Mangaluru, 12.01.2022 : Swami Vivekananda is a source of inspiration and it is worth reminiscing his contributions. His ideas and philosophies were highly popular among the youth, and still remain relevant. To acknowledge and celebrate his teachings, his birth anniversary is celebrated every year as National Youth Day. This day is celebrated not only to honour Swami Vivekananda but also to encourage the youth to work hard and contribute to the overall development of this country, said Sri Karunakara Balkur, HOD, Dept of Kannada, Expert PU College, Mangaluru as the key speaker on this occasion.
Swami Vivekananda always inspired the youth through his teachings and ideology to have a confident attitude added Mr. Karunakar and quoted Napoleon’s strategy of self confidence, effort and success. He concluded by saying that nothing is impossible.
“Never say no, never say I cannot ,for you are infinite. All the power is within you, you can do anything” was the gist of our Academic Co-ordinator Prathviraj’s advice. He motivated the students to strengthen their mindset to face the upcoming exams and focus on achieving their goals. Through Yoga, Education ,by giving respect to the elders and developing Patriotism he instructed the students to become an asset for the Nation. Swami Vivekananda’s contributions serves as an inspiration for youths to recognize their potential and work hard he concluded.
Dr. K.C.Naik, Administrator was the Chief Guest. Institute Development Officer Prakyath Rai, Vidya Kamath G, Principal Shakthi Residential School and Neema Saxena, Co-ordinator of Shakthi Pre-School along with all teaching and Non teaching staff and students were present and offered floral tribute to the great reformer, the nation had ever seen. Sharanappa, Kannada teacher compered the event.
ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ
ಮಂಗಳೂರು, ಜ. 12 : ಸ್ವಾಮಿ ವಿವೇಕಾನಂದರು ದೇಶದ ಶಕ್ತಿ ಅವರು ಯುವ ಜನತೆಗೆ ಸ್ಫೂರ್ತಿಯಾಗಿದ್ದರು. ಅಂಥಃ ಚೇತನವನ್ನು ಬದುಕಿನಲ್ಲಿ ಸ್ಮರಿಸಬೇಕು ಎಂದು ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಶ್ರೀ ಕರುಣಾಕರ ಬಲ್ಕೂರುರವರು ಹೇಳಿದರು. ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ದೀಪ ಬೆಳಗಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಧನೆ ಎಂಬುದು ಕೇವಲ ಒಂದು ದಿನದ ಪ್ರಯತ್ನವಲ್ಲ, ಅದಕ್ಕಾಗಿ ಸತತ ಕಠಿಣ ಪರಿಶ್ರಮವನ್ನು ಮಾಡಿದರೆ ಗುರಿ ಸಾಧಿಸಬಹುದು. ಆತ್ಮಸ್ಥೈರ್ಯ ಒಂದಿದ್ದರೆ ಅಸಾಧ್ಯವಾದ್ದುದ್ದನ್ನು ಕೂಡಾ ಸಾಧ್ಯವಾಗಿಸಬಹುದು ಎಂದು ನೆಪೋಲಿಯನ್ನಿನ ಸ್ಫೂರ್ತಿದಾಯಕ ಕಥೆಯ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಕ್ತಿ ವಿದ್ಯಾಸಂಸ್ಥೆಯ ಸಂಯೋಜಕರಾದ ಪೃಥ್ವಿರಾಜ್ರವರು ಹತ್ತನೇ ಮತ್ತು ದ್ವಿತೀಯ ಪದವಿ ಪೂರ್ವ ಮಕ್ಕಳನ್ನುದ್ದೇಶಿಸಿ ಮುಂಬರುವ ಪರೀಕ್ಷೆ ಎಂಬ ಗುರಿಯನ್ನು ಸಾಧಿಸುವುದಕ್ಕಾಗಿ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಶಿಕ್ಷಣ ಹಾಗೂ ಯೋಗದ ಮೂಲಕ ಹಿರಿಯರಿಗೆ ಹಾಗೂ ನಮ್ಮ ದೇಶಕ್ಕೆ ಗೌರವವನ್ನು ತರುವಂಥ ಸಾಧಕರಾಗಬೇಕು. ಪ್ರತಿಭಾ ಪಲಾಯನ ಆಗದೆ ನಮ್ಮ ತಾಯಿಗೆ ನೀಡುವ ಗೌರವವನ್ನೇ ದೇಶಕ್ಕೆ ನೀಡಬೇಕು. ಆ ಮೂಲಕ ಸ್ವಾಮಿ ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಮುಖ್ಯ ಅತಿಥಿಯಾಗಿದ್ದರು. ಸಂಯೋಜನಾಧಿಕಾರಿ ಪೃಥ್ವಿರಾಜ್ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಮತ್ತು ಶಿಕ್ಷಕ-ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.