Call Us :
+91 96860 00046
+91 9108043552
info@shakthi.edu.in

Let the teacher have the ability to correct the mistakes of the students – Yuvraj Jain

Mangalore D17: Yuvraj Jain, President of Excellent Papu College, inaugurated the anniversary of Shakti Residential School, Shaktinagar by lighting the lamp. Then he said that when the parents of the children make mistakes in their childhood, they should correct them. If he is not correct in it then the teacher should have the ability to correct the mistake of that student.

Otherwise, he will not be able to fit in the society after his education. He called on the parents to stand with the school teachers to fix this. We want to guide the student in school in addition to studies and other extracurricular activities. It should be the school’s duty to have the ability to think about the progress of the country.

Shakti Vidya Institute is working to impart sanskar among students. It is commendable. Sanjeet Naik, the secretary of the organization presided over the program and said that Shakti Vidya Institute is trying to bring students to the forefront in the field of education, culture, service and sports. As a result of this, today students are identifying themselves at the state level, he said.

On this occasion, the administrator of the organization Dr. K.C Naik, Principal Counsel Ramesh K. were present. Teacher Nazreen welcomed the program, Vidya Kamath G., principal of the institute read the report, Prithviraj, Principal of Shakti P.O. College gave vote of thanks and Chaitra U Bhandari, teacher presented the program. After the assembly program, a cultural entertainment program was performed by the students of the institute.

ವಿದ್ಯಾರ್ಥಿಗಳ ತಪ್ಪನ್ನು ತಿದ್ದುವ ಗುಣವನ್ನು ಶಿಕ್ಷಕರು ಹೊಂದಲಿ – ಯುವರಾಜ್ ಜೈನ್

ಮಂಗಳೂರು ಡಿ. 17 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಎಕ್ಸ್‌ಲೆಂಟ್ ಪಪೂ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಕ್ಕಳ ಪೋಷಕರು ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡಿದಾಗ ಅವರನ್ನು ತಿದ್ದಿ ಸರಿಪಡಿಸಬೇಕು. ಒಂದು ವೇಳೆ ಅವನು ಅದರಲ್ಲಿ ಸರಿಯಾಗದಿದ್ದಾಗ ಮುಂದೆ ಶಿಕ್ಷಕರು ಆ ವಿದ್ಯಾರ್ಥಿಯ ತಪ್ಪನ್ನು ತಿದ್ದುವ ಗುಣವನ್ನು ಹೊಂದಬೇಕು. ಇಲ್ಲವಾದಲ್ಲಿ ಅವನ ವಿದ್ಯಾಭ್ಯಾಸದ ನಂತರ ಸಮಾಜದಲ್ಲಿ ಸರಿಯಾಗಲು ಸಾಧ್ಯವಿಲ್ಲ. ಇದನ್ನು ಸರಿಪಡಿಸಲು ಪೋಷಕರು ಶಾಲೆಯ ಶಿಕ್ಷಕರ ಜೊತೆ ನಿಲ್ಲಬೇಕೆಂದು ಕರೆ ನೀಡಿದರು. ನಾವು ಶಾಲೆಯಲ್ಲಿ ವಿದ್ಯಾರ್ಥಿಗೆ ಓದುವ ಜೊತೆಗೆ ಇತರೆ ಪಠ್ಯೇತರ ಚಟುವಟಿಕೆಯ ಮಾರ್ಗದರ್ಶನ ನೀಡಬೇಕೆಂದರು. ದೇಶದ ಪ್ರಗತಿಯ ಬಗ್ಗೆ ಯೋಚನೆ ಮಾಡುವ ಗುಣವನ್ನು ಹೊಂದುವಂತೆ ಮಾಡುವ ಕರ್ತವ್ಯ ಶಾಲೆಯದಾಗಬೇಕು. ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌ ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳನ್ನು ಶಿಕ್ಷಣ, ಸಂಸ್ಕಾರ, ಸೇವಾ ಮನೋಭಾವನೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಪರಿಣಾಮವಾಗಿ ಇಂದು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕಿ ನಝ್ರೀನ್ ಇವರು, ವರದಿ ವಾಚನವನ್ನು ಸಂಸ್ಥೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಧನ್ಯವಾದವನ್ನು ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪೃಥ್ವಿರಾಜ್ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಚೈತ್ರ ಯು ಭಂಡಾರಿ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನೆರವೇರಿತು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery