Call Us :
+91 96860 00046
+91 9108043552
info@shakthi.edu.in

Tiranga Yatra of Azadi Ka Amrith Mahotsav

Dr. Rajendra KV, Deputy commissioner launched the Tiranga Yatra of Azadi Ka Amrith Mahotsav by handing over the National Flag to the student leaders.

Mangaluru 12: Shakthi Residential School and Shakthi PU College of Shakthinagar today organized a Tiranga Yatra of Azadi Ka Amrita Mahotsav. Dr. Rajendra K.V DC of Dakshina Kannada District inaugurated the same.

Addressing the students of the institution, he said that we are celebrating the Amrita Mahotsav of Independence across the country for 75 weeks as called by Prime Minister Narendra Modiji. The youth of today should inculcate patriotism. He called us to keep in mind that we should respect the sentiments of different religions of the country along with the cultural practices of our own.

The 75th year of independence will be celebrated from August 13th to 15th by hoisting the flag in every house. He said that when we lead a disciplined life, the country gets respect. Sucharita Shetty, President of D.K. Milk Producers Association, who arrived as the chief guest, said that the youth is the strength of the country, when we all embrace patriotism and work hard, the country will progress.

Our constitution has given everyone such an opportunity that we all should live equally. Let us understand it well and move forward. On the occasion of Amrith Mahotsava, let us celebrate by hoisting the flag at home. The program was presided over by the Administrator of Shakthi Education Trust Dr. K.C Naik Let’s celebrate the 75th year of independence with greater patriotism, he said Let’s move ahead keeping the country as the first teacher.

Ramesh K., Chief Advisor of Shakthi Education Trust and Vidya G. Kamath, Principal of Shakthi Residential School were present on the stage. The program began with a prayer followed by welcome address by Harini, vote of thanks was given by Prithviraj, Principal of Shakthi PU College.

After handing over the national flag to the student leaders for the Tiranga Yatra, the Deputy Commissioner launched the Yatra in the ground by releasing saffron, white and green balloons.

The Tiranga Yatra started from the school grounds and proceeded to Dattanagar through Muttappa Gudi Road in Shakthinagar and then concluded at the Shakthi School Grounds. Thousands of school students and the staff held the National Flag and shouted slogans of patriotism.

ಸ್ವಾತಂತ್ರ್ಯ ಅಮೃತ ಮಹೋತ್ಸವದ ತಿರಂಗ ಯಾತ್ರೆಯನ್ನು ವಿದ್ಯಾರ್ಥಿ ನಾಯಕರಿಗೆ ರಾಷ್ಟ್ರ ಧ್ವಜ ನೀಡುವುದರ ಮೂಲಕ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಇವರಿಂದ ಚಾಲನೆ

ಮಂಗಳೂರು ಆ೧೨: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನಲ್ಲಿ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ತಿರಂಗ ಯಾತ್ರೆಯನ್ನು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿಯವರು ವಿದ್ಯಾರ್ಥಿ ನಾಯಕರಿಗೆ ರಾಷ್ಟ್ರ ಧ್ವಜವನ್ನು ನೀಡುವುದರ ಮೂಲಕ ಇಂದು ಚಾಲನೆ ನೀಡಿದರು. ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ನಾವು 75 ವಾರಗಳ ಕಾಲ ದೇಶವ್ಯಾಪಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿಜೀರವರ ಕರೆಯಂತೆ ಆಚರಿಸುತ್ತಿದ್ದೇವೆ. ಇಂದಿನ ಯುವ ಜನತೆಗೆ ಸ್ವಾತಂತ್ರ್ಯದ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ನಾವು ನಮ್ಮ ಮನೆಯ ಸಂಸ್ಕೃತಿ ಆಚರಣೆಯ ಜೊತೆಗೆ ದೇಶದ ವಿವಿಧ ಮತಧರ್ಮಗಳ ಭಾವನೆಗಳಿಗೆ ಗೌರವವನ್ನು ಕೊಡಬೇಕೆಂಬುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ಕರೆ ನೀಡಿದರು.

ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಪ್ರತಿ ಮನೆಯಲ್ಲಿಯೂ ತಿರಂಗವನ್ನು ಹಾರಿಸುವ ಮೂಲಕ ಆಗಸ್ಟ್ 13 ರಿಂದ 15 ರ ತನಕ ಆಚರಿಸಬೇಕು. ನಾವು ಶಿಸ್ತುಬದ್ಧವಾದ ಜೀವನವನ್ನು ನಡೆಸಿದಾಗ ದೇಶಕ್ಕೆ ಗೌರವ ಸಿಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ. ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಸುಚರಿತ ಶೆಟ್ಟಿಯವರು ಮಾತನಾಡಿ ಯುವಜನತೆ ದೇಶದ ಶಕ್ತಿ, ನಾವೆಲ್ಲರೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಕಾರ್ಯ ಪ್ರವೃತ್ತರಾದಾಗ ದೇಶದ ಪ್ರಗತಿಯಾಗುತ್ತದೆ. ನಾವೆಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಅಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ನಮ್ಮ ಸಂವಿಧಾನ ನೀಡಿದೆ. ಅದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡು ಮುನ್ನಡೆಯೋಣ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತವಾಗಿ ಎಲ್ಲರೂ ಮನೆಯಲ್ಲಿ ತಿರಂಗವನ್ನು ಹಾರಿಸುವುದರ ಮೂಲಕ ಆಚರಿಸೋಣವೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್ ವಹಿಸಿ ಮಾತನಾಡಿ ನಾವು ೭೫ನೇ ವರ್ಷದ ಸ್ವಾತಂತ್ರ್ಯವನ್ನು ದೇಶಭಕ್ತಿಯನ್ನು ಹೆಚ್ಚಿನ ನಿಟ್ಟಿನಲ್ಲಿ ಆಚರಿಸೋಣ. ದೇಶವನ್ನು ಮೊದಲ ಗುರು ಎಂದು ಮನದಲ್ಲಿಟ್ಟು ಮುನ್ನಡೆಯೋಣ ಎಂದು ಹೇಳಿದರು.

ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣಪ್ಪ ಸ್ವಾಗತವನ್ನು ಹರಿಣಿ ಹಾಗೂ ವಂದನಾರ್ಪಣೆಯನ್ನು ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ನೆರವೇರಿಸಿದರು.

ವಿದ್ಯಾರ್ಥಿ ನಾಯಕರಿಗೆ ತಿರಂಗ ಯಾತ್ರಾ ನಿಮಿತ್ತ ರಾಷ್ಟ್ರ ಧ್ವಜವನ್ನು ನೀಡಿದ ನಂತರ ಕೇಸರಿ, ಬಿಳಿ, ಹಸಿರು ಬಣ್ಣದ ಬೆಲೂನ್ ಹಾರಿಸುವುದರ ಮೂಲಕ ಜಿಲ್ಲಾಧಿಕಾರಿಗಳು ಮೈದಾನದಲ್ಲಿ ಯಾತ್ರೆಗೆ ಚಾಲನೆ ನೀಡಿದರು. ಶಕ್ತಿ ಶಾಲಾ ಮೈದಾನದಿಂದ ಹೊರಟ ತಿರಂಗ ಯಾತ್ರೆಯು ಶಕ್ತಿನಗರದ ಮುತ್ತಪ್ಪನ್ ಗುಡಿಯ ರಸ್ತೆಯ ಮೂಲಕ ದತ್ತನಗರ ಬಡಾವಣೆಗೆ ತೆರಳಿ ನಂತರ ಶಕ್ತಿ ಶಾಲಾ ಮೈದಾನದಲ್ಲಿ ಸಮಾಪನಗೊಂಡಿತು. ಶಾಲೆಯ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ಹಿಡಿದು ದೇಶಭಕ್ತಿಯ ಘೋಷಣೆಯನ್ನು ಮೊಳಗಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery