“An Awareness on the duties of a citizen is the need of the hour. Republic Day is one of India’s greatest successes and achievements. It is one of the reasons why people of India can practice their democratic rights and responsibilities. One must remember the sacrifices made by our ancestors and the freedom fighters to build a nation that we are proud of. Today, if we are safe at home it is because of the people guarding us at the borders said Dr Yathish Kumar, Associate Professor & Research Guide in the Department of Commerce and Management, University College, Mangaluru also the Naval Commander hoisting the National Flag on the 74th Republic day Celebration at Shakthi Grounds.
“Justice, Liberty, Equality and Fraternity of the preamble give us fundamental values and highlights of the Constitution. Every individual belonging to this nation must be treated equally. As one is conscious of his fundamental Rights one should be aware of his duties too. This festival is celebrated with great pride and must be celebrated for years together. The making of the constitution started much before independence. We required a constitution to conduct our nation in a good manner. Dr Bhim Rao Ambedkar was made chairman of the committee. Our Constitution was ready after 2 years 11 months 18 days. Though the constitution was ready on 26 November 1949 it was adopted on January 26, 1950 and ever since the day is celebrated as Republic Day.
Chief Advisor Ramesh K, Prathviraj, Principal of Shakthi PU College and Vidya Kamath G, Principal of Shakthi residential School were present on the dais. The event began with the National Song , unfurling of the National Flag, National Anthem and the Flag Song by the School Choir led by Sharanappa, Kannada Teacher.
Priyanka Rai compered the event, Madhura B.C introduced the guest. All faculties of Shakthi along with the students were present on this occasion.
ನಾಗರಿಕನ ಕರ್ತವ್ಯಗಳ ಬಗ್ಗೆ ಅರಿವು ಇಂದಿನ ಉದ್ದೇಶವಾಗಿದೆ. ಗಣರಾಜ್ಯೋತ್ಸವವು ಭಾರತದ ಶ್ರೇಷ್ಠ ಯಶಸ್ಸು ಮತ್ತು ಸಾಧನೆಗಳಲ್ಲಿ ಒಂದಾಗಿದೆ. ಭಾರತದ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಪಾಲಿಸಲು ಇದು ಒಂದು ಕಾರಣವಾಗಿದೆ. ನಾವು ಹೆಮ್ಮೆಪಡುವಂತಹ ದೇಶವನ್ನು ನಿರ್ಮಿಸಲು ನಮ್ಮ ಪೂರ್ವಜರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ಇಂದು ನಾವು ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದಕ್ಕೆ ಗಡಿಯಲ್ಲಿ ಕಾವಲು ಕಾಯುತ್ತಿರುವ ಯೋಧರೇ ಕಾರಣ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕ ನೌಕಾದಳದ ಕಮಾಂಡರ್ ಡಾ.ಯತೀಶ್ ಕುಮಾರ್ ಅವರು 74 ನೇ ಗಣರಾಜೋತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಹೇಳಿದರು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ನಮಗೆ ಸಂವಿಧಾನದ ಮೂಲಭೂತ ಮೌಲ್ಯಗಳಾಗಿರುತ್ತದೆ.ಈ ರಾಷ್ಟ್ರದಲ್ಲಿರುವ ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಸಮಾನವಾಗಿ ಪರಿಗಣಿಸಬೇಕು. ಒಬ್ಬನು ತನ್ನ ಮೂಲಭೂತ ಹಕ್ಕುಗಳ ಬಗ್ಗೆ ಜಾಗೃತನಾಗಿರುವುದರಿಂದ ತನ್ನ ಕರ್ತವ್ಯಗಳ ಬಗ್ಗೆಯೂ ತಿಳಿದಿರಬೇಕು. ಆದುದರಿಂದ ಈ ಹಬ್ಬವನ್ನು ಬಹಳ ಹೆಮ್ಮೆಯಿಂದ ಆಚರಿಸಬೇಕು ಹಾಗೂ ಅದೇ ತರ ನಾವು ನಡೆದುಕೊಳ್ಳಬೇಕು. ಸಂವಿಧಾನ ರಚನೆಯು ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭವಾಯಿತು. ನಮ್ಮ ದೇಶವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಸಂವಿಧಾನದ ಅಗತ್ಯವಿದೆ. ಭೀಮ್ ರಾವ್ ಅಂಬೇಡ್ಕರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. 2 ವರ್ಷ 11 ತಿಂಗಳು 18 ದಿನಗಳ ನಂತರ ನಮ್ಮ ಸಂವಿಧಾನ ಸಿದ್ಧವಾಯಿತು. ಸಂವಿಧಾನವು 26 ನವೆಂಬರ್ 1949 ರಂದು ಸಿದ್ಧವಾಗಿದ್ದರೂ ಅದನ್ನು ಜನವರಿ 26, 1950 ರಂದು ಅಂಗೀಕರಿಸಲಾಯಿತು ಮತ್ತು ಆ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ವೇದಿಕೆಯಲ್ಲಿ ಮುಖ್ಯ ಸಲಹೆಗಾರ ರಮೇಶ್ ಕೆ, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ನೇತೃತ್ವದ ಶಾಲಾ ವೃಂದದವರಿಂದ ರಾಷ್ಟ್ರಗೀತೆ, ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ ಹಾಗೂ ಧ್ವಜ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಪ್ರಿಯಾಂಕಾ ರೈ ಕಾರ್ಯಕ್ರಮ ನಿರೂಪಿಸಿದರು, ಮಧುರಾ ಬಿ.ಸಿ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಶಕ್ತಿ ಸಂಸ್ಥೆಯ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.