Call Us :
+91 96860 00046
+91 9108043552
info@shakthi.edu.in

Kannada Rajyotsava celebration at Shakthi 

Mangalore November 1: Shakthi Pre School, Shakthi Residential School and Shakthi PU College of Shakthinagar celebrated the Kannada Rajyotsava program in a grand manner. Mangalore University Evening College Principal, Dr. Subhasini Srivatsa inaugurated the program by lighting the lamp. She then spoke that Karnataka is a beautiful state. Here Kannadigas give opportunity to people of all languages to live in harmony.

All students should work towards teaching Kannada to people from other states in the coming days. Through that, she called to preserve and develop the mother tongue. She said that our love of language should not be only during Rajyotsava days, it should be throughout our life. She recalled that many writers worked for the survival of Kannada.

7th grade student Ms. Manasvi spoke on the significance of the day. The winners of various competitions organized during the Kannada week were felicitated. The program was presided over by the Administrator of the organization. Dr. K.C Naik. He said that when we speak in Kannada, our language can survive. Though the school instructs in English medium he told us to speak our mother tongue as much as possible at home.

The students of Shakthi School gave a message of awareness among the students to promote Kannada language and culture by organizing various cultural programs and exhibiting portraits of writers who have worked hard for the Kannada nation. On the same occasion, Vinayananda Jogi, Head of Maintenance Department of Shakthi Institution, who won the DK District Kannada Rajyotsava award, was honored.

On this occasion, Chief Advisor Ramesh K. , Shakthi PU College Principal Prithviraj, Shakthi Residential School Principal Vidya Kamath G., Shakthi Pre School Coordinator Patricia Pinto were present. Spoorthi and team sang the Nadageethe, Sachin Nandan gave the welcome address, Geshna proposed the vote of thanks, and Nihal was the master of ceremony.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು ನ. ೧: ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯವು ಸುಂದರವಾಗಿರುವ ರಾಜ್ಯ. ಇಲ್ಲಿ ಎಲ್ಲಾ ಭಾಷೆಯ ಜನರಿಗೂ ಸಾಮರಸ್ಯದಿಂದ ಬದುಕಲು ಅವಕಾಶವನ್ನು ಕನ್ನಡಿಗರು ಕೊಡುತ್ತಾರೆ. ನಾವೆಲ್ಲ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಬೇರೆ ರಾಜ್ಯದಿಂದ ಬಂದವರಿಗೂ ಕನ್ನಡವನ್ನು ಕಲಿಸುವ ಕೆಲಸ ಮಾಡಬೇಕು. ಆ ಮೂಲಕ ತಾಯಿ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕೇವಲ ರಾಜ್ಯೋತ್ಸವ ದಿನಗಳಲ್ಲಿ ಮಾತ್ರ ನಮ್ಮ ಭಾಷಾಭಿಮಾನ ಇರಬಾರದು ಅದು ನಮ್ಮ ಜೀವನ ಪೂರ್ತಿ ಇರಬೇಕೆಂದು ಹೇಳಿದರು. ಕನ್ನಡದ ಉಳಿವಿಕೆಗಾಗಿ ಅನೇಕ ಸಾಹಿತಿಗಳು ಕೆಲಸ ಮಾಡಿರುವುದನ್ನು ಸ್ಮರಿಸಿದರು.

ಕಾರ್ಯಕ್ರಮದ ಕುರಿತಂತೆ ೭ನೇ ತರಗತಿ ವಿದ್ಯಾರ್ಥಿನಿ ಕು. ಮನಸ್ವಿ ಇವರು ಮಾತನಾಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರ ಬಹುಮಾನ ವಿತರಣೆಯು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ಮಾತನಾಡಿ ನಾವು ಕನ್ನಡದಲ್ಲಿ ಮಾತನಾಡಿದಾಗ ನಮ್ಮ ಭಾಷೆ ಉಳಿಯಲು ಸಾಧ್ಯ. ಇವತ್ತು ಶಾಲೆ ಆಂಗ್ಲ ಮಾಧ್ಯಮದಲ್ಲಿದ್ದರು ನಾವು ನಮ್ಮ ಮನೆಯಲ್ಲಿ ಸಾಧ್ಯವಾದಷ್ಟು ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕೆಂದು ಹೇಳಿದರು. ಶಕ್ತಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡಿಗೆ ಶ್ರಮಿಸಿರುವ ಸಾಹಿತಿಗಳ ಭಾವಚಿತ್ರದ ಪ್ರದರ್ಶಿನಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿಯ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಕ್ತಿ ವಿದ್ಯಾ ಸಂಸ್ಥೆಯ ನಿರ್ವಹಣೆ ವಿಭಾಗದ ಮುಖ್ಯಸ್ಥರಾದ ವಿನಯಾನಂದ ಜೋಗಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ರಮೇಶ ಕೆ. , ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಸ್ಪೂರ್ತಿ ಮತ್ತು ಬಳಗ, ಸ್ವಾಗತವನ್ನು ಸಚಿನ್‌ನಂದನ್ ಹಾಗೂ ಧನ್ಯವಾದ ಸಮರ್ಪಣೆಯನ್ನು ಗೇಷ್ಮ, ನಿರೂಪಣೆಯನ್ನು ನಿಹಾಲ್‌ರವರು ನೆರವೇರಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery