ಮಂಗಳೂರು ನವೆಂಬರ್ 26 : ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಟಿ. ರಾಜಾರಾಮ್ ರಾವ್ ಅವರು ವಹಿಸಿದ್ದರು. ಕಾನೂನು ಹಕ್ಕುಗಳ ಅಗತ್ಯತೆಯ ಕುರಿತು ಅವರು ಮಾತನಾಡಿದರು, ಕನ್ನಡ ಉಪನ್ಯಾಸಕಿ ಶ್ರೀಮತಿ ಪದ್ಮಪ್ರಿಯ ಸಂವಿಧಾನ ದಿನದ ಮಹತ್ವ, ಹಾಗೂ ವಿಶೇಷತೆಯ ಬಗ್ಗೆ ತಿಳಿಸಿಕೊಟ್ಟರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶಿಲ್ಪ, ಶ್ರೀಮತಿ ಪ್ರೀತಿ, ಕ್ಷೇಮಪಾಲನಾಧಿಕಾರಿಯಾದ ಶ್ರೀಯುತ ನಿತ್ಯಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿ ನೆರವೇರಿತು.