ಮಂಗಳೂರು : ಶಕ್ತಿನಗರದ ಶಕ್ತಿ ಪದವಿ ಪೂರ್ವ ಹಾಗೂ ಮುಳಿಯ ಪ್ರತಿಷ್ಠಾನ ಜಂಟಿಯಾಗಿ ಶಕ್ತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ನಿರೋಧಕ ಲಸಿಕಾ ಜಾಗೃತಿ ಅಭಿಯಾನದ ‘ಸಂಖ್ಯಾಂ’ನ ಉದ್ಘಾಟನೆಯನ್ನು ಎ.ಜೆ.ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಚೈತ್ರಾ.ಆರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಅವರು ಜನ ಸಾಮಾನ್ಯರು ಹೇಗೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ ಹಾಗೂ ಆದರಿಂದ ನಾವು ಹೇಗೆ ರಕ್ಷಣೆ ಪಡೆಯಬೇಕೆಂಬುದರ ಕುರಿತಂತೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಕ್ಯಾನ್ಸರ್ ಬರುವ ಮುಂಚೆ ಅನೇಕ ರೋಗದ ಲಕ್ಷಣಗಳು ಕಾಣಿಸುತ್ತದೆ. ಆಗ ನಾವು ಯಾವ ತರ ವೈದ್ಯರನ್ನು ಭೇಟಿ ಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕೆಂಬುವುದರ ಬಗ್ಗೆ ತಿಳಿಸಿದರು. ಇದನ್ನು ತಡೆಗಟ್ಟುವುದಕ್ಕೋಸ್ಕರ 9 ವರ್ಷದಿಂದ 25 ವರ್ಷದೊಳಗಿನವರಿಗೆ ಕ್ಯಾನ್ಸರ್ ನಿರೋಧಕ ಲಸಿಕೆಯನ್ನು ಕೊಡುವಂತೆ ಮಾಡುವ ಜಾಗೃತಿ ಅಭಿಯಾನವೇ ‘ಸಖ್ಯಾಂ’ನ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ಪ್ರಥ್ವಿರಾಜ್ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಇಂತಹ ಜಾಗೃತಿ ಅಭಿಯಾನದ ಅವಶ್ಯಕತೆ ಇದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವಂತಹ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆದ್ಯಾ ಸುಲೋಚನ ಇವರ ಕಾರ್ಯದ ಕುರಿತಂತೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್, ಮುಳಿಯ ಪ್ರತಿಷ್ಠಾನದ ಸಂಸ್ಥಾಪಕರಾದ ಮುಳಿಯ ಶ್ರೀ ಕೇಶವ ಪ್ರಸಾದ್, ಪ್ರಧಾನ ಸಲಹೆಗಾರ ರಮೇಶ್.ಕೆ , ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್. ಜಿ ಹಾಗೂ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸುಜ್ಞಾನ್ ಕೃಷ್ಣ, ಸ್ವಾಗತವನ್ನು ಆದ್ಯಾ ಸುಲೋಚನ, ವಂದನಾರ್ಪಣೆಯನ್ನು ಸೃಷ್ಟಿ ಪಟ್ಟಣಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿಮಾನಿ, ಪ್ರದ್ಯುಮ್ನ ಡಿ ರಾವ್, ಕುಮುದಾ, ಶ್ರೇಯಸ್.ಜೆ.ಎಸ್, ಚಿರತೇಜ್, ವಿಷ್ಣು, ತನ್ಮಯ, ರಚನಾ, ಸಿಮ್ರಾನ್, ಚೇತನ್.ಕೆ.ಎಸ್, ದರ್ಶಿವಿ ಪ್ರಕಾಶ್, ಹೀರಾ ಸುಲೋಚನಾ, ಕೌಶಲ ಸುಬ್ರಹ್ಮಣ್ಯ, ಕನ್ಯಾ ಶೆಟ್ಟಿ ಮತ್ತು ಸಮರ್ಥ ರಾಮ್ ಈ ಕಾರ್ಯಕ್ರಮ ಸಂಘಟಿಸುವುದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುತ್ತಾರೆ.