Mangaluru 12.01.2023 : “Through Education one can develop self esteem, confidence and values that help us to equip for the struggle for life, strength of character, a spirit of humanity and the courage of a lion” said Sri Gopinath Rao Ex-serviceman, Indian Army and the Managing Committee member, Ramakrishna Mission, Mangaluru addressing the students on the 161st Birth Anniversary of Swami Vivekananda also the National Youth Day Celebration at Shakthi.
“Knowledge is nothing but finding unity in the midst of diversity. Education both moral and intellectual must be focussed so that it would help one to form character, increase the strength of mind and expand the intellect. There are three things that open up when required; umbrella, parachute and the mind. Have an open mindedness and be at the receivers end” he concluded.
Vidya Kamath G, Principal Shakthi Residential School in her Presidential address stated that knowingly or unknowingly students at Shakthi are heading towards becoming worthy citizens of this nation by imbibing the culture, discipline and the values made available in this institution.
Prathviraj, Principal Shakthi PU College was present on the dais. Smisha Vinil, Social Science teacher proposed the welcome address & compered the event. Teaching and Non Teaching staff along with the students of the School and the College were the recipients of this session.
ಶತಮಾನಗಳ ನಂತರವೂ ಜನರು ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತಾರೆ ಏಕೆಂದರೆ ಅವರು ಭವ್ಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ – ಶ್ರೀ ಗೋಪಿನಾಥ್ ರಾವ್
ಮಂಗಳೂರು ಜ. 12 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ಮಾಜಿ ಸೈನಿಕ ಶ್ರೀ ಗೋಪಿನಾಥ್ ರಾವ್ ವ್ಯವಸ್ಥಾಪನಾ ಸಮಿತಿ ಸದಸ್ಯರು, ರಾಮಕೃಷ್ಣ ಮಿಷನ್, ಮಂಗಳೂರು ಅವರು ಮಾತನಾಡಿ ಶಿಕ್ಷಣದ ಮೂಲಕ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಅದು ಜೀವನದ ಹೋರಾಟ, ಚಾರಿತ್ರ್ಯದ ಶಕ್ತಿ, ಮಾನವೀಯತೆಯ ಮನೋಭಾವ ಮತ್ತು ಸಿಂಹದ ಧೈರ್ಯವನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಜ್ಞಾನವು ವೈವಿಧ್ಯತೆಯ ನಡುವೆ ಏಕತೆಯನ್ನು ಕಂಡುಕೊಳ್ಳುವುದು. ಶಿಕ್ಷಣವು ನೈತಿಕ ಮತ್ತು ಬೌದ್ಧಿಕ ಎರಡನ್ನು ಕೇಂದ್ರೀಕರಿಸಬೇಕು. ಇದರಿಂದ ಅದು ವ್ಯಕ್ತಿಯನ್ನು ರೂಪಿಸಲು, ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಬುದ್ಧಿಶಕ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಅಗತ್ಯವಿರುವಾಗ ತೆರೆದುಕೊಳ್ಳುವ ಮೂರು ವಿಷಯಗಳಿವೆ – ಛತ್ರಿ, ಪ್ಯಾರಾಶೂಟ್ ಮತ್ತು ಮನಸ್ಸು. ಮುಕ್ತ ಮನೋಭಾವವನ್ನು ಹೊಂದಿರಿ ಮತ್ತು ಎಲ್ಲವನ್ನೂ ಸ್ವೀಕರಿಸುವವರಾಗಿ ಎಂದು ಅವರು ಹೇಳಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ಅಧ್ಯಕ್ಷೀಯ ಭಾಷಣದಲ್ಲಿ ಶಕ್ತಿಯ ವಿದ್ಯಾರ್ಥಿಗಳು ತಿಳಿದೋ ತಿಳಿಯದೆಯೋ ಈ ಸಂಸ್ಥೆಯಲ್ಲಿ ಲಭ್ಯವಿರುವ ಸಂಸ್ಕ್ರತಿ, ಶಿಸ್ತು ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡು ಈ ರಾಷ್ಟ್ರದ ಯೋಗ್ಯ ನಾಗರಿಕರಾಗುವತ್ತ ಸಾಗುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್ ಅವರು ಉಪಸ್ಥಿತರಿದ್ದರು ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸಮಾಜ ವಿಜ್ಞಾನ ಅಧ್ಯಾಪಕಿ ಸ್ಮಿಶಾ ವಿನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಎಲ್ಲಾ ಬೋಧಕ – ಭೋಧಕೇತರ ಸಿಬ್ಬಂದಿಗಳು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.