Call Us :
+91 96860 00046
+91 9108043552
info@shakthi.edu.in

Flag Hoisting of 75th Independence Anniversary

Mangaluru 15: Under the joint auspices of Shakthi Pre School, Shakthi Residential School and Shakthi PU College of Shakthinagar, Dr. Sudhakar Shetty President of Gnana Sudha PU College, Karkala today in the school ground, performed the flag hoisting. On this occasion, students of school and college paid their respects through a graceful procession. After hoisting the flag he addressed the students. Sudhakar Shetty said that no one should forget the freedom fighters who sacrificed for freedom. It is because of their sacrifice that we are happy today on the 75th year of Indian Independence. Parents put a lot of effort in raising everyone. When we respect our parents and grow up in the society, their mind gets peace. He told the students that they should complete higher education and involve themselves in research activities to contribute to this country.

The administrator of the organization presided over the program. Dr. KC Naik said that we got freedom from 200 years of slavery. He said that we should love and respect the country. The country’s Prime Minister Narendra Modi is running the country efficiently. He said that there is no doubt that this country will become world guru. On this occasion, Governing Body Member Saguna C. Naik, Chief Advisor Ramesh K. Shakthi Pre-University College Principal Prithviraj, Shakthi Residential School Principal Vidya G. Kamath, Shakthi Pre School Co-ordinator Patricia Pinto were present. The program was welcomed by Sneha and Vamshi gave the Vote of thanks.

Pratiksha spoke about the importance of the program. Chaitra U. Bhandari compered the show. After the assembly, a cultural program on patriotism was performed by the students.

 

75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ

ಮಂಗಳೂರು ಆ. 15 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಇಂದು ಶಾಲಾ ಮೈದಾನದಲ್ಲಿ ಕಾರ್ಕಳದ ಜ್ಞಾನ ಸುಧಾ ಪಪೂ ಕಾಲೇಜಿನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನದ ಮೂಲಕ ಗೌರವ ಸಮರ್ಪಿಸಿದರು. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಡಾ. ಸುಧಾಕರ ಶೆಟ್ಟಿ ಮಾತನಾಡಿ ಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಯಾರೂ ಮರೆಯಬಾರದು. ನಾವು ಇವತ್ತು 75 ನೇ ಸ್ವಾತಂತ್ರ್ಯದ ಖುಷಿಯಲ್ಲಿರಬೇಕಾದರೆ ಇವರ ತ್ಯಾಗ ಬಲಿದಾನವೇ ಕಾರಣ. ಪ್ರತಿಯೊಬ್ಬರನ್ನು ಬೆಳೆಸುವಲ್ಲಿ ತಂದೆ ತಾಯಿ ತುಂಬ ಪ್ರಯತ್ನ ಪಟ್ಟಿರುತ್ತಾರೆ. ನಾವು ಹೆತ್ತವರಿಗೆ ಗೌರವಕೊಟ್ಟು ಸಮಾಜದಲ್ಲಿ ಬೆಳೆದಾಗ ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಕರೆನೀಡಿದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪೂರೈಸಿ ತಮ್ಮನ್ನು ತಾವು ಸಂಶೋಧನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್‌ ಮಾತನಾಡಿ 200 ವರ್ಷಗಳ ದಾಸ್ಯದಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ದೇಶವನ್ನು ನಾವು ಪ್ರೀತಿಸಬೇಕು ಹಾಗೂ ಗೌರವಿಸಬೇಕೆಂದು ಹೇಳಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಈ ದೇಶ ಜಗತ್ತಿನಲ್ಲಿ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ಪೆಟ್ರಿಶಿಯ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತನ್ನು ಸ್ನೇಹ ಇವರು ಹಾಗೂ ವಂದನಾರ್ಪಣೆಯನ್ನು ವಂಶಿ ನೆರವೇರಿಸಿದರು. ಪ್ರತಿಕ್ಷಾ ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ನಿರೂಪಣೆಯನ್ನು ಶಿಕ್ಷಕಿ ಚೈತ್ರ ಯು. ಭಂಡಾರಿ ಅವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery