of building up the society”.

Ramesh K, Chief Advisor, Prakyath Rai, Institute Development Officer, Prof. T.Rajaram Rao, Principal Shakthi PU College, Vidya Kamath G Principal Shakthi Residential School, Neema Saxena, Co-ordinator Shakthi Pre-School all teaching and Non-teaching staff and students were present.

Master of ceremony was Anirudh of II PU, Disha of II PU proposed the welcome address, Nachiketh of II PU spoke on the significance of the day, Rekha Baikady Lecturer in Biology and Sharanappa Kannada teacher introduced the guests and Anushri of II PU proposed the Vote of Thanks.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಅನಂತ ಕೃಷ್ಣ ಭಟ್‌ರವರಿಗೆ ಸನ್ಮಾನ

ಮಂಗಳೂರು ಸೆ. 6 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಇಂದು ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಹಾಲ್‌ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಕ್ಷಕರ ದಿನಾಚರಣೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ನಿವೃತ್ತರಾಗಿ ನಿವೃತ್ತಿಯ ನಂತರವೂ ಸಮಾಜ ಸೇವೆ ಮಾಡುತ್ತಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಈ ವರ್ಷ ಕೆನರಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಬಾಲ ಸಂರಕ್ಷಣ ಕೇಂದ್ರ, ಅನಾಥಾಶ್ರಮ ಸ್ಥಾಪಕ ಸಂಚಾಲಕ, ಗೋವನಿತಾಶ್ರಯ ಟ್ರಸ್ಟಿನ ಸ್ಥಾಪಕ ಕಾರ್ಯದರ್ಶಿ, ಮೆಘಾಲಯದ ಸರಸ್ವತಿ ಎಜ್ಯುಕೇಶನ್ ಆಂಡ್ ವೆಲ್‌ಫೇರ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರು ಹಾಗೂ 600 ಕ್ಕಿಂತಲೂ ಮಿಕ್ಕಿದ ಲೇಖನಗಳನ್ನು ವಿವಿಧ ಪತ್ರಿಕೆಯಲ್ಲಿ ಪ್ರಕಟಿಸಿರುವ ಡಾ. ಪಿ ಅನಂತಕೃಷ್ಣ ಭಟ್‌ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರು ಹಿರಿಯ ವಿದ್ಯಾರ್ಥಿಯಾಗಿ ಮತ್ತು ವಿದ್ಯಾರ್ಥಿ ಕಿರಿಯ ಶಿಕ್ಷಕರಾಗಿರುತ್ತಾರೆ. ಒಬ್ಬ ಉತ್ತಮ ಶಿಕ್ಷಕನು ಜೀವನದುದ್ದಕ್ಕೂ ಉತ್ತಮ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕರು ಯಾವಾಗಲೂ ವೃತ್ತಿಯನ್ನು, ಸಂಸ್ಥೆಯನ್ನು, ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಮಾತ್ರ ಅವರಿಗೆ ತನ್ನಿಂದ ತಾನಾಗಿ ಗೌರವ ಸಿಗುತ್ತದೆ. ಪ್ರತಿಯೊಬ್ಬರು ಪರಿಪೂರ್ಣರಲ್ಲ ಒಂದಲ್ಲ ಒಂದು ರೀತಿಯ ತಪ್ಪುಗಳು ನಡೆಯುತ್ತದೆ. ಅಂತಹ ತಪ್ಪುಗಳನ್ನು ತಿದ್ದುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಶಿಕ್ಷಣವು ಜ್ಞಾನೋದಯಕ್ಕೆ ಸಂಬಂಧಿಸಿದೆ, ನಿಮ್ಮೊಳಗೆ ಬೆಳಕು ಇದ್ದಾಗ ಕತ್ತಲೆ ಇರುವುದಿಲ್ಲ. ಒಳ್ಳೆಯ ವಿಚಾರವನ್ನು ಮತ್ತು ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಲು ನಮ್ಮ ಮನಸ್ಸಿಗೆ ತರಬೇತಿ ನೀಡಬೇಕೆಂದು ಹೇಳಿದರು. ನಮ್ಮ ಶಿಕ್ಷಕರ ಕೊಡುಗೆಗಳನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ರಾಷ್ಟ್ರ ನಿರ್ಮಾಣವು ಸಂಪೂರ್ಣವಾಗಿ ಮಾನವ ಸಂಪನ್ಮೂಲ ನಿರ್ಮಾಣದ ಮೇಲೆ ಅವಲಂಬಿತವಾಗಿದೆ. ರಾಷ್ಟ್ರದ ಬಗ್ಗೆ ಪ್ರೀತಿಯನ್ನು ಬೆಳೆಸಿ ಪರಿಸರದ ಬಗ್ಗೆ ಅರಿವು ಬೆಳೆಸಿಕೊಳ್ಳಿ, ಕರ್ತವ್ಯ ಮನೋಭಾವ ಮತ್ತು ಸಮಯ ಪ್ರಜ್ಞೆಯನ್ನು ಮರೆಯಬಾರದೆಂದು ಕರೆ ನೀಡಿದರು.

ದ್ವಿತೀಯ ಪಿಯುಸಿಯಲ್ಲಿ 600/600 ಅಂಕ ಪಡೆದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಮಾನಸ ಇವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಾಪಕರ ಪ್ರಯತ್ನದಿಂದ ಸಂಸ್ಥೆಯು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ಪಡೆಯುವುದಕ್ಕೋಸ್ಕರ ಸಂಸ್ಥೆ ಶ್ರಮ ಪಡುತ್ತದೆ. ಇಲ್ಲಿ ವಿದ್ಯೆ ಕಲಿತ ಪ್ರತಿಯೊಂದು ಮಗು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬೇಕೆಂಬುದು ನಮ್ಮ ಆಶಯವೆಂದು ಹೇಳಿದರು.

ಶಕ್ತಿ ಶಿಕ್ಷಣ ಸಂಸ್ಥೆಯ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಆಡಳಿತ ಮಂಡಳಿಯಿಂದ ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜಾರಾಮ್ ರಾವ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನಿರುದ್, ಸ್ವಾಗತವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ದಿಶಾ, ಶಿಕ್ಷಕರ ಬಗ್ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಚಿಕೇತ್ ಮಾತನಾಡಿದರು. ಅತಿಥಿಗಳನ್ನು ಉಪನ್ಯಾಸಕರಾದ ಶ್ರೀಮತಿ ರೇಖಾ ಬಿ. ಬೈಕಾಡಿ ಮತ್ತು ಶರಣಪ್ಪ ಪರಿಚಯಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಶ್ರೀ ವಂದಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery