Mangaluru, 25.07.22 : The journey of Lt.Col Ajit V Bhandarkar, Shaurya Chakra was made known to the students of Shakthi Residential School and PU College through the screening of ‘The Saga of a Brave Heart’ a documentary as a part of Azadi Ka Amrith Mahotsav. Shakunthala Bhandarkar, wife of Col.Ajit Bhandarkar also the Co-Founder and Director of Metamorphes Foundation was the Chief Guest.
Captain P.S. Kariappa (Short Service Commission Officer) and Commander Mahesh Nagesh Nayak (IN Retd) were the Guests of Honour. Ms. Savitha Rao K.P. daughter of Commander K.P. Gopala Rao was also present on this occasion.
“Veer Nari, Shakunthala Bhandarkar is the right person to be emulated. In spite of losing Col Ajit Bhandarkar she has sent her two sons into Defence. Col. Ajit never compromised on work. He was a nice human being and a very affectionate person. Being strict he always proved that he was born to be a soldier and wished to die as a soldier, what more can one ask for” said Captain P.S. Kariappa.
“It is because of the ultimate sacrifice of the people like Col. Ajit, we are now leading a safe and a happy life. People are always there in our borders to guard us. During childhood I was attracted to the army uniform and was impressed to meet the army officer Capt. Bhandarkar. Interaction with him revealed that initial training is very tough and to face that one needs to be tough. Don’t give up keep trying, these are his words etched in my memory” recollected Commander Mahesh Nagesh Nayak.
Shakunthala Bhandarkar appreciating the divine atmosphere in Shakthi said “30th October 1999 was the day when the operation took place. The book authored by me is a tribute to this brave heart Lt. Col. Ajit Bhandarkar and would expect everyone to read through”.
Prathviraj, Principal Shakthi PU College said “There was no motivation, no person who could guide us during our school days about the Defence Forces. This nation is ours; there are soldiers to fight for us. The story of these brave hearts must reach every student and motivate and guide them towards serving the nation”.
Ms. Nidhi S. Desai of First PUC science was honoured with the Shaurya Chakra Award sponsored by Metamorphes in the name of Lt. Col. Ajit Bhandarkar.
Dr. K.C.Naik, Administrator, Shakthi Education Trust, Prakyath Rai, Institute Development Officer and Vidya Kamath G, Principal Shakthi Residential School, the staff of Shakthi along with the students had the privilege of interacting with the dignitaries. Ms. Fathimath Nazreen, Science teacher compered the event.
’ದಿ ಸಾಗಾ ಆಫ್ ಎ ಬ್ರೇವ್ ಹಾರ್ಟ್’ ಸಾಕ್ಷ್ಯಚಿತ್ರ ಪ್ರದರ್ಶನ
ಮಂಗಳೂರು ಜು. 25 : ಶೌರ್ಯ ಚಕ್ರ ವಿಜೇತರಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ವಿ ಭಂಡಾರ್ಕರ್, ಅವರ ಜೀವನ ಪಯಣವನ್ನು ಶಕ್ತಿ ವಸತಿ ಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ’ದಿ ಸಾಗಾ ಆಫ್ ಎ ಬ್ರೇವ್ ಹಾರ್ಟ್’ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ತಿಳಿಯಪಡಿಸಲಾಯಿತು. ಕರ್ನಲ್ ಅಜಿತ್ ಭಂಡಾರ್ಕರ್ ಅವರ ಪತ್ನಿಯೂ, ಮೆಟಾಮಾರ್ಫಿಸ್ ಫೌಂಡೇಶನ್ನ ನಿರ್ದೇಶಕಿ ಹಾಗೂ ಸಹ ಸಂಸ್ಥಾಪಕಿಯೂ ಆಗಿರುವ ಶಕುಂತಲಾ ಭಂಡಾರ್ಕರ್ ಅವರು ಮುಖ್ಯ ಅತಿಥಿಯಾಗಿದ್ದರು.
ಕ್ಯಾಪ್ಟನ್ ಪಿ.ಎಸ್. ಕರಿಯಪ್ಪ (ಶಾರ್ಟ್ ಸರ್ವಿಸ್ ಕಮಿಷನ್ ಆಫಿಸರ್) ಮತ್ತು ಕಮಾಂಡರ್ ಮಹೇಶ್ ನಾಗೇಶ್ ನಾಯಕ್ (ನಿವೃತ್ತ) ಗೌರವ ಅತಿಥಿಗಳಾಗಿದ್ದರು. ಕಮಾಂಡರ್ ಕೆ.ಪಿ. ಗೋಪಾಲರಾವ್ ಅವರ ಮಗಳು ಶ್ರೀಮತಿ ಸವಿತಾ ರಾವ್ ಕೆ.ಪಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೀರನಾರಿ, ಶಕುಂತಲಾ ಭಂಡಾರ್ಕರ್ ಅನುಕರಣಾರ್ಹ ವ್ಯಕ್ತಿ. ಕರ್ನಲ್ ಅಜಿತ್ ಭಂಡಾರ್ಕರ್ ಅವರನ್ನು ಕಳೆದುಕೊಂಡರೂ ಅವರು ತಮ್ಮ ಇಬ್ಬರು ಪುತ್ರರನ್ನೂ ದೇಶ ರಕ್ಷಣೆಗೆ ಕಳುಹಿಸಿದ್ದಾರೆ. ಕರ್ನಲ್ ಅಜಿತ್ ಕೆಲಸದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಅವರು ಒಳ್ಳೆಯ ಮನುಷ್ಯ ಮತ್ತು ತುಂಬಾ ಮಮತಾಮಯಿ ವ್ಯಕ್ತಿಯಾಗಿದ್ದರು. ಕಟ್ಟುನಿಟ್ಟಿನ ವ್ಯಕ್ತಿತ್ವದ ಇವರು ತಾನು ಸೈನಿಕನಾಗಲು ಹುಟ್ಟಿದ್ದೇನೆ ಮತ್ತು ಸೈನಿಕನಾಗಿಯೇ ಸಾಯಲು ಬಯಸುತ್ತೇನೆ ಎಂದು ಯಾವಾಗಲು ಹೇಳುತ್ತಿದ್ದರುಎಂದು ಕ್ಯಾಪ್ಟನ್ ಪಿ.ಎಸ್. ಕರಿಯಪ್ಪ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಕರ್ನಲ್ ಅಜಿತ್ ಅವರಂತಹ ಜನರ ಅತ್ಯುನ್ನತವಾದ ತ್ಯಾಗದಿಂದಾಗಿ ನಾವು ಈಗ ಸುರಕ್ಷಿತ ಮತ್ತು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಗಡಿಯಲ್ಲಿ ನಮ್ಮನ್ನು ಕಾಪಾಡಲು ಸೈನಿಕರು ಯಾವಾಗಲೂ ಇರುತ್ತಾರೆ. ಬಾಲ್ಯದಲ್ಲಿ ನಾನು ಸೇನಾ ಸಮವಸ್ತ್ರಕ್ಕೆ ಆಕರ್ಷಿತನಾಗಿದ್ದೆ ಮತ್ತು ಸೇನಾಧಿಕಾರಿ ಕ್ಯಾಪ್ಟನ್ ಭಂಡಾರ್ಕರ್ ಅವರ ಭೇಟಿಯಿಂದಾಗಿ ಪ್ರಭಾವಿತನಾಗಿದ್ದೆ. ಅವರೊಂದಿಗಿನ ಸಂವಹನವು, ಆರಂಭಿಕ ತರಬೇತಿಯು ತುಂಬಾ ಕಠಿಣವಾಗಿತ್ತು ಮತ್ತು ಅದು ನನ್ನನ್ನು ಗಟ್ಟಿಗೊಳಿಸಿತು. ಪ್ರಯತ್ನವನ್ನು ಎಂದೂ ಕೈ ಬಿಡಬೇಡಿ ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಅದು ನನ್ನ ನೆನಪಿನಲ್ಲಿ ಇಂದಿಗೂ ಅಚ್ಚೊತ್ತಿದೆ” ಎಂದು ಕಮಾಂಡರ್ ಮಹೇಶ್ ನಾಗೇಶ್ ನಾಯಕ್ ನೆನಪಿಸಿಕೊಂಡರು.
ಶಕ್ತಿಯಲ್ಲಿನ ದೈವಿಕ ವಾತಾವರಣವನ್ನು ಶ್ಲಾಘಿಸಿದ ಶ್ರೀಮತಿ ಶಕುಂತಲಾ ಭಂಡಾರ್ಕರ್ ಅವರು ಅಕ್ಟೋಬರ್ 30, 1999 ಕಾರ್ಯಾಚರಣೆ ನಡೆದ ದಿನ, ನಾನು ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಕುರಿತು ಬರೆದ ಪುಸ್ತಕವು ಅವರಂತಹ ಧೈರ್ಯಶಾಲಿ ವ್ಯಕ್ತಿಗೆ ನಾನು ಸಲ್ಲಿಸುವ ಗೌರವವಾಗಿದೆ ಮತ್ತು ನೀವೆಲ್ಲರೂ ಓದುತ್ತೀರೆಂದು ನಿರೀಕ್ಷಿಸುತ್ತೇನೆ ಎಂದು ಹೇಳಿದರು.
ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಅವರು ಮಾತನಾಡುತ್ತಾ, ರಕ್ಷಣಾ ಪಡೆಗಳ ಬಗ್ಗೆ ನಮ್ಮ ಶಾಲಾ ದಿನಗಳಲ್ಲಿ ನಮಗೆ ಮಾರ್ಗದರ್ಶನ ನೀಡುವ ಯಾವುದೇ ವ್ಯಕ್ತಿ ಇರಲಿಲ್ಲ. ಈ ರಾಷ್ಟ್ರ ನಮ್ಮದು; ನಮಗಾಗಿ ಹೋರಾಡಲು ಸೈನಿಕರಿದ್ದಾರೆ. ಈ ಕೆಚ್ಚೆದೆಯ ಹೃದಯಗಳ ಕಥೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಬೇಕು ಮತ್ತು ರಾಷ್ಟ್ರದ ಸೇವೆಯತ್ತ ಅವರನ್ನು ಪ್ರೇರೇಪಿಸಬೇಕು ಮತ್ತು ಮಾರ್ಗದರ್ಶನ ಮಾಡಬೇಕು ಎಂದರು.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ನಿಧಿ ಎಸ್. ದೇಸಾಯಿ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಹೆಸರಿನಲ್ಲಿ ಮೆಟಾಮಾರ್ಪಿಸ್ ಪ್ರಾಯೋಜಕತ್ವದ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಕ್ತಿ ಎಜುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್, ಸಂಸ್ಥೆ ಅಭಿವೃದ್ಧಿ ಅಧಿಕಾರಿ ಶ್ರೀ ಪ್ರಖ್ಯಾತ್ ರೈ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು. ಶಕ್ತಿ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗಣ್ಯರೊಂದಿಗೆ ಸಂವಾದ ನಡೆಸಿದರು.
ವಿಜ್ಞಾನ ಶಿಕ್ಷಕಿ ಫಾತಿಮತ್ ನಜ್ರೀನ್ ಕಾರ್ಯಕ್ರಮ ನಿರೂಪಿಸಿದರು.